ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಕಟ್ಟಡಕ್ಕೆ ಸ್ಥಳ ಪರಿಶೀಲನೆ

Last Updated 23 ಸೆಪ್ಟೆಂಬರ್ 2011, 5:15 IST
ಅಕ್ಷರ ಗಾತ್ರ

ರಾಮದುರ್ಗ: ಮಲಪ್ರಭಾ ಪ್ರವಾಹ ಮತ್ತು ಅತಿವೃಷ್ಟಿಯಿಂದ ಮನೆ ಮಠ ಕಳೆದುಕೊಂಡ ನಿರಾಶ್ರಿತರ ಕಾಲೊನಿ ಯಲ್ಲಿ ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ಶಾಲಾ ಕಟ್ಟಡ ನಿರ್ಮಿಸಲು ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳ ತಂಡ ಗುರುವಾರ ಸ್ಥಳ ಪರಿಶೀಲನೆ ನಡೆಸಿತು.

ನಿರಾಶ್ರಿತರ ಮನೆಗಳ ಸಮೀಪದಲ್ಲಿ ಶಾಲೆ ನಿರ್ಮಾಣಕ್ಕೆ ಭೂಮಿಯಲ್ಲಿ ಹೆಚ್ಚಿನ ಪಾಯಾ ಅಗೆಯಬೇಕಾಗುತ್ತದೆ. ಸರ್ವ ಶಿಕ್ಷಣ ಅಭಿಯಾನ ಯೋಜನೆ ಯಡಿ ಮಂಜೂರಾಗಿರುವ ಹಣದಲ್ಲಿ ಸಂಪೂರ್ಣ ಕಟ್ಟಡ ನಿರ್ಮಿಸಲು ಅಸಾಧ್ಯ ವಾದ ಕೆಲಸ. ಬೇರೆ ಸ್ಥಳವನ್ನು ಶಾಲೆಗಾಗಿ ನೀಡಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಎಲ್. ಭಜಂತ್ರಿ ಆಕ್ಷೇಪಿಸಿದರು.

ಮನೆಗಳು ಇರುವ ಕಡೆಗಳಲ್ಲಿಯೇ ಶಾಲೆ ನಿರ್ಮಿಸಿದರೆ ಮಕ್ಕಳಿಗೆ ಅನುಕೂಲವಾಗುತ್ತದೆ. ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗಳಿಗೆ ಕರೆ ತರುವುದು ಸುಲಭ ವಾಗುತ್ತದೆ. ಈ ಪ್ರದೇಶದಲ್ಲಿ ಶಾಲೆ ನಿರ್ಮಿಸಲು ಅನುದಾನದ ಕೊರತೆ ಎದುರಾದರೆ ಜಿಲ್ಲಾ ಪಂಚಾಯಿತಿಯಿಂದ ಹೆಚ್ಚುವರಿ ಅನುದಾನವನ್ನು ಬಿಡುಗಡೆ ಗೊಳಿಸಲು ಪ್ರಯತ್ನಿಸುವುದಾಗಿ ಜಿ.ಪಂ.  ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ರತ್ನಾ ಯಾದವಾಡ, ಹೇಳಿದರು.

ಗ್ರಾಮದ ಶಾಲೆ ಪದೇ ಪದೇ ಜಲಾವೃತಗೊಂಡು ಮಕ್ಕಳ ಅಭ್ಯಾಸಕ್ಕೆ ತೊಂದರೆಯಾಗುತ್ತದೆ. ದೂರದ ಸ್ಥಳದಲ್ಲಿ ಶಾಲೆ ನಿರ್ಮಿಸಿದರೆ ಮಕ್ಕಳು ಶಾಲೆಗೆ ಹೋಗುವುದು ಕಠಿಣ ವಾಗುವುದು. ನಿರಾಶ್ರಿತರ ಮನೆಗಳ ಪಕ್ಕದಲ್ಲಿಯೇ ಶಾಲೆ ನಿರ್ಮಿಸಿ ಸಮಸ್ಯೆ ನಿವಾರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ನಿಯೋಜಿತ ಶಾಲಾ ಕಟ್ಟಡದ ಸುತ್ತ ಸ್ವಚ್ಛತೆಗೆ ಆದ್ಯತೆ ನೀಡಬೇಕು.  ಮಕ್ಕಳಿಗೆ ಆಟದ ಮೈದಾನ ನಿರ್ಮಿಸಿ ಮಕ್ಕಳನ್ನು ಶಾಲೆಗೆ ಬರುವಂತೆ ವಾತಾವರಣ ನಿರ್ಮಿಸಬೇಕೆಂದು.
 
ನಿಯೋಜಿತ ಶಾಲೆಯ ಸುತ್ತಲೂ ಒಳ್ಳೆಯ ವಾತಾ ವರಣ ನಿರ್ಮಾಣಕ್ಕೆ ಒತ್ತು ನೀಡಬೇ ಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ತಾ.ಪಂ. ಅಧ್ಯಕ್ಷೆ ಮಂಜುಳಾ ದೇವರಡ್ಡಿ, ಉಪಾಧ್ಯಕ್ಷೆ ಲಲಿತಾ ಪಾಟೀಲ, ಬಿಇಓ ಎಸ್. ಎಲ್. ಭಜಂತ್ರಿ, ಶಂಕರ ಲಮಾಣಿ, ಸ್ಥಳ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT