ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಕೊಠಡಿ ಶಿಥಿಲ: ಮಕ್ಕಳ ಆತಂಕ

Last Updated 17 ಸೆಪ್ಟೆಂಬರ್ 2011, 8:50 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಥಿಲಾವಸ್ಥೆ ತಲುಪಿರುವ ಕೊಠಡಿಗಳ ದುರಸ್ತಿಗೆ ಶಿಕ್ಷಣ ಇಲಾಖೆ ಮುಂದಾಗಿಲ್ಲ. ಹೀಗಾಗಿ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ತೊಂದರೆ ಅನುಭವಿಸುವಂತಾಗಿದೆ.

1ರಿಂದ 7ನೇ ತರಗತಿವರೆಗೆ 167 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಯಲ್ಲಿ 12 ಕೊಠಡಿಗಳಿದ್ದು, 7 ಕೊಠಡಿ ಮಾತ್ರ ಸುಸ್ಥಿತಿಯಲ್ಲಿವೆ. ಉಳಿದ 5 ಕೊಠಡಿ ದುಃಸ್ಥಿತಿಯಲ್ಲಿವೆ. ಸಮರ್ಪಕ ನಿರ್ವಹಣೆ ಇಲ್ಲದೇ ಬೀಳುವ ಹಂತದಲ್ಲಿವೆ. ಅವುಗಳಲ್ಲಿ 3 ಕೊಠಡಿ ಸಂಪೂರ್ಣ ಶಿಥಿಲಾವಸ್ಥೆ ತಲುಪಿವೆ. ಇದರ ಪರಿಣಾಮ ಶಿಕ್ಷಕರು ಪಕ್ಕದ ಕೊಠಡಿಯಲ್ಲಿ ಆತಂಕದಿಂದ ಪಾಠ ಮಾಡುವಂತಾಗಿದೆ.

ಶಾಲಾ ಕೊಠಡಿಗಳು ಇಲ್ಲಿಯವರೆಗೆ ದುರಸ್ತಿ ಕಂಡಿಲ್ಲ. ಕಿಟಕಿ, ಬಾಗಿಲು ಭದ್ರವಿಲ್ಲ. ಮೇಲ್ಛಾವಣಿ ಕೆಳಕ್ಕೆ ಬಾಗಿದ್ದು ಯಾವುದೇ ಸಮಯದಲ್ಲಿ ಕುಸಿದು ಬೀಳುವ ಸಂಭವವಿದೆ.

ಮಳೆ, ಗಾಳಿಗೆ ಹೆಂಚುಗಳು ಹಾರಿ ಹೋಗುತ್ತಿವೆ. ಮಳೆ ನೀರು ಗೋಡೆಗಳ ಮೂಲಕ ಕೊಠಡಿಯೊಳಗೆ ಪ್ರವೇಶಿಸುತ್ತಿದ್ದು, ಸ್ವಲ್ಪಮಟ್ಟಿಗೆ ಗಟ್ಟಿಯಾಗಿರುವ ಕೊಠಡಿಗಳಿಗೂ ಕಂಟಕ ಎದುರಾಗಿದೆ.

ಶಿಥಿಲಗೊಂಡಿರುವ ಶಾಲಾ ಕೊಠಡಿ ನೆಲಸಮಗೊಳಿಸಿ ಹೊಸದಾಗಿ ಕೊಠಡಿ ನಿರ್ಮಾಣ ಮಾಡುವ ಸಂಬಂಧ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿ.ಪಂ. ಆಡಳಿತಕ್ಕೂ ಮನವಿ ಮಾಡಲಾಗಿದೆ. ಆದರೆ, ಯಾವುದೇ ಕ್ರಮಕೈಗೊಂಡಿಲ್ಲ. ಪ್ರಸ್ತುತ ಶಿಥಿಲಗೊಂಡಿರುವ ಕೊಠಡಿಗಳು ಕುಸಿದರೆ ಪಕ್ಕದ ಕೊಠಡಿಗಳಲ್ಲಿರುವ ಮಕ್ಕಳಿಗೆ ತೊಂದರೆಯಾಗಿದೆ. ಕೂಡಲೇ, ಹೊಸದಾಗಿ ಕೊಠಡಿ ನಿರ್ಮಾಣಕ್ಕೆ ಸಂಬಂಧಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳು ಕ್ರಮಕೈಗೊಳ್ಳಬೇಕು ಎಂಬುದು ಪೋಷಕರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT