ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಕ್ರಿಕೆಟ್ ಟೂರ್ನಿ:ಬೆಥನಿ ಪ್ರೌಢಶಾಲೆ ಅನರ್ಹ

Last Updated 6 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಯೋಮಿತಿ ಮೀರಿದ ಆಟಗಾರರನ್ನು ಆಡಿಸಿದ ಆರೋಪದ ಕಾರಣ ಬೆಥನಿ ಪ್ರೌಢಶಾಲೆ ತಂಡವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಆಶ್ರಯದ ಬಿ.ಟಿ.ರಾಮಯ್ಯ ಶೀಲ್ಡ್‌ಗಾಗಿನ 14 ವರ್ಷದೊಳಗಿನವರ ಅಂತರ ಶಾಲಾ ಟೂರ್ನಿಯಿಂದ ಹೊರಹಾಕಲಾಗಿದೆ.

ಕ್ವಾರ್ಟರ್ ಫೈನಲ್ ವೇಳೆ ಈ ಅಂಶ ಬೆಳಕಿಗೆ ಬಂದಿದೆ. ಈ ಬಗ್ಗೆ ಎದುರಾಳಿ ಬಿಷಪ್ ಕಾಟನ್ಸ್ ಶಾಲಾ ತಂಡ ಕೆಎಸ್‌ಸಿಎಗೆ ದೂರು ನೀಡಿತ್ತು. ಆಗ ವೆಂಕಟೇಶ್ ಪ್ರಸಾದ್ ಸಾರಥ್ಯದ ಕ್ರಿಕೆಟ್ ಸಮಿತಿ ಬೆಥನಿ ಶಾಲೆ  ತಂಡವನ್ನು ಹೊರಹಾಕಲು ತೀರ್ಮಾನಿಸಿದೆ.

`ಹೌದು, ಬಿಷನ್ ಕಾಟನ್ಸ್ ತಂಡ ನೀಡಿದ ದೂರನ್ನು ಪರಿಶೀಲಿಸಿದಾಗ ವಯೋಮಿತಿ ಮೀರಿದ ಆಟಗಾರರಿದ್ದದ್ದು ನಿಜ. ಮೂರು ಮಂದಿಯನ್ನು ಗುರುತಿಸಲಾಗಿದೆ. ಈ ವಿಷಯ ಭಾನುವಾರ ನಮ್ಮ ಗಮನಕ್ಕೆ ಬಂದಿದೆ~ ಎಂದು ಕೆಎಸ್‌ಸಿಎ ಅಧಿಕೃತ ಮೂಲಗಳು `ಪ್ರಜಾವಾಣಿ~ಗೆ ಖಚಿತಪಡಿಸಿವೆ.

ಬಿಷನ್ ಕಾಟನ್ ಹಾಗೂ ಬೆಥನಿ ಶಾಲೆ ತಂಡಗಳ ನಡುವಿನ ಈ ಪಂದ್ಯ ಡ್ರಾ ಆಯಿತು. ಮೊದಲ ಇನಿಂಗ್ಸ್ ಮುನ್ನಡೆ ಆಧಾರದ ಮೇಲೆ ಬೆಥನಿ ತಂಡ ಸೆಮಿಫೈನಲ್ ಪ್ರವೇಶಿಸುವ ಅವಕಾಶ ಹೊಂದಿತ್ತು. ಆದರೆ ವಯೋಮಿತಿ ಮೀರಿದ ವಿಷಯದ ವಿವಾದ ಕಾರಣ ಬಿಷಪ್ ಕಾಟನ್ಸ್ ಸೆಮಿಫೈನಲ್ ಪ್ರವೇಶಿಸಿತು.

ಈ ಟೂರ್ನಿಯಲ್ಲಿದ್ದ ಫ್ರಾಂಕ್ ಅಂಥೋಣಿ ಪಬ್ಲಿಕ್ ಶಾಲೆ, ಹೋಲಿ ಸೇಂಟ್ ಇಂಗ್ಲಿಷ್ ಶಾಲೆ ಹಾಗೂ ಸೇಂಟ್ ಜೋಸೆಫ್ಸ್ ಇಂಡಿಯನ್ ಹೈಸ್ಕೂಲ್ ತಂಡಗಳು ಕೂಡ ನಾಲ್ಕರ ಘಟ್ಟ ತಲುಪಿವೆ.

ವಿವಾದಿತ ಪಂದ್ಯದ ಫಲಿತಾಂಶ: ಬೆಥನಿ ಪ್ರೌಢಶಾಲೆ: ಮೊದಲ   ಇನಿಂಗ್ಸ್: 83.1 ಓವರ್‌ಗಳಲ್ಲಿ 262 (ಅಮೆಯ್ 34, ಆದಿತ್ಯ ರೆಡ್ಡಿ 55, ಕುಶಾಲ್ 63, ಡಿ.ನರೀನ್ 30, ರಾಹುಲ್ ಪಿಂಟೋ 29; ಜೆರಿನ್ ರಾಯ್ 75ಕ್ಕೆ2, ಸಿ.ಆರ್.ಅಯ್ಯಪ್ಪ 36ಕ್ಕೆ3, ಎಸ್.ಅಕ್ಷಯ್ ಕೌಲ್ 59ಕ್ಕೆ4) ಹಾಗೂ 56 ಓವರ್‌ಗಳಲ್ಲಿ 172 (ಅಮೆಯ್ 21, ಕುಶಾಲ್ 32, ರಾಹುಲ್ ಪಿಂಟೊ 20, ಕುನಾಲ್ 41; ಸಿ.ಆರ್. ಅಯ್ಯಪ್ಪ 24ಕ್ಕೆ2, ಕುಶಾಲ್ 50ಕ್ಕೆ2, ಎಸ್.ಅಕ್ಷಮ್ ಕೌಲ್ 63ಕ್ಕೆ5); ಬಿಷಪ್ ಕಾಟನ್ಸ್ ಬಾಲಕ ಶಾಲೆ: 70.3 ಓವರ್‌ಗಳಲ್ಲಿ 191 (ಜೆ.ಚಿರಾಗ್ 36, ಎಸ್.ಕಾನಿಷ್ಕ 27, ಸಕ್ಷಮ್ ಕೌಲ್ 23, ಪ್ರಜೀತ್ ತಿಮ್ಮಯ್ಯ 25, ಎಸ್.ಕುನಾಲ್ 40ಕ್ಕೆ2, ಆದಿತ್ಯ ರೆಡ್ಡಿ 45ಕ್ಕೆ2, ರಾಹುಲ್ ಪಿಂಟೊ 43ಕ್ಕೆ3). ಫಲಿತಾಂಶ: ಡ್ರಾ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT