ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಹಾಕಿ ಟೂರ್ನಿ 4ರಿಂದ

Last Updated 3 ಅಕ್ಟೋಬರ್ 2012, 6:15 IST
ಅಕ್ಷರ ಗಾತ್ರ

ಬಾಗಲಕೋಟೆ: ನಗರದ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಶತಮಾನೋತ್ಸವದ ಅಂಗವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಬಸವೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ವಿಭಾಗ ಮತ್ತು ರಾಜ್ಯಮಟ್ಟದ ಹಾಕಿ ಟೂರ್ನಿ ಏರ್ಪಡಿಸಲಾಗಿದೆ ಎಂದು ಶಾಸಕ ವೀರಣ್ಣ ಚರಂತಿಮಠ ತಿಳಿಸಿದರು. 

 ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ 4,5 ಮತ್ತು 12ರಂದು ವಿಭಾಗ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಟೂರ್ನಿ ನಡೆಯಲಿದೆ. 8,9,10 ಮತ್ತು 12ರಂದು ಪ್ರೌಢಶಾಲಾ ವಿಭಾಗದ ರಾಜ್ಯಮಟ್ಟದ ಹಾಕಿ ಟೂರ್ನಿ ಆಯೋಜಿಸಲಾಗಿದೆ ಎಂದು ತಿಳಿಸಿದರು. 

 ಈಗಾಗಲೇ ಹಾಕಿ ಟೂರ್ನಿಗೆ ಮೈದಾನವನ್ನು ಸಿದ್ದಪಡಿಸಲಾಗಿದೆ, ಎಲ್ಲ ಕ್ರೀಡಾಪಟುಗಳಿಗೆ ಊಟ ಮತ್ತು ವಸತಿ ಸೌಲಭ್ಯ ಕಲ್ಪಿಸಲಾಗಿದೆ ಎಂದರು.

ಪ್ರೌಢಶಾಲಾ ಬಾಲಕರ 9, ಬಾಲಕಿಯರ 9  ಹಾಗೂ ಪಾಥಮಿಕ ಬಾಲಕರ 9, ಬಾಲಕಿಯರ 9 ತಂಡಗಳ ಒಟ್ಟು 612 ಕ್ರೀಡಾಪಟುಗಳು ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ.

ರಾಜ್ಯಮಟ್ಟದ ಹಾಕಿ ಪಂದ್ಯಾಟದಲ್ಲಿ 7 ಪ್ರೌಢಶಾಲಾ ಬಾಲಕರ ತಂಡ, ಬಾಲಕೀಯರ 5 ತಂಡ, ಪ್ರಾಥಮಿಕ ಬಾಲಕರ 5 ತಂಡಗಳು ಹಾಗೂ 5 ಬಾಲಕಿಯರ ತಂಡಗಳು ಭಾಗವಹಿಸಲಿದ್ದು, ಒಟ್ಟು 374 ಕ್ರೀಡಾಪಟುಗಳು ಪಾಲ್ಗೊಳ್ಳುವರು ಎಂದರು.

ಉದ್ಘಾಟನೆ: ಇದೇ 4ರಂದು ನಗರದ ಬಸವೇಶ್ವರ ಕಲಾ ಮೈದಾನದಲ್ಲಿ ನಡೆಯುವ ಟೂರ್ನಿಗೆ ಜಿಲ್ಲಾ ಸಚಿವ ಗೋವಿಂದ ಕಾರಜೋಳ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಲಿದ್ದಾರೆ.  

 ಸಚಿವ ಮುರುಗೇಶ ನಿರಾಣಿ, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಎಸ್.ಆರ್. ಪಾಟೀಲ, ಸರ್ಕಾರದ ಮುಖ್ಯ ಸಚೇತಕ ಸಿದ್ದು ಸವದಿ, ಸಂಸದ ಪಿ.ಸಿ. ಗದ್ದಿಗೌಡರ, ಜಿ.ಪಂ.ಅಧ್ಯಕ್ಷೆ ವೀಣಾ ಎಮ್ಮಿ, ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ದೊಡ್ಡನಗೌಡ ಪಾಟೀಲ, ಶ್ರಿಕಾಂತ ಕುಲಕರ್ಣಿ, ಜಿ.ಎಸ್.ನ್ಯಾಮಗೌಡ, ನಾರಾಯಣಸಾ ಭಾಂಡಗೆ, ಅರುಣ ಶಹಾಪುರ, ಮಹಾಂತೇಶ ಕೌಜಲಗಿ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ,

ಜಿ.ಪಂ.ಉಪಾಧ್ಯಕ್ಷ ದುಂಡಪ್ಪ ಲಿಂಗರಡ್ಡಿ, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ, ಉಪಾಧ್ಯಕ್ಷ ರಾಜಶೇಖರ ಮುದೇನೂರ, ನಗರಸಭೆ ಉಪಾಧ್ಯಕ್ಷ ಶರಣಪ್ಪ ಗುಳೇದ, ಜಿಲ್ಲಾಧಿಕಾರಿ ಎ.ಎಂ.ಕುಂಜಪ್ಪ, ಸಿಇಓ ಎಸ್.ಜಿ. ಪಾಟೀಲ, ವೀರಣ್ಣ ಹಲಕುರ್ಕಿ, ಶಿಕ್ಷಣ ಇಲಾಖೆ ಸಹ ನಿರ್ದೇಶಕ ಜಯಕುಮಾರ, ಡಿಡಿಪಿಐ ಎ.ಎಂ. ಮಡಿವಾಳರ, ಬಿಟಿಡಿಎ ಸದಸ್ಯ ಸಂತೋಷ ಹೋಕ್ರಾಣಿ  ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT