ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಿನಿ, ಮಾಲಿನಿ ನೃತ್ಯಾರ್ಪಣ

Last Updated 28 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಸ್ವಪ್ತಸ್ವರ ಆರ್ಟ್ಸ್ ಮತ್ತು  ಕ್ರಿಯೇಷನ್ಸ್:  ಭಾನುವಾರ ಶಾಲಿನಿ ಮತ್ತು ಮಾಲಿನಿ ಪರಮೇಶ್ ಅವರ ಭರತನಾಟ್ಯ ರಂಗಪ್ರವೇಶ. ಸಂಗೀತ ಮತ್ತು ನಟುವಾಂಗ: ಮಂಜುಳಾ ಪರಮೇಶ್. ಮೃದಂಗ: ಪಿ. ಜನಾರ್ದನ ರಾವ್. ವಯಲಿನ್: ಹೇಮಂತ್ ಕುಮಾರ್. ಕೊಳಲು: ನರಸಿಂಹ ಮೂರ್ತಿ. ಖಂಜಿರ ಮತ್ತು ಮೋರ್ಚಿಂಗ್: ಶ್ರೀಹರಿ.

ಶಾಲಿನಿ ಮತ್ತು ಮಾಲಿನಿ ಸೋದರಿಯರು ಅವರು ನೃತ್ಯ ಕಲಾವಿದೆ ಹಾಗೂ ಸಂಗೀತಗಾರ್ತಿ ಮಂಜುಳ ಪರಮೇಶ್ ಅವರ ಪುತ್ರಿಯರು. ಅವರ ಶಿಷ್ಯೆಯರೂ ಹೌದು. ತಾಯಿಯ ಗರಡಿಯಲ್ಲೇ ಭರತನಾಟ್ಯ ಪ್ರಕಾರದಲ್ಲಿ ಪಳಗಿದ್ದಾರೆ.

ನೃತ್ಯ, ಸಂಗೀತದ ವಾತಾವರಣದಲ್ಲೇ ಬೆಳೆದ ಈ ಸಹೋದರಿಯರಿಬ್ಬರೂ ಬಾಲ್ಯದಿಂದಲೇ ನೃತ್ಯದತ್ತ ಆಕರ್ಷಿತರಾದರು. ನರ್ತಿಸುವ ಪಾತ್ರದೊಳಗೆ ಒಂದಾಗಿ ಅಭಿನಯಿಸುವಂತೆ ತಾಯಿ ನೀಡಿದ ಸಲಹೆಯನ್ನು ಮೈಗೂಡಿಸಿಕೊಂಡು ಆ ನೃತ್ಯ ಪ್ರಕಾರದಲ್ಲಿ ಹಿಡಿತ ಸಾಧಿಸಿದ್ದಾರೆ. ಇಬ್ಬರೂ ಭರತನಾಟ್ಯದಲ್ಲಿ ಸೀನಿಯರ್ ಪೂರೈಸಿದ್ದಾರೆ.
 
ಯುವ ಸೌರಭ, ಚಾಲುಕ್ಯ ಉತ್ಸವ, ಲಕ್ಕುಂಡಿ ಉತ್ಸವ, ಹಂಪಿ ಉತ್ಸವ, ಕದಂಬೋತ್ಸವ, ವಿಶ್ವ ಕನ್ನಡ ಸಮ್ಮೇಳನ ಸೇರಿದಂತೆ ಹಲವು ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಸಪ್ತಸ್ವರದ ಶ್ರೀನಿವಾಸ ಕಲ್ಯಾಣ, ವಚನ ವೈಭವ, ಅಷ್ಟಲಕ್ಷ್ಮಿ ವೈಭವ, ದಶಾವತಾರ, ರಾಮಾಯಣ ದರ್ಶನಂ ಇತ್ಯಾದಿ ರೂಪಕಗಳಲ್ಲಿ ಭಾಗವಹಿಸಿದ್ದಾರೆ.

ಮಾಹಿತಿ ತಂತ್ರಜ್ಞಾನದಲ್ಲಿ ಬಿ.ಇ. ಪದವಿ ಪಡೆದಿರುವ ಶಾಲಿನಿ ಪ್ರಸ್ತುತ ಮಾನವ ಸಂಪನ್ಮೂಲದಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದಾರೆ. ಮಾಲಿನಿ ಭಗವಾನ್ ಮಹಾವೀರ್ ಜೈನ್ ಕಾಲೇಜಿನಲ್ಲಿ ವಾಣಿಜ್ಯ ಪದವಿ ಓದುತ್ತಿದ್ದಾರೆ.

ಈ ಇಬ್ಬರ ಗುರು ಮತ್ತು ತಾಯಿ ಮಂಜುಳಾ ಪರಮೇಶ್ ಸಂಗೀತ ಮತ್ತು ನೃತ್ಯ ಎರಡರಲ್ಲೂ ಪರಿಣತಿ ಸಾಧಿಸಿರುವ ಪ್ರತಿಭೆ. ಇಂಪಾದ ಕಂಠ ಹೊಂದಿರುವ ಮಂಜುಳಾ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಸುಗಮ ಸಂಗೀತ ಕ್ಷೇತ್ರದಲ್ಲೂ ಛಾಪು ಮೂಡಿಸಿದ್ದಾರೆ. ಸ್ವಪ್ತಸ್ವರ ಆರ್ಟ್ಸ್ ಮತ್ತು  ಕ್ರಿಯೇಷನ್ಸ್ ಮೂಲಕ ನೂರಾರು ಯುವ ಪ್ರತಿಭೆಗಳಿಗೆ ತಮ್ಮ ಕಲೆ ಧಾರೆ ಎರೆಯುತ್ತಿದ್ದಾರೆ.

ಅತಿಥಿಗಳು: ಡಾ. ಸಿ. ಸೋಮಶೇಖರ್, ಎಸ್. ಐ. ಭಾವಿಕಟ್ಟಿ, ಹಂಸಲೇಖ, ಡಾ. ಎಂ. ಸೂರ್ಯ ಪ್ರಸಾದ್, ಡಾ. ಬಿ. ಷಡಾಕ್ಷರಪ್ಪ.
ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ.  ಸಂಜೆ:6.30. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT