ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ಮುಖ್ಯಶಿಕ್ಷಕ ಪಾಟೀಲ ಅಮಾನತು

Last Updated 1 ಜೂನ್ 2013, 10:49 IST
ಅಕ್ಷರ ಗಾತ್ರ

ಹಾವೇರಿ: ಶಾಲೆಯ ಸ್ವಚ್ಛತೆಗೆ ಮಕ್ಕ ಳನ್ನು ಬಳಕೆ ಮಾಡಿಕೊಂಡ ತಾಲ್ಲೂಕಿನ ನಾಗನೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಎಚ್.ಎನ್.ಪಾಟೀಲ ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಶುಕ್ರವಾರ ಸೇವೆಯಿಂದ ಅಮಾನತು ಗೊಳಿಸಿ ಆದೇಶ ಹೊರಡಿಸಿದ್ದಾರೆ.

ಶಾಲಾ ಪ್ರಾರಂಭೋತ್ಸವದ ಹಿನ್ನೆಲೆ ಯಲ್ಲಿ ಶಾಲಾ ಸ್ವಚ್ಛತೆಗೆ ಕೂಲಿಗಳನ್ನು ಬಳಸದೇ ಶಾಲಾ ಮಕ್ಕಳಿಂದಲೇ ಶಾಲೆಯ ಕಸ ಗೂಡಿಸುವುದು, ಅದನ್ನು ಬೇರೆಡೆಗೆ ಸಾಗಿಸುವುದು ಅಲ್ಲದೇ ರಜೆಯ ಅವಧಿಯಲ್ಲಿ ಒಡೆದು ಶಾಲೆಯ ಮೇಲ್ಛಾವಣಿ ಹೆಂಚುಗಳನ್ನು ಬದಲಾವಣೆ ಮಾಡಿಸಲಾಗಿದೆ ಎಂಬ ವಿಷಯವನ್ನು  ಮೇ 31 ರಂದು `ಪ್ರಜಾವಾಣಿ' ಪತ್ರಿಕೆ `ಶಾಲೆಗೆ ಬರುವ ಮುನ್ನವೇ ಸ್ವಚ್ಛತೆ ಶಿಕ್ಷೆ' ಎಂಬ ಶೀರ್ಷಿಕೆ ಯಡಿ ಚಿತ್ರ ಸಹಿತ ವರದಿ ಪ್ರಕಟಿಸಿತ್ತು.

ಮಕ್ಕಳನ್ನು ಶಾಲಾ ಸ್ವಚ್ಛತಾ ಕಾರ್ಯಕ್ರಮಕ್ಕೆ ಬಳಕೆ ಮಾಡಿಕೊಳ್ಳುವ ಮೂಲಕ ಮುಖ್ಯ ಶಿಕ್ಷಕರು ಕರ್ತವ್ಯಲೋಪ ಎಸಗಿರುವುದು ಹಾಗೂ ಸರ್ಕಾರಿ ನೌಕರಿಗೆ ಭೂಷಣ ವಲ್ಲದ ರೀತಿತಯಲ್ಲಿ ವರ್ತಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ರಾಮಶೆಟ್ಟಿ ಆದೇಶದಲ್ಲಿ ತಿಳಿಸಿದ್ದಾರೆ.

ಸರ್ಕಾರಿ ನೌಕರರಾದ ಮುಖ್ಯ ಶಿಕ್ಷಕರು, 2009 ರ ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ ಮತ್ತುಯ ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯ ಮಗಳು 1966 ರ ನಿಯಮ 3(1) (2) (3) ರ ಉಲ್ಲಂಘನೆ ಮಾಡಿರು ವುದರಿಂದ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿ ಅನ್ವಯ ಸೇವೆಯಿಂದ ಅಮಾನತು ಗೊಳಿಸ ಲಾಗಿದೆಯಲ್ಲದೇ, ಈ ಕುರಿತು ಇಲಾಖೆ ವಿಚಾರಣೆಯನ್ನು ಕಾಯ್ದಿರಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಅಮಾನತುಗೊಂಡ ಶಿಕ್ಷಕರು ಇಲಾಖೆಯ ಪೂರ್ವನುಮತಿ ಪಡೆ ಯದೇ ಕೇಂದ್ರ ಸ್ಥಾನ ಬಿಟ್ಟು ತೆರಳು ವಂತಿಲ್ಲ ಎಂದು ಆದೇಶದಲ್ಲಿ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT