ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಗಳ ಅಭಿವೃದ್ಧಿಗೆ ಪಾಲಕರ ಸಹಕಾರ ಅಗತ್ಯ

Last Updated 6 ಜುಲೈ 2012, 9:30 IST
ಅಕ್ಷರ ಗಾತ್ರ

ಕವಿತಾಳ: ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದು ಅನೇಕ ಯೋಜನೆಗಳನ್ನು ಜಾರಿ ಮಾಡಿವೆ ಅವುಗಳನ್ನು ಸದುಪಯೋಗ ಪಡಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ಚಂದ್ರಕಾಂತ ಪಾಟೀಲ್ ಗೂಗೆಬಾಳ ಹೇಳಿದರು.

ಪಟ್ಟಣದ ಪದವಿ ಪೂರ್ವ ಕಾಲೇಜ್‌ನಲ್ಲಿ ಬಾಲಕರ ಮತ್ತು ಬಾಲಕಿಯರ ಸರ್ಕಾರಿ ಪ್ರೌಢಶಾಲೆಗಳು ಸಂಯಕ್ತವಾಗಿ ಗುರುವಾರ ಏರ್ಪಡಿಸಿದ್ದ ಶಾಲೆಗಾಗಿ ನಾವು ನೀವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡಿ ಶಾಲೆಗೆ ಕೀರ್ತಿ ತರಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಶಾಲೆಗಳ ಅಭಿವೃದ್ಧಿಗೆ ಪಾಲಕರ ಸಹಕಾರ ಅಗತ್ಯ ಎಂದು ಅವರು ಹೇಳಿದರು. ತಾಲ್ಲೂಕು ಪಂಚಾಯಿತಿ ಸದಸ್ಯರಾದ ಕರಿಯಪ್ಪ ಅಡ್ಡೆ, ಕರಿಯಪ್ಪ ತೋಳ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತಮ್ಮ ಅರಿಕೇರಿ, ಮುಖ್ಯಗುರುಗಳಾದ ಆರ್.ಚಂದ್ರಶೇಖರ ಹಿರೇಮಠ, ಹೆಚ್.ಮಲ್ಲಪ್ಪ ಮತ್ತು ಮುಖಂಡರಾದ ರಾಜೇಶ ಬನ್ನಿಗಿಡದ, ಶರಣಬಸವ ಹಣಿಗಿ, ಶಂಕ್ರಪ್ಪ ಬಾಂಬೆ, ನಾಗರಾಜ ಚಕೋಟಿ, ವಿಶ್ವನಾಥ ಕಾಮರೆಡ್ಡಿ, ವೆಂಕಟೇಶ ಮುರಾರಿ, ಬಂದೇನವಾಜ್, ಮುರಳೀಧರ ಕೋಸ್ಗಿ, ಸುರೇಶ, ಮೌನೇಶ ಕಂದಗಲ್, ದುರುಗಪ್ಪ, ವೆಂಕಟೇಶ ಅರಿಕೇರಿ ಮತ್ತು ಸಿಆರ್‌ಪಿ ಬಸವರಾಜ ಪಲಕನಮರಡಿ ವೇದಿಕೆ ಮೇಲಿದ್ದರು. ಶಿಕ್ಷಕರಾದ ಜಿ.ಎಸ್.ಸುಂಕದ ಮತ್ತು ಬಸವರಾಜ ಬಂಡಿ ಕಾರ್ಯಕ್ರಮ ನಿರೂಪಿಸಿದರು. ಮಾಹಿತಿ ಕೊರತೆಯಿಂದ ಕಾರ್ಯಕ್ರಮದಲ್ಲಿ ಪಾಲಕರು ಕಂಡು ಬರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT