ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಗೆ ಸೇರಿದ ಹೊಸ ವಿದ್ಯಾರ್ಥಿ

Last Updated 6 ಜುಲೈ 2012, 6:20 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನೇಕಾರನಗರದಲ್ಲಿರುವ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಗುರುವಾರ ಹೊಸ ಹಾಗೂ ವಿಶಿಷ್ಟ ವಿದ್ಯಾರ್ಥಿಯೊಬ್ಬನ ಆಗಮನ ವಾಯಿತು. ಇದೇ ಮೊದಲ ಬಾರಿಗೆ ಶಾಲೆಯ ಮೆಟ್ಟಿಲು ತುಳಿದ ವಿದ್ಯಾರ್ಥಿ ಯನ್ನು ಸಹಪಾಠಿಗಳು, ಶಿಕ್ಷಕರು ನಗುಮುಖದಿಂದ ಸ್ವಾಗತಿಸಿದರು.

ಒಂಬತ್ತು ವರ್ಷದ ತಿಪ್ಪಣ್ಣ ಕಾಟವೆ ಈವರೆಗೂ ಶಾಲೆಯಿಂದ ದೂರ ಉಳಿದಿದ್ದು, ಗುರುವಾರ `ಶಾಲೆಗಾಗಿ ನಾವು-ನೀವು~ ಕಾರ್ಯಕ್ರಮದ ಅಡಿ ಈ ವಿದ್ಯಾರ್ಥಿಯನ್ನು ಶಾಲೆಗೆ ಬರಮಾಡಿಕೊಳ್ಳಲಾಯಿತು. ವಯಸ್ಸಿನ ಆಧಾರದ ಮೇಲೆ ಮೂರನೇ ತರಗತಿಗೆ ಪ್ರವೇಶ ನೀಡಲಾಯಿತು.

ತಿಪ್ಪಣ್ಣನ ಕುಟುಂಬ ನೆಲೆ ಇಲ್ಲದವರಾಗಿದ್ದು, ಸದ್ಯ ನೇಕಾರ ಕಾಲೊನಿಯ ಮನೆಯೊಂದರಲ್ಲಿ ವಾಸವಿದ್ದಾರೆ. ತಾಯಿ ಶಾಂತವ್ವ ಮನೆಕೆಲಸ ಮಾಡಿ ಅಷ್ಟಿಷ್ಟು ಕಾಸು ಸಂಪಾದಿಸಿದರೆ, ಹುಡುಗನ ತಂದೆ ರಾಮು ಕಾಟವೆ ಕೂಲಿಗೆಂದು ಹೊರಗೆ ಹೋಗುತ್ತಾರೆ.

ಶಾಲೆಗಾಗಿ ನಾವು-ನೀವು ಕಾರ್ಯ ಕ್ರಮದ ಹಿನ್ನೆಲೆಯಲ್ಲಿ ಪೂರ್ವಭಾವಿ ಸಮೀಕ್ಷೆಯಲ್ಲಿ ತೊಡಗಿದ್ದ ಶಿಕ್ಷಕರಿಗೆ ಪೋಷಕರೊಬ್ಬರಿಂದ ತಿಪ್ಪಣ್ಣ ಪತ್ತೆಯಾದ. ಕಡೆಗೆ ಆತನ ಮನೆ ಯವರನ್ನು ಓಲೈಸಿ ಹೊಸ ವಿದ್ಯಾರ್ಥಿ ಯನ್ನು ಶಾಲೆಗೆ ಕರೆತರಲಾಯಿತು.

`ಶಿಕ್ಷಣದ ಹಕ್ಕು ಕಾಯ್ದೆಯ ಅಡಿ ವಿದ್ಯಾರ್ಥಿಯನ್ನು ನೇರ ಮೂರನೇ ತರಗತಿಗೆ ದಾಖಲು ಮಾಡಿ ಕೊಳ್ಳ ಲಾಗಿದೆ. ವಿಶೇಷ ಪರಿಹಾರ ಬೋ ಧನೆಯ ಅಡಿ ಈ ವಿದ್ಯಾರ್ಥಿಗೆ ಅಆಇಈ ಸಹಿತ ಈ ಹಂತದವರೆಗಿನ ಎಲ್ಲ ಅಕ್ಷರಾಭ್ಯಾಸ ಮಾಡಿ ಲಾಗು ವುದು. ಹುಡುಗ ಕೂಡ ಆಸಕ್ತಿ, ಲವಲವಿಕೆ ಯಿಂದಿಷ್ಟು ಬೇಗ ಕಲಿತುಕೊಳ್ಳಬಲ್ಲ~ ಎಂದು ಶಿಕ್ಷಕ ರಾಮಚಂದ್ರ ಪತ್ತಾರ ಹೇಳಿದರು.

ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯ ನಿಂಗಪ್ಪ ಬಡಿಗೇರ ಹೊಸ ವಿದ್ಯಾರ್ಥಿಗೆ ಸಮವಸ್ತ್ರ ಹಾಗೂ ಪಠ್ಯಪುಸ್ತಕ ವಿತರಿಸಿದರು. ಆರ್.ಎಫ್. ಬ್ಯಾಹಟ್ಟಿ, ಬಿ.ಡಿ. ಗಟ್ಟಿ, ಮುಖ್ಯೋಪಾಧ್ಯಾಯ ಸಿ.ಬಿ. ಉಳ್ಳಿಕಾಶಿ ಇತರರು ಈ ಸಂದರ್ಭ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT