ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ಮನೆಗೆ ಮುತ್ತಿಗೆ: ಎಚ್ಚರಿಕೆ

Last Updated 12 ಅಕ್ಟೋಬರ್ 2012, 8:25 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ: ಕ್ಷೇತ್ರ ವ್ಯಾಪ್ತಿ ಯಲ್ಲಿ ಆಶ್ರಯ ಯೋಜನೆಯನ್ನು ಶಾಸಕ ನೇಮರಾಜನಾಯ್ಕ ದಿಕ್ಕು ತಪ್ಪಿ ಸಿದ್ದಾರೆ. ಯೋಜನೆಯ ಪ್ರಕಾರ ಫಲಾ ನುಭವಿಗಳಿಗೆ ತಲಾ ಮನೆಯೊಂದಕ್ಕೆ ಸರಕಾರ ನೀಡುವ ರೂ.53 ಸಾವಿರ ಮೊತ್ತದಲ್ಲಿ ರೂ.18 ಸಾವಿರ ಹಣ ವನ್ನು ನೇಮರಾಜನಾಯ್ಕ ಕಬಳಿಸಿದ್ದಾರೆ ಎಂದು ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಸಿರಾಜ್‌ಶೇಖ್ ಆರೋಪಿಸಿದರು.

ತಾಲ್ಲೂಕಿನ ಬಂಡೀಹಳ್ಳಿ ಆಯೋಜಿ ಸಿದ್ದ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಸಭೆ ಯಲ್ಲಿ ಪಾಲ್ಗೊಂಡು ಮಾತನಾಡಿದರು.

ಫಲಾನುಭವಿಗಳಿಂದ ಜಿ ಫಾರ್ಮಗೆ ಸಹಿ ಪಡೆದು, ಯೋಜನೆಯ 53 ಸಾವಿರ ಅನುದಾನದಲ್ಲಿ ಕೇವಲ 32 ಸಾವಿರ ಮೊತ್ತದ ಗೃಹ ಕಟ್ಟುವ ಸಲ ಕರಣೆಗಳನ್ನು ವಿತರಿಸಿರುವ ಶಾಸಕರ ಕ್ರಮ ವಿರೋಧಿಸಿ ಮತ್ತು ಯೋಜನೆ ಯಲ್ಲಿ ನಡೆದಿರುವ ಅವ್ಯವಹಾರ ಖಂಡಿಸಿ ಇತ್ತೀಚಿಗೆ ಪಕ್ಷ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅಸಂಖ್ಯಾತ ಫಲಾನು ಭವಿಗಳು ಸ್ವಯಂಪ್ರೇರಿತರಾಗಿ ಭಾಗವ ಹಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದರು.

ಕಬಳಿಸಿರುವ 18 ಸಾವಿರ ಹಣವನ್ನು ವಾಪಸ್ ನೀಡುವಂತೆ ಶಾಸಕರನ್ನು ಆಗ್ರ ಹಿಸುವ ನಿಟ್ಟಿನಲ್ಲಿ ಫಲಾನುಭವಿಗಳನ್ನು ಜಾಗೃತಗೊಳಿಸಲಾಗುತ್ತದೆ. ಜೊತೆಗೆ ಪಕ್ಷದ ಕಾರ್ಯಕರ್ತರು ಮುಂದಿನ ದಿನ ಗಳಲ್ಲಿ ಫಲಾನುಭವಿಗಳನ್ನು ಮುಂದಿಟ್ಟು ಕೊಂಡು ಶಾಸಕರ ಮನೆಗೆ ಮುತ್ತಿಗೆ ಹಾಕಿಸಿ ಘೇರಾವ್ ಮಾಡುವಂತಹ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಶಾಸಕರಾಗಿದ್ದ ಆವಧಿಯಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ತಲಾ ಕೇವಲ 20.000 ರೂ ವೆಚ್ಚದಲ್ಲಿ, ಸೋನಿಯಾ ನಗರ ದಂತಹ 17 ನಗರಗಳ ಅತ್ಯುತ್ತಮ 20 ಸಾವಿರ ಮನೆಗಳನ್ನು ನಿರ್ಮಿಸಿದ ಇತಿಹಾಸ ನನ್ನದು. ಸೋನಿಯಾ ನಗರ, ರಾಷ್ಟ್ರ ಮಟ್ಟದ ಅತ್ಯುತ್ತಮ ಮನೆಗಳ ನಗರ ಎಂದು ಹಾಗೂ ಅಲ್ಲಿ ವಾಸಿಸುವ ಜನರ ಜೀವನ ಮಟ್ಟ ಅತ್ಯುತ್ತಮ ವಾಗಿದೆ ಎಂದು ಪರಿಗಣಿಸಿ ದೆಹಲಿಯ ಹುಡ್ಕೋ ಸಂಸ್ಥೆ ತಮಗೆ ರಾಷ್ಟ್ರ ಪ್ರಶಸ್ತಿ ನೀಡಿ ಪುರಸ್ಕರಿಸಿ ಗೌರವಿಸಿತ್ತು ಎಂದು ಅವರು ಸ್ಮರಿಸಿಕೊಂಡರು.

ಪಕ್ಷಕ್ಕೆ ಸೇರ್ಪಡೆಗೊಂಡ ಸಿ.ಹನ ಮಂತಪ್ಪ ಮಾತನಾಡಿ, ಕೃಷ್ಣಾಪುರ ಗ್ರಾಮದಲ್ಲಿ ನಿಮ್ಮ ಆವಧಿಯಲ್ಲಿ ನಿರ್ಮಿ ಸಲ್ಪಟ್ಟಿರುವ ಮನೆಗಳಿಗೆ ಹೊಸ ಬಾಗಿಲು ಮತ್ತು ಕಿಟಕಿ ಜೋಡಿಸಿ ಹಣ ಲಪಟಾಯಿಸಲಾಗುತ್ತಿದೆ ಎಂದು ಸಿರಾಜ್‌ಶೇಖ್ ಅವರ ಗಮನ ಸೆಳೆ ದರು.

ಗ್ರಾಮಕ್ಕೆ ಖುದ್ದು ಭೇಟಿ ನೀಡಿ ಪರಿ ಶೀಲಿಸುವಂತೆ ಪಿ.ರಾಮಚಂದ್ರಪ್ಪ, ಪಿ. ಖಾಜಾವಲಿ, ಎಸ್.ಎಂ.ಸಿದ್ದಯ್ಯ, ಫಕೀರ ಗೌಡ, ಹುಲುಗಪ್ಪ, ಭರಮನ ಗೌಡ ಮತ್ತಿತರರು ಆಗ್ರಹಿಸಿದರು.

ಮುಖಂಡರಾದ ಜಳಕಿ ಗುರುಬಸಪ್ಪ, ಗ್ರಾ.ಪಂ.ಸದಸ್ಯರಾದ ನಾಗರಾಜ ಜನ್ನು, ಸಂಪತ್‌ಕುಮಾರನಾಯ್ಕ, ಹಂಚಿನಮನಿ ಹನಮಂತಪ್ಪ, ಆಟೋ ರಜಾಕ್, ಜಂದೀಸಾಬ್ ಮತ್ತಿತರರು ಉಪಸ್ಥಿತ ರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT