ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಆಗ್ರಹ

Last Updated 8 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಬೆಳಗಾವಿಯಲ್ಲಿ ವಿಧಾ­ನ­ಸಭೆಯ ಅಧಿವೇಶನ ನಡೆಯು­ವಾ­ಗಲೇ ಎಂಇಎಸ್‌ ಮಹಮೇಳಾ­ವದಲ್ಲಿ ರಾಜ್ಯಕ್ಕೆ ಅವಮಾನಕರವಾದ ಹೇಳಿಕೆ ನೀಡಿರುವ ಎಂಇಎಸ್‌ ಶಾಸಕ ಸಂಭಾಜಿ ಪಾಟೀಲ ಅವರ ಮೇಲೆ ಕ್ರಿಮಿನಲ್‌ ಪ್ರಕರಣವನ್ನು ದಾಖಲಿಸ­ಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಒತ್ತಾಯಿಸಿದರು.

ಕನ್ನಡ ಜಾಗೃತಿ ವೇದಿಕೆಯು ಭಾನುವಾರ ಆಯೋಜಿ­ಸಿದ್ದ 20 ನೇ ವಾರ್ಷಿಕೋತ್ಸವ ಕಾರ್ಯಕ್ರಮ ಹಾಗೂ ವಿಶ್ವ ಕನ್ನಡಿಗರ ಮಹಾ ಸಮ್ಮೇ­ಳನ ಕಾರ್ಯಕ್ರಮದಲ್ಲಿ ಭಾಗ­ವ­ಹಿಸಿ ಅವರು ಮಾತನಾಡಿದರು.

‘ಕನ್ನಡದ ಸಂಸ್ಕೃತಿಗೆ ಧಕ್ಕೆಯಾ­ಗುವಂತಹ ಹೇಳಿಕೆ ನೀಡಿರುವುದನ್ನು ಸರ್ಕಾರ ಲಘುವಾಗಿ ಪರಿಗಣಿಸ­ಬಾರದು. ಇಲ್ಲಿ ರಾಜೀಸೂತ್ರವನ್ನು ಕೈಗೊಳ್ಳದೆ ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಬೇಕು’ ಎಂದರು. ‘ಕನ್ನಡ ಪರ ಹೋರಾಟಗಾ­ರರು ದರೋಡೆಕೋರ­ರಲ್ಲ, ಕಳ್ಳರಲ್ಲ. ಅವರು ನಾಡಿನ ಸಂಸ್ಕೃತಿ ಮತ್ತು ಏಳಿಗೆಗೆ ಶ್ರಮಿಸುತ್ತಿದ್ದಾರೆ. ಇದರಿಂದ, ಎಲ್ಲ ಕನ್ನಡ ಪರ ಹೋರಾಟಗಾರರ ಮೇಲಿರುವ ಪ್ರಕರಣಗಳನ್ನು ಸರ್ಕಾರ ಕೈ ಬಿಡಬೇಕು’ ಎಂದು ಹೇಳಿದರು.

‘ಕೆಪಿಎಸ್‌ಸಿ ಹಗರಣದಲ್ಲಿ ಅಮಾ­ಯಕರಿಗೆ ಶಿಕ್ಷೆಯಾಗಬಾ­ರದು. ಅರ್ಹ­ತೆಯಿಂದ ಆಯ್ಕೆಯಾದವ­ರನ್ನು ವಜಾ ಮಾಡಿ ಶಿಕ್ಷೆ ನೀಡು­ವುದು ಬೇಡ.  ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು’ ಎಂದು ಹೇಳಿದರು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ‘ಕನ್ನಡ ಸಾಹಿತ್ಯ ಚರಿತ್ರೆ­ಯನ್ನು ಮಕ್ಕಳಿಗೆ ತಿಳಿಸಬೇಕು. ಕನ್ನಡ ಓದಲು ಬರೆಯಲು ಬೇರೆ ಭಾಷಿಕ­ರಿಗೂ ಕಲಿಸಬೇಕು. ಇಲ್ಲಿ ಬಂದು ನೆಲೆಸಿದವರೂ ಆದ್ಯತೆಯ ಮೇಲೆ ಕನ್ನಡವನ್ನು ಕಲಿಯಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT