ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರಿಂದಲೇ ಧರಣಿಯ ಬೆದರಿಕೆ

Last Updated 13 ಸೆಪ್ಟೆಂಬರ್ 2011, 10:15 IST
ಅಕ್ಷರ ಗಾತ್ರ

ಸೊರಬ: `ತುರ್ತು ಅಗತ್ಯ ಇರುವ ಪ್ರದೇಶಗಳ ಅಭಿವೃದ್ಧಿ ಬಿಟ್ಟು ಜನ ವಸತಿಯೇ ಇಲ್ಲದ ಕಡೆಗೆ ಅನಗತ್ಯವಾಗಿ ಪಟ್ಟಣ ಪಂಚಾಯ್ತಿ ಹಣವನ್ನು ಬಳಸಿಕೊಳ್ಳಲಾಗುತ್ತಿದೆ. ಇಂತಹ ಕೃತ್ಯನಿಲ್ಲದಿದ್ದರೆ ನಾನೂ ಧರಣಿ ನಡೆಸಬೇಕಾಗುತ್ತದೆ~ ಎಂದು ಶಾಸಕ ಎಚ್. ಹಾಲಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಎಸ್‌ಎಫ್‌ಸಿ ಅನುದಾನದ ಅಡಿಯಲ್ಲಿ ಪ.ಪಂ.ಗೆ ರೂ 1.67 ಕೋಟಿ ಬಿಡುಗಡೆ ಆಗಿದೆ. ಇದರಲ್ಲಿ ಪಟ್ಟಣದ ಮುಸ್ಲಿಂ ಸ್ಮಶಾನದ ಹಿಂಭಾಗದಲ್ಲಿ ಇರುವ ರಸ್ತೆ ಅಭಿವೃದ್ಧಿಗೆ ರೂ 8 ಲಕ್ಷ  ವ್ಯಯಿಸಲಾಗುತ್ತಿದೆ. ಒಬ್ಬ ಸದಸ್ಯರ ಒತ್ತಡಕ್ಕೆ ಮಣಿದು ಕಾಮಗಾರಿಮಾಡಲಾಗುತ್ತಿದೆ.

ಇದರಿಂದ ಯಾವುದೇ ಪ್ರಯೋಜನ ಪಟ್ಟಣದ ಜನತೆಗೆ ಆಗದು ಎಂದುಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದ ಅವರು ಸದಸ್ಯರು, ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ಹಾಲಿ ಪಟ್ಟಣದಲ್ಲಿ ಅನೇಕ ರಸ್ತೆಗಳು ತಗ್ಗು ಗುಂಡಿಗಳಿಂದ ತುಂಬಿವೆ, ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಕಾಂಪೌಂಡ್ ನಿರ್ಮಾಣ ಮಾಡುವಂತೆ ತಾವು ಮಾಡಿರುವ ಮನವಿಗೆ ಪ.ಪಂ. ಆಡಳಿತ ಸ್ಪಂದಿಸಿಲ್ಲ. ಉರ್ದು ಶಾಲೆ ಬೀಳುತ್ತಿದ್ದರೂ ಅತ್ತ ಗಮನ ಹರಿಸಿಲ್ಲ.

ಆದರೆ, ಯಾರಿಗೋ ಲೇ ಔಟ್ ಮಾಡಿಕೊಡುವ ಹುನ್ನಾರದಿಂದ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಉಳಿದ ಸದಸ್ಯರು ಇಂತಹ ಉಪಯೋಗವಿಲ್ಲದ ಕೆಲಸವನ್ನು ನಿಲ್ಲಿಸಬೇಕಿತ್ತು ಎಂದು ಅಸಮಾಧಾನ ಸೂಚಿಸಿದ ಅವರು, ಕಾಮಗಾರಿ ಯಾವುದೇ ಕಾರಣಕ್ಕೂ ನಡೆಯಕೂಡದು. ಒಂದು ವೇಳೆ ಆಡಳಿತ ಸ್ಪಂದಿಸದಿದ್ದಲ್ಲಿ ಸಾರ್ವಜನಿಕರೊಂದಿಗೆ ಸೇರಿ ತಾವೂ ಧರಣಿ ನಡೆಸುವುದಾಗಿ ಎಚ್ಚರಿಸಿದರು.

ಸ್ಥಳದಲ್ಲಿ ಹಾಜರಿದ್ದ ಪ.ಪಂ. ಉಪಾಧ್ಯಕ್ಷ ಪ್ರಶಾಂತ್‌ಮೇಸ್ತ್ರಿ, ಮಹೇಶ್‌ಗೌಳಿ, ಗೌರಮ್ಮ ಭಂಡಾರಿ ಮಾತನಾಡಿ, ಕಾಮಗಾರಿ ಅನುಮೋದನೆ ಆರೋಪವನ್ನು ಇಡೀ ಪ.ಪಂ. ಆಡಳಿತದ ಮೇಲೆ ಮಾಡುವುದು ಸರಿಯಲ್ಲ. ತಾವುಕಾಮಗಾರಿಗೆ ಸಹಮತ ಸೂಚಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಪ.ಪಂ. ಅಧ್ಯಕ್ಷೆ ವಿಜಯಾ ಮಹಾಲಿಂಗಪ್ಪ, ಮುಖ್ಯಾಧಿಕಾರಿ ವೀರೇಶ್, ಎಂಜಿನಿಯರ್ ರಾಜು, ಸದಸ್ಯರಾದ ಸಮೀವುಲ್ಲಾ, ದಿನಕರಭಟ್ ಭಾವೆ, ಎಪಿಎಂಸಿ ಅಧ್ಯಕ್ಷ ಗಜಾನನರಾವ್, ರೇವಣಕುಮಾರ್, ಎಂ.ಕೆ. ಯೋಗೇಶ್, ಜಿಲ್ಲಾ ಪಂಚಾಯ್ತಿ ಸದಸ್ಯ ಗುರುಕುಮಾರ್ ಪಾಟೀಲ್ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT