ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸ್ತ್ರಿ ಆದರ್ಶ ಸ್ಮರಣೀಯ

Last Updated 16 ಜನವರಿ 2012, 5:30 IST
ಅಕ್ಷರ ಗಾತ್ರ

ಶಿಗ್ಗಾವಿ: ದೇಶ ಕಂಡ ಅಪರೂಪದ ಪ್ರಧಾನಿ ಲಾಲ್‌ಬಹದ್ದೂರ್ ಶಾಸ್ತ್ರಿ ಅವರ ನಿಸ್ವಾರ್ಥ ಸೇವಾಮನೋಭಾ ಸ್ಮರಣೀಯವಾದುದು. ಹೀಗಾಗಿ ಅವರ ಆದರ್ಶ ಗುಣಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ಕಾಡಾ ಅಧ್ಯಕ್ಷ ಸೋಮಣ್ಣ ಬೇವಿನಮರದ ಹೇಳಿದರು.

ತಾಲ್ಲೂಕಿನ ಹಳೇಬಂಕಾಪುರ ಗ್ರಾಮದ ಲಾಲ್ ಬಹದ್ದೂರ್ ಶಾಸ್ತ್ರಿ ಯುವಕ ಮಂಡಳಿಯ ಆಶ್ರಯದಲ್ಲಿ ನಡೆದ  ಶಾಸ್ತ್ರಿ ಅವರ ಪುಣ್ಯತಿಥಿ ಅಂಗವಾಗಿ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದ ಪಟ್ಟಣದಲ್ಲಿ ಬಳಿಕ ಭಾವಚಿತ್ರದ ಮೆರವಣೆಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.

 ಚತುರ ಸಂಧಾನಕಾರರಾಗಿ ಶಾಸ್ತ್ರಿ ದೇಶದಲ್ಲೇ  ಪ್ರಾಮಾಣಿಕ ರಾಜಕಾರಣಿ ಎನಿಸಿಕೊಂಡಿದ್ದರು. ದೇಶಕ್ಕೆ ಎದುರಾದ ಸಂದಿಗ್ಧ ಪರಸ್ಥಿತಿಯನ್ನು ಅನುಭವ, ಚತುರತೆಯಿಂದ ಪಾರು ಮಾಡಿ ದೇಶದ ಅಭಿವೃದ್ಧಿಗೆ ಕಳಶಪ್ರಾಯರಾದ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸ್ಮರಣೆ ಅಗತ್ಯವಾಗಿದೆ. ನೆಹರು ಅವರ ನಂತರ ದೇಶದ ಎರಡನೇ ಪ್ರಧಾನ ಮಂತ್ರಿಯಾಗಿ, ಭಾರತಮಾತೆಗೆ ನಿಸ್ವಾರ್ಥ ಸೇವೆ ಮಾಡಿದ ಅಗ್ರಗಣ್ಯರು ಎಂದರು.

ಇದೇ ಸಂದರ್ಭದಲ್ಲಿ ಜಿ.ಪಂ.ಸದಸ್ಯ ಶಶಿಧರ ಹೊನ್ನಣ್ಣನವರ, ಎಪಿಎಂಸಿ ಸದಸ್ಯ ವೀರಣ್ಣ ಶೀಲವಂತರ, ಮುಖ್ಯ ಶಿಕ್ಷಕ ಪಿ.ಕೆ.ಕರ್ಜಗಿ ಅವರನ್ನು ಯುವಕ ಮಂಡಳದ ಕಾರ್ಯಕರ್ತರು  ಸನ್ಮಾನಿಸಿ ಗೌರವಿಸಿದರು.  ಸುರೇಶ ಮುರಾರಿ ಅಧ್ಯಕ್ಷತೆ ವಹಿಸಿದ್ದರು. ಫಕ್ಕೀರಪ್ಪ ಭಾವಿಕಟ್ಟಿ, ಬಿಜೆಪಿ ಯುವ ಮೋರ್ಚಾ ಘಟಕದ ಅಧ್ಯಕ್ಷ ಬಸವರಾಜ ನಾರಾಯಣಪುರ, ಎಪಿಎಂಸಿ ಸದಸ್ಯ ವೀರಣ್ಣ ಶೀಲವಂತರ, ಗ್ರಾಮ ಪಂಚಾಯಿತಿ ಅಧ್ಯಕ್ಷ  ಗಿರೀಶ ಬೈಲವಾಳ, ಶಿವಪ್ಪ ಮುರಡಣ್ಣವರ, ನಿಂಗಪ್ಪ ವಗ್ಗನವರ, ಕುಮಾರ ಚಿಗರಿಮಠ, ಬಸವ ರಾಜ ಹಾವೇರಿ, ಪ್ರಶಾಂತ ಮುರಡಣ್ಣನವರ, ಸತೀಶ ದೇವಗೇರಿ, ತಿರಕಪ್ಪನೆಲ್ಲೆ ಹರವಿ, ದೇವಿಂದ್ರ ಗುಡಗೇರಿ, ಫಕ್ಕೀರೇಶ ಗುಡಗೇರಿ, ರಾಜು ಹಿರಳ್ಳಿ, ಸಚಿನ ಮುರಡಣ್ಣವರ, ಮಾಲತೇಶ ಮಾನೋಜಿ, ರಫೀಕ್ ಗಂಜೀಗಟ್ಟಿ, ಯಲ್ಲಪ್ಪ  ಹುನಗುಂದ ಮತ್ತಿತರರು ಉಪಸ್ಥಿತರಿದ್ದರು. ಲಾಲ್ ಬಹ ್ದದೂರ್ ಶಾಸ್ತ್ರಿ ಅವರ ಬಾಲ್ಯ ಜೀವನ ಕುರಿತು  ಶಿಕ್ಷಕ ಎಂ.ಸಿ ಸಿದ್ದನ ಗೌಡ್ರ ಮಾತನಾಡಿದರು. ಕೆ.ಸಿ.ಚಿಗರಿಮಠ ಸ್ವಾಗತಿಸಿ, ನಿರೂಪಿಸಿದರು. ಸಚಿನ್ ಮುರಡಣವರ ವಂದಿಸಿದರು.  ಗ್ರಾಮದ ಪ್ರಮುಖ ಬೀದಿಯಲ್ಲಿ  ಶಾಸ್ತ್ರಿ ಅವರ ಭಾವ  ಮೆರವಣಿಗೆ ನಡೆಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT