ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸ್ತ್ರೀಯ, ಫ್ಯೂಷನ್, ಜಾಸ್ ಸಂಗೀತ

Last Updated 5 ಡಿಸೆಂಬರ್ 2012, 19:39 IST
ಅಕ್ಷರ ಗಾತ್ರ

ಸಮಾನ ಮನಸ್ಕ ಸಂಗೀತ ಆಸಕ್ತರಿಂದ ಹುಟ್ಟಿದ ವಿಶಿಷ್ಟ ಸಂಗೀತ ಸಂಸ್ಥೆ `ಮೂನ್ ಅರ‌್ರಾ' ತನ್ನ ಮೂರು ವರ್ಷಗಳನ್ನು ಪೂರೈಸಿ ಇದೀಗ ವಾರ್ಷಿಕೋತ್ಸವ ಸಂಭ್ರಮದಲ್ಲಿದೆ. ಡಿ. 8 ಶನಿವಾರದಂದು ರಾತ್ರಿ ಎಂಟು ಗಂಟೆಗೆ ಅದ್ದೂರಿ ಸಂಗೀತ ರಸದೌತಣ ಬಡಿಸಲಿದೆ. ಇಲ್ಲಿ ಶಾಸ್ತ್ರೀಯ, ಫ್ಯೂಷನ್ ಮತ್ತು ಜಾಸ್ ಸಂಗೀತಗಳ ಸಮ್ಮಿಶ್ರಣವಿದ್ದು, ವೈಟ್‌ಫೀಲ್ಡ್‌ನಲ್ಲಿರುವ ಜಾಗೃತಿ ಥಿಯೇಟರ್‌ನಲ್ಲಿ ಕಾರ್ಯಕ್ರಮ ಏರ್ಪಾಡಾಗಿದೆ.

ಫ್ಯೂಷನ್ ಬ್ಯಾಂಡ್‌ನಲ್ಲಿ ಮಾಧುರಿ ಜಗದೀಶ್, ಗಿಟಾರ್ ವಾದಕ ಜಗದೀಶ್ ಎಂ.ಆರ್, ಹವಾಯ್ ಗಿಟಾರ್ ವಾದಕ ಪ್ರಕಾಶ್ ಸೊಂಟಕ್ಕೆ, ಕಾರ್ತಿಕ್ ಮಣಿ, ವಿಲ್ಸನ್ ಕೆನೆತ್ ಮುಂತಾದವರು ಸಂಗೀತದ ಹೊನಲು ಹರಿಸಲಿದ್ದಾರೆ. ಮೂನ್ ಅರ‌್ರಾ ಎಂಬ ಸಂಸ್ಥೆಯಲ್ಲಿರುವ ಸಂಗೀತ ಕಲಾವಿದರ ತಂಡ, ಇತ್ತೀಚೆಗೆ ದೆಹಲಿಯಲ್ಲಿ ನಡೆದ ಅಂತರರಾಷ್ಟ್ರೀಯ ಫ್ಯೂಷನ್ ಉತ್ಸವದಲ್ಲಿ ವಿಶ್ವದ ಗಮನ ಸೆಳೆದಿತ್ತು. ಇಂಡೋನೇಷ್ಯಾದಲ್ಲಿ 2009ರಲ್ಲಿ ನಡೆದ ಜಾವ ಜಾಸ್ ಉತ್ಸವ, ಥಾಯ್ಲೆಂಡ್‌ನಲ್ಲಿ 2010ರ ಜಾಸ್ ಉತ್ಸವಗಳಲ್ಲಿ ವಿಶ್ವಮಟ್ಟದಲ್ಲಿ ಈ ಕಲಾವಿದರು ಛಾಪು ಮೂಡಿಸಿದ್ದರು.

`ಊಟಿಯಲ್ಲಿ ನಡೆದ ಮೆಡ್‌ಫೆಸ್ಟ್ ಉತ್ಸವ ಸ್ಮರಣೀಯ. ಭಾರತೀಯ ಪರಂಪರೆಯ ಶಾಸ್ತ್ರೀಯ ಸಂಗೀತ, ಜಾಗತಿಕ ಮನ್ನಣೆ ಪಡೆದ ಜಾಸ್ ಮತ್ತು ಫ್ಯೂಷನ್ ಎಲ್ಲದರ ಸಮ್ಮಿಶ್ರಣವಿರುವ ಸಂಗೀತ ಕೇಳುಗರಿಗೆ ಸಿಗುವುದು ಬಹಳ ಅಪರೂಪ. ಈ ನಿಟ್ಟಿನಲ್ಲಿ ಮೂನ್ ಅರ‌್ರಾ ನಡೆಸುವ ಸಂಗೀತೋತ್ಸವ ಎಲ್ಲ ಕಡೆಗಳಲ್ಲಿ ಯಶಸ್ಸು ಗಳಿಸುತ್ತಲೇ ಬಂದಿದೆ' ಎನ್ನುತ್ತಾರೆ ಈ ಸಂಗೀತ ತಂಡದಲ್ಲಿರುವ ಪ್ರಮುಖ ಗಿಟಾರ್ ಕಲಾವಿದ ಜಗದೀಶ್ ಎಂ.ಆರ್.

ಶನಿವಾರ ರಾತ್ರಿ ಎಂಟು ಗಂಟೆಗೆ ಆರಂಭವಾಗುವ ಕಾರ್ಯಕ್ರಮದಲ್ಲಿ ಈ ತಂಡದ ಕಲಾವಿದರಲ್ಲದೆ ಅತಿಥಿ ಕಲಾವಿದರೂ ಭಾಗವಹಿಸಲಿದ್ದು, ಗಾಯನ-ವಾದನಗಳಿಂದ ಸಂಗೀತ ಸಂಜೆ ಸ್ಮರಣೀಯ ಎನಿಸಲಿದೆ.
ಸಂಗೀತ ಸಂಜೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಜಗದೀಶ್ ಎಂ.ಆರ್. ಅವರನ್ನು 98442 45577 ನಲ್ಲಿ ಸಂಪರ್ಕಿಸಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT