ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ಕೌನ್ಸೆಲಿಂಗ್ ವೇಳಾಪಟ್ಟಿ ಬದಲು

Last Updated 4 ಜೂನ್ 2011, 7:00 IST
ಅಕ್ಷರ ಗಾತ್ರ

ದಾವಣಗೆರೆ: ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಕೋರಿಕೆ ವರ್ಗಾವಣೆ ಬಗ್ಗೆ ಕೌನ್ಸೆಲಿಂಗ್ ವೇಳಾಪಟ್ಟಿಯನ್ನು ಬದಲಾಯಿಸಲಾಗಿದೆ. ಭಾಷಾ ಶಿಕ್ಷಕರು, ಪಿಸಿಎಂ, ಸಿಬಿಝಡ್, ಕಲಾ ಶಿಕ್ಷಕರು, ಟಿಜಿಟಿ, ಬಿಆರ್‌ಪಿ ಹಾಗೂ ಶಾಸಕರ ಮಾದರಿ ಶಾಲಾ ಪದವೀಧರ ಮುಖ್ಯ ಶಿಕ್ಷಕರಿಗೆ ಸಂಬಂಧಪಟ್ಟಂತೆ ಈ ಕೌನ್ಸೆಲಿಂಗ್ ನಡೆಯಲಿದೆ. ಬೆಂಗಳೂರಿನ ಕಾವೇರಿ ಭವನದ ಎದುರಿನ ಶಿಕ್ಷಕರ ಸದನದಲ್ಲಿ ಕೌನ್ಸೆಲಿಂಗ್ ನಡೆಯಲಿದೆ. ಪರಿಷ್ಕೃತ ವೇಳಾಪಟ್ಟಿ ಈ ರೀತಿ ಇದೆ.

ಜೂನ್ 5 ಸಹ ಶಿಕ್ಷಕರ ತಾತ್ಕಾಲಿಕ ಅಂತಿಮ ಆದ್ಯತಾಪಟ್ಟಿ ಕ್ರಮ ಸಂಖ್ಯೆ 1ರಿಂದ 400.  ಜೂನ್6ರಂದು ಸಹ ಶಿಕ್ಷಕರ ತಾತ್ಕಾಲಿಕ ಅಂತಿಮ ಆದ್ಯತಾಪಟ್ಟಿ ಕ್ರಮ ಸಂಖ್ಯೆ 401ರಿಂದ 1000. 7ಕ್ಕೆ ಸಹ ಶಿಕ್ಷಕರ ತಾತ್ಕಾಲಿಕ ಅಂತಿಮ ಆದ್ಯತಾಪಟ್ಟಿ ಕ್ರಮಸಂಖ್ಯೆ 1001ರಿಂದ 1,600. ಜೂನ್ 8ರಿಂದ ಸಹ ಶಿಕ್ಷಕರ ತಾತ್ಕಾಲಿಕ ಅಂತಿಮ ಆದ್ಯತಾಪಟ್ಟಿ ಕ್ರಮ ಸಂಖ್ಯೆ 1,601ರಿಂದ 1,882.

ಜೂನ್ 7ರಿಂದ ವಿಶೇಷ ಶಿಕ್ಷಕರ ತಾತ್ಕಾಲಿಕ ಅಂತಿಮ ಆದ್ಯತಾಪಟ್ಟಿ ಕ್ರಮ ಸಂಖ್ಯೆ 1ರಿಂದ 101. ಜೂನ್ 8ರಂದು ದೈಹಿಕ ಶಿಕ್ಷಣ ಶಿಕ್ಷಕರ ತಾತ್ಕಾಲಿಕ ಅಂತಿಮ ಆದ್ಯತಾಪಟ್ಟಿ ಕ್ರಮ ಸಂಖ್ಯೆ 1ರಿಂದ 180.
ಶಿಕ್ಷಕರು ಕೌನ್ಸೆಲಿಂಗ್‌ಗೆ ಹಾಜರಾಗುವಾಗ ತಮ್ಮ ಆದ್ಯತೆಗೆ ಸಂಬಂಧಿಸಿದ ಪೂರಕ ದಾಖಲೆಗಳನ್ನು ತರಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT