ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ದಿನಾಚರಣೆ: ಗುರುಗಳಿಗೆ ನಮನ

Last Updated 6 ಸೆಪ್ಟೆಂಬರ್ 2013, 5:59 IST
ಅಕ್ಷರ ಗಾತ್ರ

ಬೀದರ್: ನಗರ, ತಾಲ್ಲೂಕಿನ ವಿವಿಧೆಡೆ ಶಿಕ್ಷಕರ ದಿನಾಚರಣೆಯನ್ನು ಸಡಗರದಿಂದ ಆಚರಿಸಿದ್ದು, ಈ ಮೂಲಕ ಮಾಜಿ ರಾಷ್ಟ್ರಪತಿ ಡಾ.ಎಸ್. ರಾಧಾಕೃಷ್ಣನ್ ಅವರ ವ್ಯಕ್ತಿತ್ವವನ್ನು ಸ್ಮರಿಸಿದ ವರದಿಗಳು ಬಂದಿವೆ.

ಮಾಧವ ನಗರ: ನಗರದಲ್ಲಿನ ಜನಸೇವಾ ಶಿಶು ಮತ್ತು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಶಂಭುಲಿಂಗ ವಾಲದೊಡ್ಡಿ ಅವರು ಶಿಕ್ಷಕ ಸೇವೆಯ ಮಹತ್ವವನ್ನು, ಸರ್ವಪಲ್ಲಿ ರಾಧಾಕೃಷ್ಣನ್ ಅವರ ವ್ಯಕ್ತಿತ್ವ ವಿವರಿಸಿದರು. ಮುಖ್ಯ ಶಿಕ್ಷಕಿ ಸಂಗೀತಾ ನಾಗೂರೆ ಇದ್ದರು.

ಯಾಕತಪೂರ: ಇಲ್ಲಿನ ಲಿಟ್ಲ್ ಫ್ಲವರ್ ಪಬ್ಲಿಕ್ ಶಾಲೆಯಲ್ಲಿ ನಡೆದಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ಸೈಯದ್ ಅಹ್ಮದ್ ಮುದ್ದೆ, ಸಹ ಶಿಕ್ಷಕರಾದ ನಾಗಪ್ಪಾ ಯಾಕತಪೂರ ಮಾತನಾಡಿದರು. ಮುಖ್ಯಗುರು ಮತ್ತು ಶಿಕ್ಷಕರಿಗೆ ನೆನಪಿನ ಕಾಣಿಕೆ ನೀಡಲಾಯಿತು.

ಬಾಲಕಿಯರ ಕಾಲೇಜು: ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ವನ್ನು ಪದವಿಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಂ.ಕೆ. ಗಾದಗೆ ಉದ್ಘಾಟಿಸಿದರು.

ಪ್ರಾಚಾರ್ಯ ಶಿವರಾಜ ಪಾಟೀಲ್, ಪ್ರಮುಖರಾದ ಆರ್.ಕೆ.ವಾಘಮಾರೆ ಉಪಸ್ಥಿತರಿದ್ದರು. ಉಪನ್ಯಾಸಕರಿಗೆ ವಿವಿಧ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಅಶ್ವಿನಿ ಸ್ವಾಗತಿಸಿದರು. ನಿಖಿತಾ ನಿರೂಪಿಸಿದರು. ಅಶ್ವಿನಿ ನಾಗರಾಜ ವಂದಿಸಿದರು.
ಅಕ್ಕಮಹಾದೇವಿ ಕಾಲೇಜು: ನಗರದ ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮ ದಲ್ಲಿ ಪ್ರೊ.ಎಸ್.ಎಸ್. ರಾಂಪುರೆ, ಶಿಕ್ಷಕ ಮತ್ತು ವಿದ್ಯಾರ್ಥಿಗಳ ಸಂಬಂಧ ಕುರಿತು ಮಾತನಾಡಿದರು.

ಪ್ರಾಚಾರ್ಯರಾದ ಡಾ. ಪ್ರಮಿಲಾ ಎಂ. ಸಿರ್ಸೆ, ಉಪ ಪ್ರಾಚಾರ್ಯ ಪ್ರೊ.ಶಿವನಾಥ ಪಾಟೀಲ್ ಮಾತನಾಡಿದರು. ವಿದ್ಯಾರ್ಥಿ ಒಕ್ಕೂಟದ ಸಲಹೆಗಾರ ಪ್ರೊ.ಸಂಗ್ರಾಮ ಎಂಗಳೆ, ಪ್ರಧಾನ ಕಾರ್ಯದರ್ಶಿ ರಾಗಿಣಿ ಭಾಲ್ಕೆ, ಪ್ರಮುಖರಾದ ಶಶಿಕಲಾ ಹಿರೇಮಠ, ರಾಧಿಕಾ ಇದ್ದರು.

ಹಳ್ಳಿಖೇಡ್(ಬಿ): ಗ್ರಾಮದ ಮದರ ತೆರೆಸಾ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಡಾ.ರಾಥಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಸಂಸ್ಥೆ ಅಧ್ಯಕ್ಷ ಅರವಿಂದ ಸೂರ್ಯವಂಶಿ ಚಾಲನೆ ನೀಡಿದರು.

ಮುಖ್ಯಗುರು ಸಂತೋಷ್ ಕಾಂಬಳೆ, ಸಂಸ್ಥೆ ಕಾರ್ಯದರ್ಶಿ ನಿತೇಂದ್ರಕುಮಾರ್, ಶಿಕ್ಷಕರಾದ ಕವಿತಾ ಧನಶೆಟ್ಟಿ, ರೂಪಾ ಜೈನಾಪುರೆ, ದಿವ್ಯಭಾರತಿ, ಮಠ, ರೂಪಾ ಇದ್ದರು.

ಜನವಾಡ ವರದಿ: ಶಿಕ್ಷಕ ವೃತ್ತಿ ಇತರ ಎಲ್ಲ ವೃತ್ತಿಗಳಿಗಿಂತ ಶ್ರೇಷ್ಠವಾದದ್ದು. ಹೊಣೆಗಾರಿಕೆ ಅರಿತು ಕಾರ್ಯ ನಿರ್ವಹಿಸಿದರೆ ಮಾತ್ರ ಶಿಕ್ಷಕ ಹುದ್ದೆಗೆ ಘನತೆ ತಂದುಕೊಡಬಹುದು ಎಂದು ಬೀದರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಪ್ರೊ. ಶಿವಕುಮಾರ್ ಉಪ್ಪೆ ಅಭಿಪ್ರಾಯಪಟ್ಟರು.

ಬೀದರ್ ತಾಲ್ಲೂಕಿನ ಕಮಠಾಣ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಬೀದರ್ ಶಾಖೆ ವತಿಯಿಂದ ನೀರು ಶುದ್ಧೀಕರಣ ಯಂತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಕರು ಆದರ್ಶ ವಿಚಾರಗಳಿಂದ ಕೂಡಿದ ಶ್ರೇಷ್ಠ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಶಾಖಾ ವ್ಯವಸ್ಥಾಪಕ ಸೀತಾರಾಮ ಕೋಳಿ ನುಡಿದರು. ಪ್ರಾಚಾರ್ಯ ಚನ್ನಬಸವ ಹೇಡೆ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳು ಶಿಕ್ಷಕರಿಗೆ ಶಾಲು ಹೊದಿಸಿ, ಆರತಿ ಬೆಳಗಿ ಗುರುವಂದನೆ ಸಲ್ಲಿಸಿದರು.

ಪ್ರಮುಖರಾದ ಕೈಲಾಶಗಿರಿ, ಶಂಕರ, ಪ್ರಕಾಶ್, ಪ್ರಶಾಂತ್, ಸಂತೋಷ್, ಗೌತಮ, ಸಂಗಾರೆಡ್ಡಿ ಇದ್ದರು. ಪ್ರಲ್ಹಾದ್ ಜೆ.ಸ್ವಾಗತಿಸಿ, ರಾಜರೆಡ್ಡಿ ನಿರೂಪಿಸಿ, ಅಂಕುಶ್ ವಂದಿಸಿದರು.

ಕಮಲನಗರ ವರದಿ: ಶಿಕ್ಷಕರು ಉತ್ತಮ ಸಮಾಜ ನಿರ್ಮಿಸುವ ಶಿಲ್ಪಿಗಳಾಗಿದ್ದಾರೆ ಎಂದು ಶಿಕ್ಷಣ ಸಂಯೋಜಕ ನಾಗಭೂಷಣ ಮಾಮಡಿ ಹೇಳಿದರು.

ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಗುರುವಾರ `ಶಿಕ್ಷಕರ ದಿನಾಚರಣೆ' ನಿಮಿತ್ತ ಏರ್ಪಡಿಸಿದ್ದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯಗುರು ಬಾಬಶೆಟ್ಟಿ ಟೋಕರೆ ಮಾತನಾಡಿ, ಡಾ.ರಾಧಾಕೃಷ್ಣನ್ ಅವರ ಆದರ್ಶ ಮತ್ತು ತತ್ವಗಳನ್ನು ಪ್ರತಿಯೊಬ್ಬ ಶಿಕ್ಷಕರು ಹಾಗೂ ಪ್ರಜೆಗಳು ಮೈಗೂಡಿಸಿಕೊಳ್ಳಬೇಕು ಎಂದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಾಂತಕುಮಾರ ಬಿರಾದಾರ್ ಅಧ್ಯಕ್ಷತೆ ವಹಿಸಿದ್ದರು. ಕಲ್ಲಯ್ಯ ಮಠಪತಿ, ರಾಜಕುಮಾರ ನವಾಡೆ ಇದ್ದರು. ಪ್ರತೀಕ್ಷಾ ವಾನಖೇಡೆ ಸ್ವಾಗತಿಸಿ, ಶಾಂತಕುಮಾರ ಪಾಟೀಲ ನಿರೂಪಿಸಿದರು.

ಶಾಂತಿವರ್ಧಕ ಕಾಲೇಜು: ಶಾಂತಿವರ್ಧಕ ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಡಾ. ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪ್ರಾಚಾರ್ಯ ಜಿ.ಜಿ. ಮಠಪತಿ ಪೂಜೆ ಸಲ್ಲಿಸಿದರು.

ಉಪನ್ಯಾಸಕ ಶಿವಾಜಿ ಆರ್.ಎಚ್. ಶಿವರುದ್ರಯ್ಯ ಸ್ವಾಮಿ, ಸೂರ್ಯಕಾಂತ ಸುಲಾಕೆ ಮಾತನಾಡಿದರು.
ಖತಗಾಂವ್: ಸಮೀಪದ ಖತಗಾಂವ್ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ನಿಮಿತ್ತ ಡಾ.ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಎಸ್‌ಡಿಎಂಸಿ ಅಧ್ಯಕ್ಷ ಶಿವಾಜಿ ಪಾಂಚಾಳ್ ಪೂಜೆ ಸಲ್ಲಿಸಿದರು.

ಮುಖಗುರು ಪ್ರಭುರಾವ್ ಬಿರಾದಾರ್, ನಾಗನಾಥ ಬಿರಾದಾರ್, ಸೂರ್ಯಕಾಂತ ಮಹಾಜನ್, ಸುಭಾಷ ಬಿರಾದಾರ್, ಇಂದ್ರಜೀತ್ ಗವಳಿ, ಮಲ್ಲಮ್ಮ ಕಸ್ತೂರೆ, ಇಂದಿರಾಬಾಯಿ ಕಾಂಬಳೆ ಇದ್ದರು.

ಬಾಲೂರ್: ಸಮೀಪದ ಬಾಲೂರ್ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಡಾ.ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಎಸ್.ಡಿ.ಎಂ.ಸಿ ಅಧ್ಯಕ್ಷ ತುಕಾರಾಮ ಬೇಂದ್ರೆ ಪೂಜೆ ಸಲ್ಲಿಸಿ, ಶಾಲೆಯ ಎಲ್ಲ ಶಿಕ್ಷಕರಿಗೆ ಶಾಲು ಹೊದಿಸಿದರು.

ಮುಖ್ಯಗುರು ಪ್ರಕಾಶ ಪಾಟೀಲ್, ರಾಜಕುಮಾರ ಬಿರಾದಾರ್, ಮನೋಹರ ನವಾಡೆ, ಏಕನಾಥ ಮೊಡತೋಳೆ, ಧೊಂಡಿಬಾ ಹೋಳ್ಕರ್, ಗಂಗಾಧರ್ ಬೇಂದ್ರೆ ಇದ್ದರು.

ಔರಾದ್ ವರದಿ: ತಾಲ್ಲೂಕಿನ ಸಂತಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಗುರುವಾರ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು.

ಮುಖ್ಯಗುರು ಶರಣಪ್ಪ ಬಿರಾದಾರ ಡಾ.ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶಿಕ್ಷಕರ ದಿನಾಚರಣೆ ಮಹತ್ವ ಹೇಳಿದರು. ಪ್ರಾಚೀನ ಕಾಲದಿಂದಲೂ ಈ ದೇಶದಲ್ಲಿ ಗುರುವಿಗೆ ಪುಜ್ಯಸ್ಥಾನವಿದೆ. ಸತ್ಯ ಮತ್ತು ದೇವರ ದರ್ಶನವಾಗಲು ಗುರುವಿನಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ವಲಯ ಅಧ್ಯಕ್ಷ ಅನಿಲ ಜಿರೋಬೆ ಮಾತನಾಡಿ, ಸಮಾಜ ಮತ್ತು ದೇಶ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಬಹುದೊಡ್ಡದಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಶಿಕ್ಷಣ ರಂಗಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.

ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಪ್ರಭುಶೆಟ್ಟಿ ಸೈನಿಕಾರ ಮಾತನಾಡಿದರು. ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕಮಲಾಬಾಯಿ, ಸಂತಪುರ ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷ ಸಿದ್ದಯ್ಯ ಸ್ವಾಮಿ, ಶಿಕ್ಷಕ ಬಾಲಾಜಿ, ವಿಜಯಕುಮಾರ, ಶಶಿರೇಖಾ, ಮುಬಾಸಿರ್. ಬಸವರಾಜ ಇದ್ದರು.

ಬಸವಕಲ್ಯಾಣ ವರದಿ: `ಸರ್ಕಾರ ಎಸ್.ಡಿ.ಎಂ.ಸಿಯಿಂದ ಶಾಲೆಗಳಿಗೆ ಮುಕ್ತಿ ದೊರಕಿಸಿ ಕೊಡಬೇಕು. ಇವುಗಳಿಂದ ಶಿಕ್ಷಕರ ಕರ್ತವ್ಯಕ್ಕೆ ಅಡಿಯಾಗುತ್ತಿದೆ' ಎಂದು ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗನ್ನಾಥ ಪತಂಗೆ ಹೇಳಿದರು.

ಇಲ್ಲಿನ ಸದ್ಗುರು ಸದಾನಂದ ಮಠದ ಆವರಣದಲ್ಲಿ ಗುರುವಾರ ನಡೆದ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿವಿಧ ಯೋಜನೆಗಳ ತರಬೇತಿಗೆ ಶಿಕ್ಷಕರ ಹೆಚ್ಚಿನ ಸಮಯ ಹಾಳಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಿ, ಶಿಕ್ಷಕರ ಗಮನ ಪಾಠ ಹೇಳುವತ್ತ ಹರಿಯುವಂತೆ ಮಾಡಬೇಕು  ಎಂದರು.

ಹಾರಕೂಡ ಚನ್ನವೀರ ಶಿವಾಚಾರ್ಯರು ಮಾತನಾಡಿ, ಡಾ.ಎಸ್. ರಾಧಾಕೃಷ್ಣನ್ ಅವರು, ದೇಶದ ರಾಷ್ಟ್ರಪತಿ ಆಗದೆ ಇದ್ದಿದ್ದರೆ ಶಿಕ್ಷಕರಾಗಿಯೂ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂದರು. ಶಾಸಕ ಮಲ್ಲಿಕಾರ್ಜುನ ಖೂಬಾ ಮಾತನಾಡಿ, ತಾವು ಎಲ್ಲರಿಗೂ ಎಲ್ಲ ರೀತಿಯಿಂದ ಸಹಾಯ ಮಾಡಲು ಸಿದ್ಧನಿದ್ದೇನೆ ಎಂದರು.

ಉಪನ್ಯಾಸಕ ಕಲ್ಯಾಣರಾವ ಜಿ.ಪಾಟೀಲ, ಸಹಾಯಕ ಆಯುಕ್ತರಾದ ಯಪ್ಸಿಬಾ ರಾಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಣ್ಣ ಸ್ವಾಮಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲತಾ ಹಾರಕೂಡೆ, ಸದಸ್ಯರಾದ ರವೀಂದ್ರರೆಡ್ಡಿ ಗೋಕುಳ, ಸಂಜೀವ ಕಾಳೇಕರ್, ಎ.ಪಿ.ಎಂ.ಸಿ ಅಧ್ಯಕ್ಷ ಸಿದ್ರಾಮಪ್ಪ ಗುದಗೆ, ಉಪಾಧ್ಯಕ್ಷ ಅಶೋಕ ತೆಲಂಗ್, ಪೌರಾ ಯುಕ್ತ ಸುರೇಶ ಬಬಲಾದ, ತಹಶೀಲ್ದಾರ್ ವೆಂಕಟಯ್ಯ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಶರಣಬಸಪ್ಪ ಬಿರಾದಾರ ಇದ್ದರು. ಚಿದಂಬರ ಶೇಖರ ನಿರೂಪಿಸಿದರು.
ತಾಲ್ಲೂಕಿನ ವಿವಿಧ ಶಾಲೆಗಳ ನಿವೃತ್ತ ಶಿಕ್ಷಕರನ್ನು ಹಾಗೂ ಸ್ಕೌಟ್ಸ್‌ನಲ್ಲಿ ವಿಶೇಷ ಪ್ರಶಸ್ತಿ ಪಡೆದ ಶಿಕ್ಷಕ ಅನಿಲ ಶಾಸ್ತ್ರಿ ಅವರನ್ನು ಸನ್ಮಾನಿಸಲಾಯಿತು.

ಹುಮನಾಬಾದ್ ವರದಿ: ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಜಿಲ್ಲೆಯ 10ಮಂದಿ ಶಿಕ್ಷಕರಿಗೆ ಗುರುವಾರ ಇಲ್ಲಿ ನಡೆದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ `ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ' ಗೌರವಿಸಲಾಯಿತು.

ವಿಶ್ರಾಂತ ನ್ಯಾಯಾಧೀಶ ನಾಗರಾಜ ಅರಳಿ ಮಾತನಾಡಿ, `ಪ್ರಸ್ತುತ ದಿನಗಳಲ್ಲಿ ಶಿಕ್ಷಣದ ಗುಣಮಟ್ಟ, ಮೌಲ್ಯ ಕುಸಿಯುತ್ತಿದೆ' ಎಂದು ವಿಷಾದಿಸಿದರು. ದೇಶದ ಪ್ರಗತಿಯ ದೃಷ್ಟಿಯಿಂದ ಮೌಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕಾದ ಅಗತ್ಯವಿದೆ ಎಂದರು.
ಶಾಸಕ ರಾಜಶೇಖರ ಪಾಟೀಲ ಮಾತನಾಡಿ, ಜಿಲ್ಲಾ ಮಟ್ಟದ ಶಿಕ್ಷಕರ ಪ್ರಶಸ್ತಿ ಪ್ರದಾನ ನಿರೀಕ್ಷಿತ ಪ್ರಮಾಣದಲ್ಲಿ ಸಂಭ್ರಮ ಕಾಣುತ್ತಿಲ್ಲ. ಶಿಕ್ಷಕರೇ ಸಾಕಷ್ಟು ಸಂಖ್ಯೆಯಲ್ಲಿ ಗೈರುಹಾಜರಾಗಿ ಇರುವುದು ಬೇಸರ ಮೂಡಿಸಿದೆ ಎಂದರು.

ಪ್ರಶಸ್ತಿ ಪುರಸ್ಕೃತ ಶಿಕ್ಷಕರು: ಹುಮನಾಬಾದ್ ತಾಲ್ಲೂಕು ಗಡವಂತಿ ಸರ್ಕಾರಿ ಪ್ರೌಢಶಾಲೆ ಸಹ ಶಿಕ್ಷಕ ಶರದಕುಮಾರ ನಾರಾಯಣ ಪೇಟಕರ, ಬೀದರ್ ತಾಲ್ಲೂಕು ಬಕಚೌಡಿ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯಗುರು ಅನ್ನಪೂರ್ಣ, ನೌಬಾದ್ ಸರ್ಕಾರಿ ಪ್ರೌಢಶಾಲೆ ಸಹ ಶಿಕ್ಷಕ ರವಿಕುಮಾರ ಕುಮ್ನುರ, ಭಾಲ್ಕಿ ತಾಲ್ಲೂಕು ಜಾಂತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಎಂ.ಎಸ್. ಮನೋಹರ್.
ಾಳೂರು ಸರ್ಕಾರಿ ಪ್ರೌಢಶಾಲೆ ಚಿತ್ರಕಲಾ ಶಿಕ್ಷಕ ಅಶೋಕಕುಮಾರ ಸಿಂಧೆ, ಬಸವಕಲ್ಯಾಣ ತಾಲ್ಲೂಕು ಚಿಕನಾಗಾಂವ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯಗುರು ಎಸ್.ಶಿವರುದ್ರಪ್ಪ, ನೀಲಾಂಬಿಕಾ ಕನ್ಯಾ ಪ್ರೌಢಶಾಲೆ ಸಹ ಶಿಕ್ಷಕಿ ಪುಷ್ಪಾ ಬಂದೆ,
ಔರಾದ್ ತಾಲ್ಲೂಕು ಕೌಡಗಾಂವ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯಗುರು ಝರಣಪ್ಪ, ಸುಭಾಷಚಂದ್ರ ಬೋಸ್ ಪ್ರೌಢಶಾಲೆ ಶಿಕ್ಷಕ ಮಲ್ಲಿಕಾರ್ಜುನ ಹಿಪ್ಪಳಗಾಂವ. ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ, ಜಿಲ್ಲಾ ಮಟ್ಟದ ಅಧಿಕಾರಿಗಳು ಗೈರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT