ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ದುರ್ವರ್ತನೆ ಆರೋಪ: ಪ್ರತಿಭಟನೆ

Last Updated 11 ಫೆಬ್ರುವರಿ 2012, 5:25 IST
ಅಕ್ಷರ ಗಾತ್ರ

ರಾಣೆಬೆನ್ನೂರು: ಮಾರುತಿ ನಗರದ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.17 ರಲ್ಲಿ ಶಾಲಾ ಅವಧಿಯಲ್ಲಿ ಕೆಲಸ ಕಾರ್ಯ ಸಮರ್ಪಕವಾಗಿ ನಿರ್ವಹಿಸದೆ ದುರ್ವರ್ತನೆಯಿಂದ ನಡೆದುಕೊಳ್ಳುತ್ತಿರುವ ಶಿಕ್ಷಕಿಯರನ್ನು ಬೇರೆ ಕಡೆ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿ ಎಸ್‌ಡಿಎಂಸಿ ಪದಾಧಿಕಾರಿಗಳು ಮತ್ತು ಪಾಲಕರು ಗುರುವಾರ ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಎಸ್‌ಡಿಎಂಸಿ ಅಧ್ಯಕ್ಷ ರಾಜಣ್ಣ ಸಾಂಗ್ಲೀಕರ್ ಅವರು ಮಾತನಾಡಿ, ಇಲ್ಲಿಯ ನಾಲ್ಕು ಶಿಕ್ಷಕಿಯರು ಪ್ರಾರ್ಥನೆ ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಮಕ್ಕಳಿಗೆ ಸರಿಯಾಗಿ ಬೋಧನೆ ಮಾಡುವುದಿಲ್ಲ, ಶಾಲಾ ಅವಧಿಯಲ್ಲಿ ಮೊಬೈಲ್ ಫೋನಿನಲ್ಲಿ ಮಾತನಾಡುತ್ತಾರೆ, ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.

12 ಜೂನ್ 2008 ರಂದು ಡಿ.ಜಿ. ಪ್ರೆಸಿಲ್ಲಾ, ಎನ್.ಸಿ. ಮಠದ, ನಯನಾ ಶಿರೋಳ, ಎಲ್.ಎಸ್.ವಿಭೂತಿ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಿ ಬೇರೆ ಶಿಕ್ಷಕರನ್ನು ನಿಯೋಜನೆ ಮಾಡಬೇಕೆಂದು ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು ಶಾಸಕ ಜಿ.ಶಿವಣ್ಣ ಅವರಿಗೆ ಮನವಿ ಮಾಡಿದಾಗ ಶಾಸಕರು ಉಪನಿರ್ದೇಶಕರಿಗೆ ಪತ್ರ ಬರೆದು ತಿಳಿಸಿದ್ದಾರೆ. ಆದರೆ ಇಲ್ಲಿಯವರೆಗೂ ಏನೂ ಪ್ರಯೋಜನವಾಗಿಲ್ಲ, ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎಂದು ಅವರು ದೂರಿದ್ದಾರೆ.

`ಈ ಶಾಲೆಗೆ ಬರುವ ಮಕ್ಕಳೆಲ್ಲ ಬಡವಾರಾಗಿದ್ದು, ಖಾಸಗಿ ಶಾಲೆಗೆ ಹೋಗಲು ಆರ್ಥಿಕವಾಗಿ ಸಬಲರಿಲ್ಲ, ಅದಕ್ಕಾಗಿ ಇಂದು ಬೀದಿಗಿಳಿದು ಹೋರಾಟ ಮಾಡುತ್ತಿದ್ದೇವೆ~ ಎಂದರು.

ಕಾರ್ಯನಿರ್ವಾಹಕ ಅಧಿಕಾರಿ ಬಿ.ಬಿ.ದೇವೂರು ಹಾಗೂ ಶಿಕ್ಷಣಾಧಿಕಾರಿ ಎಚ್.ಎಂ. ಪ್ರೇಮಾ ಅವರು, ಮನವಿ ಬರೆದುಕೊಡಿ ಕರ್ತವ್ಯಲೋಪವೆಸಗಿದ ಶಿಕ್ಷಕರ ಮೇಲೆ ಸೂಕ್ತ ಜರುಗಿಸಲಾಗುವುದು ಎಂಬ ಭರವಸೆ ನೀಡಿದಾಗ ಎಸ್‌ಡಿಎಂಸಿ ಅವರು ಮತ್ತು ಪಾಲಕರು ಪ್ರತಿಭಟನೆ ಹಿಂತೆಗೆದು ಬೀಗ ತೆಗೆದು ಮಕ್ಕಳನ್ನು ತರಗತಿಗೆ ಕಳುಸಿದರು.

12 ಗಂಟೆವರೆಗೂ ಸುಡು ಬಿಸಿಲಿನಲ್ಲಿ ಕುಳಿತು ಪಾಠ ಪ್ರವಚನ ಕೇಳಿದರು. ಪದ್ದಕ್ಕ ಜಕ್ಕಣ್ಣನವರ, ಅಕ್ಕಮ್ಮ ಎಸ್.ಚಲವಾದಿ, ನಾಗಮ್ಮ ಕಾತರಕಿ, ಪ್ಯಾರೇಜಾನ್ ಭಾವಿಕಟ್ಟಿ ಮತ್ತು ಗಂಗಮ್ಮ, ಹನುಮಂತಪ್ಪ ಕದರಮಂಡಲಗಿ, ಸುರೇಶ ಮುಳಗುಂದ, ಬಿ.ಡಿ. ಕೋಳುರು, ಬಸಲಿಂಗಯ್ಯ, ಮತ್ತಿತರರು ಉಪಸ್ಥಿತರಿದ್ದರು.

ಮತದಾರರ ದಿನ ಆಚರಣೆ
ಹಾವೇರಿ: ತಾಲ್ಲೂಕಿನ ಮಾದಾಪೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ `ರಾಷ್ಟ್ರೀಯ ಮತದಾರರ ದಿನ~ ಆಚರಿಸಲಾಯಿತು.

ಎಸ್‌ಡಿಎಂಸಿ ಅಧ್ಯಕ್ಷ ವಿ.ಸಿ.ಪಾಟೀಲ, ಸದಸ್ಯೆ ಚಾಂದಬಿ ನದಾಫ್, ಗ್ರಾ.ಪಂ.ಸದಸ್ಯೆ ನಿಂಗವ್ವ ಹೊನ್ನಪ್ಪನವರ, ಮಲ್ಲಿಕಾರ್ಜುನಗೌಡ ಪಾಟೀಲ, ಚಂದ್ರಶೇಖರಗೌಡ ಪಾಟೀಲ ಮೊದಲಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT