ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ನೇಮಕಕ್ಕೆ ಆಗ್ರಹ

Last Updated 12 ಸೆಪ್ಟೆಂಬರ್ 2013, 6:09 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ತಾಲ್ಲೂಕಿನ ಮಳಮಾಚನ­ಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲೆ ಪ್ರಾರಂಭವಾಗಿ ಮೂರು ತಿಂಗಳಾ­ದರೂ ಆಂಗ್ಲ ಭಾಷೆ ಬೋಧಿಸಲು ಶಿಕ್ಷಕ­ರನ್ನು ನಿಯೋಜಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಬುಧವಾರ ಶಾಲೆಗೆ ಬೀಗ ಹಾಕಿ, ಪ್ರತಿಭಟಿಸಿದರು.

ಮುಖ್ಯ ಶಿಕ್ಷಕರಿಗೆ ಈ ಬಗ್ಗೆ ನಾಲ್ಕಾರು ಬಾರಿ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಶಿಕ್ಷಕ­ರಿಲ್ಲದೆ ಮಕ್ಕಳಿಗೆ ಪಾಠ ನಡೆಯದೆ ತೊಂದರೆಯಾಗಿದೆ. ಸರ್ಕಾರಿ ಶಾಲೆ­ಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಹಲವಾರು ಸೌಲಭ್ಯ­ಗಳನ್ನು ನೀಡುತ್ತಿರುವುದಾಗಿ ಹೇಳು­ತ್ತಾರೆ. ಆದರೆ ಗ್ರಾಮಗಳಲ್ಲಿ ಸೌಲಭ್ಯ ಸಿಗದೆ ಖಾಸಗಿ ಶಾಲೆಗಳತ್ತ ಮಕ್ಕಳು ಹೋಗುವಂತಾಗಿದೆ ಎಂದು ಗ್ರಾಮ­ಸ್ಥರು ಆರೋಪಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸಂಪರ್ಕಿ­ಸಿ­ದಾಗ ಇದು ನಮ್ಮ ವ್ಯಾಪ್ತಿಗೆ ಬರು­ವುದಿಲ್ಲ. ಮೇಲಧಿಕಾರಿಗಳಿಗೆ ತಿಳಿಸು­ತ್ತೇನೆ ಎಂದು ಹೇಳುತ್ತಾರೆ. ಪ್ರತಿ­ಯೊಬ್ಬರೂ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಶಾಲೆಗೆ ಆಂಗ್ಲ ಭಾಷೆ ಬೋಧಿಸಲು ಶಿಕ್ಷರನ್ನು ನಿಯೋಜಿಸುವವರೆಗೂ ನಾವು ಪ್ರತಿ­ಭಟನೆ ನಿಲ್ಲಿಸೆವು ಎಂದು ತಿಳಿಸಿದರು.

ಅಶೋಕ್‌, ಸುನಿಲ್‌, ಸುಧಾಕರ್‌, ನವೀನ್‌, ಬೈರೇಗೌಡ, ಮಾರೇಗೌಡ ಮತ್ತಿ­ತರರು ಪಾಲ್ಗೊಂಡಿ­ದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT