ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರಿಂದ ಹಾಡುಗಳಿಗೆ ರಾಗ ಸಂಯೋಜನೆ

Last Updated 13 ಡಿಸೆಂಬರ್ 2013, 9:03 IST
ಅಕ್ಷರ ಗಾತ್ರ

ತಲ್ಲೂರು (ಬೈಂದೂರು ):  ಇಲ್ಲಿನ ಸಮೂಹ ಸಂಪನ್ಮೂಲ ಕೇಂದ್ರದಲ್ಲಿ ಇಂಡಿಯನ್ ಫೌಂಡೇಶನ್ ಫಾರ್ ಆರ್ಟ್ಸ್‌ನ ಸಹಯೋಗದಲ್ಲಿ ನಡೆಯು ತ್ತಿರುವ ’ಕಲಿ–ಕಲಿಸು’ ಯೋಜನೆಯ ಭಾಗವಾಗಿ ಇತ್ತೀಚೆಗೆ ನಡೆದ ಶಿಕ್ಷಕರ ಸಮಾಲೋಚನಾ ಸಭೆಯ ಸಂದರ್ಭದಲ್ಲಿ ಶಿಕ್ಷಕರು ಪಠ್ಯ ಪುಸ್ತಕದ ಹಾಡುಗಳನ್ನು ರಾಗ ಸಂಯೋಜಿಸಿ ಹಾಡುವ ಅಭ್ಯಾಸ ನಡೆಸಿದರು.

ತಲ್ಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಶಂಕರ್ ಅವರ ಅಧ್ಯಕ್ಷತೆಯಲ್ಲಿ ಸಬ್ಲಾಡಿ ಶಾಲೆಯ ಸಹ ಶಿಕ್ಷಕಿ ಗಿರಿಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಯಡ್ತರೆ ಶಾಲೆಯ ಸಹ ಶಿಕ್ಷಕಿ ಲಕ್ಷ್ಮೀ ಬಿ, ಹಟ್ಟಿಯಂಗಡಿಯ ಸಹ ಶಿಕ್ಷಕ ರಮೇಶ್, ಉಪ್ಪಿನಕುದ್ರು ಶಾಲೆಯ ಮುಖ್ಯ ಶಿಕ್ಷಕ ಗೋಪಾಲಕೃಷ್ಣ, ಸಂತ ಫಿಲೋಮಿನ ಶಾಲೆಯ ಮುಖ್ಯ ಶಿಕ್ಷಕಿ ಸಿ.ಲಿಲ್ಲಿ ಮೇರಿ, ಶಿಕ್ಷಕ ಸಂಘದ ಪದಾಧಿಕಾರಿ ಉದಯ ಭಂಡಾರ್ಕಾರ್‌ ಭಾಗಿಗಳಾದರು. ಶಿಕ್ಷಕರಾದ ಜಯಮ್ಮ ಹಾರ್ಮೋ ನಿಯಂ, ರಮೇಶ್ ಮತ್ತು ಚಂದ್ರಕಾಂತ್‌ ತಬಲಾ ವಾದನದಲ್ಲಿ ಸಹಕರಿಸಿದರು. ಸಮೂಹ ಸಂಪನ್ಮೂಲ ವ್ಯಕ್ತಿ ಗಣಪತಿ ಹೋಬಳಿದಾರ್‌ ಸ್ವಾಗತಿಸಿ ನಿರೂಪಿ ಸಿದರು. ಶಂಕರ್‌ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT