ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ: 4.88 ಕೋಟಿ ಅನುದಾನ

Last Updated 8 ಅಕ್ಟೋಬರ್ 2011, 10:25 IST
ಅಕ್ಷರ ಗಾತ್ರ

ಉಡುಪಿ: `ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ಶಿಕ್ಷಣ ಇಲಾಖೆಗೆ ಉಡುಪಿ ಜಿಲ್ಲಾ ಪಂಚಾಯಿತಿಯಿಂದ 2011-12ನೇ ಸಾಲಿಗೆ ರೂ. 4.88 ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ~ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ ಶುಕ್ರವಾರ ತಿಳಿಸಿದರು.

`ಈ ಅನುದಾನದಲ್ಲಿ ಸಿವಿಲ್ ಕಾಮಗಾರಿಗಳಿಗೆ ರೂ. 3.50 ಕೋಟಿ, ಸಮನ್ವಯ ಶಿಕ್ಷಣದಡಿ ವಿವಿಧ ಚಟುವಟಿಕೆಗೆ ರೂ. 1.38 ಕೋಟಿ ಅನುದಾನ ವಿಂಗಡಿಸಲಾಗಿದ್ದು, ವಿವಿಧ ವಲಯವಾರು ಹಂಚಿಕೆ ಮಾಡಲಾಗಿದೆ~ ಎಂದು ಅವರು ಹೇಳಿದರು.

`ಸಿವಿಲ್ ಕಾಮಗಾರಿಗಳಲ್ಲಿ ಬ್ರಹ್ಮಾವರ ವಲಯಕ್ಕೆ 4 ಹೆಚ್ಚುವರಿ ಕೊಠಡಿ, 4 ಮುಖ್ಯ ಶಿಕ್ಷಕರ ಕೊಠಡಿ, 15 ಬಾಲಕರ ಶೌಚಾಲಯ, 7 ಬಾಲಕಿಯರ ಶೌಚಾಲಯ, 8 ಶಾಲೆಗಳಿಗೆ ಕುಡಿಯುವ ನೀರು ಪೂರೈಕೆ ಯೋಜನೆ ಮಂಜೂರಾಗಿದೆ. ಬೈಂದೂರು ವಲಯಕ್ಕೆ 5 ಹೆಚ್ಚುವರಿ ಕೊಠಡಿ, 7 ಮುಖ್ಯ ಶಿಕ್ಷಕರ ಕೊಠಡಿ, 19 ಬಾಲಕರ ಶೌಚಾಲಯ, 29-ಬಾಲಕಿಯರ ಶೌಚಾಲಯ, 12 ಶಾಲೆಗಳಿಗೆ ಕುಡಿಯುವ ನೀರು ಯೋಜನೆ ಮಂಜೂರಾಗಿದೆ.

ಕಾರ್ಕಳ ವಲಯಕ್ಕೆ 2 ಹೆಚ್ಚುವರಿ ಕೊಠಡಿ, 5 ಮುಖ್ಯ ಶಿಕ್ಷಕರ ಕೊಠಡಿ, 4 ಬಾಲಕರ ಶೌಚಾಲಯ, 12 ಬಾಲಕಿಯರ ಶೌಚಾಲಯ, 7 ಶಾಲೆಗಳಿಗೆ ಕುಡಿಯುವ ನೀರು ಯೋಜನೆ ಮಂಜೂರು ಮಾಡಲಾಗಿದೆ.

ಕುಂದಾಪುರ ವಲಯಕ್ಕೆ 4 ಹೆಚ್ಚುವರಿ ಕೊಠಡಿ, 7 ಮುಖ್ಯ ಶಿಕ್ಷಕರ ಕೊಠಡಿ, 12 ಬಾಲಕರ ಶೌಚಾಲಯ, 13 ಬಾಲಕಿಯರ ಶೌಚಾಲಯ, 10 ಶಾಲೆಗಳಿಗೆ ಕುಡಿಯುವ ನೀರು ಯೋಜನೆ ಮಂಜೂರಾಗಿದೆ. ಉಡುಪಿ ವಲಯಕ್ಕೆ ಒಂದು ಹೆಚ್ಚುವರಿ ಕೊಠಡಿ, 4 ಮುಖ್ಯ ಶಿಕ್ಷಕರ ಕೊಠಡಿ, 4 ಬಾಲಕರ ಶೌಚಾಲಯ, 8 ಬಾಲಕಿಯರ  ಶೌಚಾಲಯ, 5 ಶಾಲೆಗೆ ಕುಡಿಯುವ ನೀರು ಯೋಜನೆ ಮಂಜೂರಾಗಿದೆ. ಈ ಕಾಮಗಾರಿಗಳ ಅಂದಾಜು ಪಟ್ಟಿ ಸಿದ್ಧವಾಗಿದ್ದು, ಬಹುತೇಕ ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ~ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT