ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಕ್ರಾಂತಿ ಮಾಡಿದ ಸಂಗನಬಸವ ಶ್ರೀಗಳು

Last Updated 30 ಜುಲೈ 2012, 6:00 IST
ಅಕ್ಷರ ಗಾತ್ರ

ತಾಂಬಾ: `ಬಸವ ಎನ್ನುವುದು ಕೇವಲ ಹೆಸರಲ್ಲ ಅದೊಂದು ಶಕ್ತಿ. 12ನೇ ಶತಮಾನದಲ್ಲಿ ಬಸವಣ್ಣನವರು ವಚನಕ್ರಾಂತಿ  ಮೂಲಕ ವಿಶ್ವದ ಗಮನ ಸೆಳೆದರೆ, ಶ್ರೀ ಸಂಗನಬಸವ ಶ್ರೀಗಳು ಶಿಕ್ಷಣ ಕ್ರಾಂತಿ ಮೂಲಕ  ವಿದ್ಯಾರ್ಥಿಗಳ ಜ್ಞಾನ ದಾಹ ತಣಿಸುವ ಕಾರ್ಯ ನಡೆಸಿದರು~ ಎಂದು ಸಂಗನಬಸವೇಶ್ವರ ವಿದ್ಯಾವರ್ದಕ ಸಂಸ್ಥೆಯ ಚೇರಮನ್ ಜೆ.ಎಸ್. ಹತ್ತಳ್ಳಿ ಅಭಿಪ್ರಾಯಪಟ್ಟರು.

ಅವರು ಗ್ರಾಮದ ಎಸ್.ಎಸ್.ವಿ.ವಿ. ಸಂಘದವರು ಹಮ್ಮಿಕೊಂಡಿದ ಪ್ರವಚನ ಪಿತಾಮಹ ಶ್ರೀ ಸಂಗನಬಸವ ಶ್ರೀಗಳ 112ನೇ ಜಯಂತ್ಯುತ್ಸವ ಅಧ್ಯಕ್ಷತೆ ವಹಿಸಿ ವಿದ್ಯೆ ಎನ್ನುವುದು ತಪಸ್ಸು ಇದ್ದ ಹಾಗೆ ಕಷ್ಟಪಡದೆ ನಮಗೆ ಲಭಿಸುವುದಿಲ್ಲ. ನಮ್ಮ ಭವಿಷ್ಯದ ಶಿಲ್ಪಿಗಳು ನಾವೆ ಆಗಿದ್ದೆವೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಸೂಕ್ತ ಪ್ರತಿಭೆ ಅಡಗಿರುತ್ತದೆ. ಅದನ್ನು ಶಿಕ್ಷಣದ ಮೂಲಕ ಹೊರಗೆಳೆಯುವ ಪ್ರಯತ್ನ ನಡೆಸಬೇಕು ಎಂದರು.

ಮುಖ್ಯ ಅತಿಥಿಗಳಾಗಿದ್ದ ಎಸ್.ಎಸ್. ಕನ್ನಮಡಿ, ಸಂಸ್ಕಾರವಿದ್ದರೆ ಉತ್ತಮ ಜೀವನ ನಡೆಸಲು ಸಾಧ್ಯವಿದೆ. ಹಾಗಾಗಿ ಜೀವನದಲ್ಲಿ ಸಂಸ್ಕಾರ ಬಹುಮುರ್ಖಯ. ಈ ಭಾಗದ ಜನರಿಗೆ ಸಂಸ್ಕಾರ ನೀಡಿದ ಸಂಗನಬಸವ ಶ್ರೀಗಳ ಕಾರ್ಯ ಸ್ತುತ್ಯಾರ್ಹ ಎಂದರು.

ಬಂಥನಾಳ ಮಠದ ಪೀಠಾಧಿಕಾರಿ ಶ್ರೀ ವೃಷಭಲಿಂಗ ಶ್ರೀಗಳು ಆಶೀರ್ವಚನ ನೀಡಿ, ಜಿಲ್ಲೆಯಲ್ಲಿ ಅಲ್ಲದೆ ಇಡೀ ಕರ್ನಾಟಕದಲ್ಲಿ ಶ್ರೀಗಳು ತಮ್ಮ ಜೋಳಿಗೆಯಿಂದ ಶಿಕ್ಷಣ ಸಂಸ್ಥೆಯನ್ನು ಕಟ್ಟಿಸಿ ಕೊಟ್ಟರು ಎಂದು ಹೇಳಿದರು.  
ಕಾರ್ಯಕ್ರಮದಲ್ಲಿ ಪ್ರಭುದೇವರ ಬೆಟ್ಟದ ಸಂಪಗಾಂವ ಮಹಾರಾಜರು ನೇತೃತ್ವ ವಹಿಸಿದ್ದರು. ತಾ.ಪಂ. ಮಾಜಿ ಸದಸ್ಯ  ಸುಭಾಷ ಕಲ್ಲೂರ, ಸಿದಯ್ಯ ವಸ್ತ್ರದ,ವಿಠಲ ನವದಗಿ,ಬಿ.ಜಿ.ನಿಂಬಾಳ,ಅಶೋಕ ಬಾಗಲಕೋಟಿ, ಎಸ್.ಎಸ್. ಹೊಸಮನಿ, ಎನ್.ಎ. ವಾಲಿ, ವಿ.ಪಿ. ಮರಡಿ, ಎಸ್.ಎಸ್. ಕನ್ನಾಳ, ಜೆ.ಆರ್. ಪೂಜಾರಿ, ಎಸ್.ಡಿ. ಬಂಟನೂರ, ಬಿ.ಎಸ್. ಗೂಗದಡ್ಡಿ ಮುಂತಾದವರು ಪಾಲ್ಗೊಂಡಿದ್ದರು.

ಉದ್ಘಾಟನೆ
ತಾಂಬಾ
: ಅಥರ್ಗಾ ಮತಕ್ಷೇತ್ರದ  ಜಿಲ್ಲಾ ಪಂಚಾಯಿತಿ ಉಪ ಚುನಾವಣೆ ನಿಮಿತ್ತ ಗ್ರಾಮದ ಮೈಸೂರ ಮಹಾರಾಜಾ ಸಂಕೀರ್ಣದಲ್ಲಿ ಜಾತ್ಯತೀತ ಜನತಾದಳದ  ಕಾರ್ಯಾಲಯವನ್ನು ಮಾಜಿ ಸಚಿವ ಎಂ.ಸಿ. ಮನಗೂಳಿ ಜ್ಯೋತಿ ಬೆಳಗಿಸುವ ಮೂಲಕ  ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಬಿ.ಜೆ.ಪಿ ಸರ್ಕಾರ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ರೈತರಿಗೆ ಅನ್ಯಾಯ ಮಾಡಿದೆ. ರೈತರಿಗಾಗಿ ಶ್ರಮಿಸುವ ಜೆ.ಡಿ.ಎಸ್‌ಗೆ  ಬೆಂಬಲಿಸಿ ಈ ಭಾಗದ  ಮತದಾರರು ಕವಿತಾ ಚಲುವಾದಿ ಅವರಿಗೆ ತಮ್ಮ ಮತ ನೀಡಬೇಕೆಂದರು.

ಕಾರ್ಯಕ್ರಮದಲ್ಲಿ ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಎಂ.ಆರ್.ಪಾಟೀಲ, ತಾ.ಪಂ. ಉಪಾಧ್ಯಕ್ಷ ಬಿ.ಡಿ. ಪಾಟೀಲ, ಎಂ.ಸಿ.ಮುಲ್ಲಾ, ಎಮ್ಮಾಜಿ ಸಾಳಂಕಿ, ಪ್ರಕಾಶ ಹಿರೇಕುರುಬರ, ಶಿವಾನಂದ ಹಡಪದ, ಮಲ್ಲು ಶಂಬೇವಾಡಿ, ಸುಭಾಷ ಅಳಗುಂಡಗಿ, ಮೋಮಿನ್, ಬಸನಗೌಡ ಪಾಟೀಲ, ಶ್ರೀಶೈಲಗೌಡ ಪಾಟೀಲ, ಸಿದ್ದು ಡಂಗಾ, ಇಸಾಕ್ ಸೌದಾಗರ, ಮುತ್ತು ಪೂಜಾರಿ, ಶಿವಪ್ಪ ಹಿಪ್ಪರಗಿ, ಅಡೆಪ್ಪ ರೊಟ್ಟಿ, ಚನ್ನಮಲ್ಲಪ್ಪ ದೇಗಿನಾಳ, ಸಾಯಬಣ್ಣ ಸವಳಿ ಉಪಸ್ಥಿತರಿದ್ದರು.

ಮಲ್ಲಯ್ಯ ಸಾರಂಗಮಠ ಸಾನ್ನಿಧ್ಯ ವಹಿಸಿದ್ದರು. ಶಂಕರ ಪ್ಯಾಟಿ ಸ್ವಾಗತಿಸಿದರು. ಗೋಪಾಲ ಅವರಾದಿ ನಿರೂಪಿಸಿದರು. ಜಕ್ಕಪ್ಪ ಹತ್ತಳ್ಳಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT