ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಕ್ಷೇತ್ರಕ್ಕೆ ಸ್ವಾಯತ್ತತೆ ಬೇಕು: ಸತೀಶ ಕುಲಕರ್ಣಿ

Last Updated 6 ಫೆಬ್ರುವರಿ 2012, 7:40 IST
ಅಕ್ಷರ ಗಾತ್ರ

ಹಾವೇರಿ: `ಶಿಕ್ಷಣ ಪಡೆದ ಯುವ ಜನತೆ ಸರ್ಕಾರಿ ನೌಕರಿಯನ್ನೆ ಅವಲಂಬಿಸದೇ ಸ್ವಯಂ ಉದ್ಯೋಗ ಸೃಷ್ಟಿಸಿಕೊಳ್ಳುವತ್ತ ಸಾಗುವುದು ಅವಶ್ಯಕವಾಗಿದೆ~ ಎಂದು ಸಾಹಿತಿ ಸತೀಶ ಕುಲಕರ್ಣಿ ಹೇಳಿದರು.
ನಗರದ ಹೊಸಮಠ ಸಮುದಾಯ ಭವನದಲ್ಲಿ ನಡೆದ ಶರಣ ಸಂಸ್ಕೃತಿ ಉತ್ಸವ 2012ರ ಚಿಂತನಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸ್ವಯಂ ಉದ್ಯೋಗದಿಂದ ಸ್ವಾವ ಲಂಬಿ ಭಾರತ ನಿರ್ಮಾಣ ಮಾಡಬಹು ದಾಗಿದೆ ಎಂದ ಅವರು ಆರ್ಥಿಕ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತದೆ ಎಂದ ಅವರು,

ಶಿಕ್ಷಣ ವ್ಯವಸ್ಥೆಗೆ ಸ್ವಾಯತ್ತತೆ ಇರಬೇಕು. ಆದರೆ ಶಿಕ್ಷಣ ಸರ್ಕಾರದ ಆಧೀನದಲ್ಲಿರುವುದರಿಂದ ರಾಜಕೀಯ ಶಿಕ್ಷಣದಲ್ಲಿ ಬೆರೆತು ಶಿಕ್ಷಣ ತಜ್ಞರಿಗೆ, ಪದವಿಧರರಿಗೆ ಬೆಲೆ ಇಲ್ಲದಂತಾಗಿದೆ ಎಂದು ಅಭಿಪ್ರಾಯಪಟ್ಟರು. ನಮ್ಮ ದೇಶದಲ್ಲಿ ಹೆಚ್ಚು ಜನಸಂಖ್ಯೆ ಪ್ರಮಾಣ ಇದ್ದು ಸರ್ಕಾರದ ಯೋಜನೆ ಗಳು ಸರ್ವರಿಗೂ ತಲುಪುವಲ್ಲಿ ಸಂಪೂರ್ಣ ವಾಗಿ ವಿಫಲವಾಗುತ್ತಿವೆ. ಹೊಸ ಹೊಸ ತಂತ್ರಜ್ಞಾನ, ಆವಿಷ್ಕಾರ ಗಳು ನಿರುದ್ಯೋಗವನ್ನು ಹೆಚ್ಚಿಸಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಶಿವರಾಜ ಸಜ್ಜನರ ಮಾತನಾಡಿ, ದೂರದರ್ಶನ, ಸಿನಿಮಾ ಸೇರಿದಂತೆ ವಿವಿಧ ಮಾಧ್ಯಮಗಳ ಪ್ರಭಾವದಿಂದ ದೇಶದ ಸಂಸ್ಕೃತಿಯನ್ನು ಮರೆತು ಪಾಶ್ವಿಮಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವುದು ವಿಷಾದನೀಯ ಎಂದರು.

ಬಸವೇಶ್ವರ ಬಿ.ಇಡಿ. ಕಾಲೇಜಿನ ಪ್ರಶಿಕ್ಷಣಾರ್ಥಿ ಪುಷ್ಪಾ ಚೌಕಿಮಠ ಮಾತನಾಡಿ, ದುಡಿಯುವ ಕೈಗಳಿಗೆ ಸರಿಯಾದ ಕೆಲಸ ಸಿಗದೇ ಇರುವುದು ದೇಶ ಅಭಿವೃದ್ಧಿಯಿಂದ ಹಿಂದುಳಿ ಯುತ್ತಿದೆ. ಸರ್ಕಾರ ಯುವ ಜನತೆಗೆ ಹೊಸ-ಹೊಸ  ಉದ್ಯೋಗಾವ ಕಾಶಗಳನ್ನು ಸೃಷ್ಠಿಸಿ ದೊರಕಿಸಿ ಕೊಡುವತ್ತ ಚಿಂತಿಸಬೇಕಿದೆ ಎಂದರು.

ಚಿಂತನಗೋಷ್ಠಿಯಲ್ಲಿ ಹೊಸರಿತ್ತಿ ವೈಧ್ಯ ಡಾ. ಮೃತ್ಯುಂಜಯ ಹಿರೇಮಠ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಲಿಂಗನಾಯಕನಹಳ್ಳಿಯ ಚನ್ನವೀರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಅಧ್ಯಕ್ಷತೆಯನ್ನು ಹೊಸ ಮಠದ ಬಸವಶಾಂತಲಿಂಗ ಶ್ರೀಗಳು ವಹಿಸಿದ್ದರು. ಗೋಷ್ಠಿಯಲ್ಲಿ ಜಿ.ಪಂ. ಮಾಜಿ ಅಧ್ಯಕ್ಷ ಡಾ. ಮಲ್ಲೇಶಪ್ಪ ಹರಿಜನ, ರಾಜೇಂದ್ರ ಸಜ್ಜನರ, ರುದ್ರಪ್ಪ ಲಮಾಣಿ, ಶೋಭಾತಾಯಿ ಮಾಗಾವಿ ಸೇರಿದಂತೆ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT