ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಧರ್ಮದ ಅವಿಭಾಜ್ಯ ಅಂಗ

Last Updated 6 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಮಾಗಡಿ: ಶಿಕ್ಷಣ ಎಂಬುದು ಧರ್ಮದ ಒಂದು ಅವಿಭಾಜ್ಯ ಅಂಗ. ಇಂದಿನ ಶಿಕ್ಷಕರ ನಡೆನುಡಿ ಕಂಡರೆ ನಮಗೆ ಬೇಸರವಾಗುತ್ತಿದೆ. ಆದರ್ಶ ಶಿಕ್ಷಕರಾಗಬೇಕಾದರೆ ಯಾವಾಗಲೂ ಮೇಲ್ಪಂಕ್ತಿಯ ನಡೆನುಡಿ ಬೆಳೆಸಿಕೊಳ್ಳುವ ಅಗತ್ಯವಿದೆ ಎಂದು ವಿಚಾರವಾದಿ ಡಾ.ಕೆ.ಮರುಳಸಿದ್ದಪ್ಪ ನುಡಿದರು.

ಅವರು ಶಿಕ್ಷಕರ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ನಾಟಕ ಶಾಲೆಯ ಕಲಾವಿದರು ಅಭಿನಯಿಸಿದ `ಸ್ಟೋನ್ ಸೂಪ್~ ನಾಟಕ ಉದ್ಘಾಟಿಸಿ ಮಾತನಾಡಿದರು. ಶಿಕ್ಷಕರು ಸಮಾಜ ಬದಲಾವಣೆಯ ಗುರು.  ಶಿಕ್ಷಣವನ್ನು ಸರಿಯಾದ ರೀತಿಯಲ್ಲಿ ಪಡೆದು  ಸಮಾಜಮುಖಿಯಾಗಿ ಬೆಳೆಯಬೇಕು ಎಂದರು.

`ಶಿಕ್ಷಕರಿಗೆ ರಂಗ ಮಾಧ್ಯಮದ ಮೂಲಕ ಪಾಠ ಕಲಿಸುವ ಅಗತ್ಯವಿದೆ~ ಎಂದು ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕ ಚಿದಂಬರ ರಾವ್ ಜಂಬೆ ತಿಳಿಸಿದರು. ಕಲಾವಿದರು ಸ್ಟೋನ್ ಸೂಪ್ ನಾಟಕವನ್ನು ಅಭಿನಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT