ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಪಡೆಯಿರಿ; ಸ್ವಾಭಿಮಾನದ ಜೀವನ ನಡೆಸಿ

Last Updated 12 ಸೆಪ್ಟೆಂಬರ್ 2011, 5:50 IST
ಅಕ್ಷರ ಗಾತ್ರ

ಆಲಮಟ್ಟಿ: ಮುಸ್ಲಿಂ ಸಮಾಜ ಶೈಕ್ಷಣಿಕ ಹಾಗೂ ಆರ್ಥಿಕ ವಾಗಿ ಹಿಂದುಳಿದಿದ್ದು ಸಮಾಜದ ಪ್ರತಿಯೊಬ್ಬರೂ ಸ್ವಾಭಿ ಮಾನ ಹಾಗೂ ಸ್ವಾವಲಂಬಿ ಬದುಕು ನಡೆಸಲು ಶಿಕ್ಷಣ ಪಡೆ ಯಬೇಕು ಎಂದು ಮುಸ್ಲಿಂ ಸಮಾಜದ ಬಸವನ ಬಾಗೇವಾಡಿ ತಾಲ್ಲೂಕು ಘಟಕದ ಅಧ್ಯಕ್ಷ ಉಸ್ಮಾನ್ ಪಟೇಲ ಕೊಲ್ಹಾರ ಹೇಳಿದರು.

ನಿಡಗುಂದಿ ಪಟ್ಟಣದ ಬಿಲಾಲ ಮಸೀದಿಯಲ್ಲಿ ಜರುಗಿದ ಸಮಾಜದ ಸಮಾವೇಶ ಉದ್ಘಾಟಿಸಿ ಅವರು ಮಾತ ನಾಡಿದರು.

ಎಲ್ಲ ರಾಜಕೀಯ ಪಕ್ಷದವರು ಮುಸ್ಲಿಂ ಸಮಾಜವನ್ನು ವೋಟ್ ಬ್ಯಾಂಕ್ ಆಗಿ ಬಳಸಿಕೊಂಡಿದ್ದಾರೆ. ಆದರೆ ಸಮಾಜದ ಏಳಿಗೆಗಾಗಿ ಯಾರೂ ಪ್ರಾಮಾಣಿಕ ಪ್ರಯತ್ನ ನಡೆ ಸಿಲ್ಲ ಎಂದು ಅವರು ದೂರಿದರು.

ಅಧ್ಯಾಪಕ ಬಿ.ಎಸ್.ಪಠಾಣ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದು ಮುಸ್ಲಿಂ ಸಮಾಜದ ಯುವಕರು ಸರ ಕಾರದ ಯೋಜನೆಗಳನ್ನು ಸದುಪಯೋಗ ಮಾಡಿಕೊಂಡು ದೇಶದ ಮುಖ್ಯವಾಹಿನಿಯಲ್ಲಿ ಸೇರಲು ಮುಂದಾಗಬೇಕು  ಎಂದರು.

ಸಮಾಜದ ಮುಖಂಡರಾದ ಮೌಲಾನಾ ಕೋಲಾರ, ಸಲೀಂ ಅತ್ತಾರ, ಅಲಾ ಭಕ್ಷ್ ವಿಜಾಪುರ, ಎಚ್.ಬಿ.ಪಕಾಲಿ, ಅಲ್ತಾಫ್ ನಿಡಗುಂದಿ ಮುಂತಾದವರು ಮಾತನಾಡಿದರು.

ಸಮಾಜ ಮುಖಂಡರ ಸನ್ಮಾನ: ಸಮಾರಂಭದಲ್ಲಿ ನಿಡ ಗುಂದಿ ಅಂಜುಮನ್ ಇಸ್ಲಾಮ್ ಕಮಿಟಿಯ ಅಧ್ಯಕ್ಷ ಎಂ.ಎ. ಖಾಜಿ, ಅಲ್ಪಸಂಖ್ಯಾತ ಬ್ಯಾಂಕಿನ ಅಧ್ಯಕ್ಷ ಎಂ.ಎಂ.ಅತ್ತಾರ, ಮುಸ್ಲಿಂ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಉಸ್ಮಾನ್ ಪಟೇಲ ಕೋಲಾರ, ತಾ.ಪಂ. ಮಾಜಿ ಸದಸ್ಯೆ ಫಾತಿಮಾ ಗಿರಗಾಂವಿ ಕೋಲಾರ, ಹುಸೇನ್‌ಸಾಬ ಲಷ್ಕರಿ ಅವರನ್ನು ಗ್ರಾ.ಪಂ.ಸದಸ್ಯ ಚಾಂದ್‌ಸಾಬ್ ಬಾಗವಾನ್ ಹಾಗೂ ನೂರ್‌ಅಲಿ ಹೆರಕಲ್ ಸನ್ಮಾನಿಸಿದರು.

ಬಸವನ ಬಾಗೇವಾಡಿ ತಾಲ್ಲೂಕಿನ ಮುಸ್ಲಿಂ ಸಮಾಜದ ಅಭಿವೃದ್ಧಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಯಿತು. ಶೈಕ್ಷಣಿಕವಾಗಿ ಹಿಂದುಳಿದ ಮಕ್ಕಳಿಗೆ ಸಹಾಯ ನೀಡಲು ನಿರ್ಧರಿಸಲಾಯಿತು. ಪ್ರಾರಂಭದಲ್ಲಿ ಮೌಲಾನಾ ಮುಬಾರಕ್ ಕೊಲ್ಹಾರ ಕುರಾನ್ ಪಠಣ ಮಾಡಿದರು. ಮಹ್ಮದ್ ಹುಸೇನ್ ಹೊನ್ಯಾಳ ನಾತ್ ಹಾಡಿದರು. ಎ.ಕೆ.ಕುಡಚಿ, ಎಸ್.ಎಫ್.ಜಾಲಿಹಾಳ ಮುಂತಾ ದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT