ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣದ ಜತೆಗೆ ಕಲೆಗೂ ಮಹತ್ವ ನೀಡಿ

Last Updated 19 ಸೆಪ್ಟೆಂಬರ್ 2011, 9:25 IST
ಅಕ್ಷರ ಗಾತ್ರ

ಬೀದರ್: ಕೇವಲ ಶೈಕ್ಷಣಿಕ ಸಂಗತಿಗಳಿಗೆ ಮಾತ್ರ ಮಹತ್ವ ನೀಡದೇ ಕಲೆ, ಸಾಹಿತ್ಯ, ಕ್ರೀಡೆಗಳಲ್ಲಿ ಭಾಗವಹಿಸುವುದಕ್ಕೆ ಮಕ್ಕಳಿಗೆ ಅನುವು ಮಾಡಿಕೊಡಬೇಕು ಎಂದು ಶಾಸಕ ರಹೀಮ್‌ಖಾನ್ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯ ಅಂಗವಾಗಿ ಶನಿವಾರ ಮಕ್ಕಳಿಗಾಗಿ ಏರ್ಪಡಿಸಿದ್ದ ಚಿತ್ರಕಲೆ ಮತ್ತು ರಂಗೋಲಿ ಸ್ಪರ್ಧೆಯ ಬಹುಮಾನ ವಿತರಿಸಿ ಮಾತನಾಡಿದರು.

ಚಿಕ್ಕ ಚಿತ್ರದಲ್ಲಿ ಬಹಳ ದೊಡ್ಡ ಸಂದೇಶವನ್ನು ಪ್ರತಿ ಬಿಂಬಿಸುವುದೇ ಚಿತ್ರಕಲೆ. ಮಕ್ಕಳಲ್ಲಿ ನಿಜವಾಗಿ ಒಳ್ಳೆ ಶಕ್ತಿ ಅಡಗಿದೆ. ನೂರಾರು ಪುಟಗಳು ಬರೆಯಬಹುದು ಆದರೆ ಒಂದು ಚಿತ್ರ ಬಿಡಿಸುವುದು ಕಷ್ಟ ಎಂದು ಅವರು ಹೇಳಿದರು.

ಚಕ್ರವರ್ತಿ ಸೂಲಿಬೆಲೆ ಅವರು ವಿಶೇಷ ಉಪನ್ಯಾಸ ನೀಡಿ ಹೈದರಾಬಾದ್ ಪ್ರಾಂತ್ಯ ವಿಮೋಚನೆಯ ವಿವರ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ರೇವುನಾಯಕ್ ಬೆಳಮಗಿ ಅವರು ಸ್ಪರ್ಧೆಯನ್ನು ಉದ್ಘಾಟಿಸಿದರು.

ಸಂಘದ ಅಧ್ಯಕ್ಷ ಬಸವರಾಜ ಭರಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ  ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಬಾಬು ವಾಲಿ ಅವರನ್ನು ಸನ್ಮಾನಿಸಲಾಯಿತು. ತೀರ್ಪುಗಾರರಾಗಿ ಮಹ್ಮದ ಷರೀಫ, ರೇವಣಪ್ಪ ಧೂಳೆ, ಕಾಶಿನಾಥ ತಂಗಾ, ಮಂಗಲಾ, ವೀಕ್ಟೋರಾಜ, ಮಾಣಿಕ ಭಾಗವಹಿಸಿದ್ದರು. 

ವಿಜೇತರಾದವರಿಗೆ ಪ್ರಥಮ ಬಹುಮಾನ ರೂ. 3000, ದ್ವಿತೀಯ ಬಹುಮಾನ ರೂ. 2000 ಹಾಗೂ ತೃತೀಯ ಬಹುಮಾನ ರೂ. 1000 ರೂ ನೀಡಿ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಪ್ರೌಢಶಾಲೆ ವಿಭಾಗದ ಸ್ಫರ್ಧೆಯಲ್ಲಿ 85 ಮಕ್ಕಳು ಭಾಗವಹಿಸಿದ್ದರು. ಮೊದಲನೇ ಬಹುಮಾನ ಮಿಲಿನಿಯಂ ಶಾಲೆಯ ಸಿದ್ಧಾರ್ಥ ಮೊರೆ, ಎರಡನೇ ಬಹುಮಾನ ಗುರುಕುಲ ಕರಡ್ಯಾಳದ ಶಿವಶರಣಯ್ಯ, ಮೂರನೇ ಬಹುಮಾನ ಸೇಂಟ ಜೊಸೆಫ್ ಶಾಲೆಯ ಕಿರಣ. 

98 ಮಕ್ಕಳು ಕಾಲೇಜು ವಿಭಾಗದ ಚಿತ್ರಕಲಾ  ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮೊದಲ ಬಹುಮಾನ ಹುಮನಾಬಾದ್‌ನ ಚಂದ್ರಕಲಾ ಆರ್., ದ್ವಿತಿಯ ಬಹುಮಾನ ಸಯ್ಯದಾ ಜುವೆರಿಯಾ ಅಂಜುಮ್ ಬೀದರ, ತೃತೀಯ ಬಹುಮಾನ ಹುಮನಾಬಾದ್‌ನ ಅರ್ಚನಾ ಮೂಲಗೆ ಪಡೆದರು.

ಚಿತ್ರಕಲಾ ಕಾಲೇಜು ವಿಭಾಗದಲ್ಲಿ 56 ಮಕ್ಕಳು ಪಾಲ್ಗೊಂಡು ಮೊದಲನೆ ಬಹುಮಾನ: ಕಿರಣ ದಿಲೀಪ ಬಿರಾದಾರ ಎಸ್.ಎಮ್. ಪಂಡಿತ ಚಿತ್ರಕಲಾ ಕಾಲೇಜು, ದ್ವಿತೀಯ ಬಹುಮಾನ : ಮಂಜುನಾಥ ಸೂರ್ಯಕಾಂತ ಹರಳಯ್ಯ ಚಿತ್ರಕಲಾ ಕಾಲೇಜು, ತೃತೀಯ ಬಹುಮಾನ: ಹಣಮಂತ ಪಿ.ಬರೂರ ಎಸ್.ಎಮ್. ಪಂಡಿತ್ ಚಿತ್ರಕಲಾ ಕಾಲೇಜು. 

ರಂಗೋಲಿ ಸ್ಪರ್ಧೆಯಲ್ಲಿ  37 ಹೆಣ್ಣುಮಕ್ಕಳು ಪಾಲ್ಗೊಂಡು, ಮೊದಲನೇ ಬಹುಮಾನ: ರಾಧಿಕಾ ಯೋಗೇಶ ಚಿತ್ರಕಲಾ ಕಾಲೇಜ, ದ್ವಿತೀಯ ಬಹುಮಾನ: ಶೃತಿ. ಜಿ. ಹಾಗೂ ಪೂಜಾ ವಿಜಯಕುಮಾರ, ತೃತಿಯಾ ಬಹುಮಾನ: ಅಂಜುದೇವಿ ಹಾಗೂ ಸುರೇಖಾ ಗಾದಗಿ ಸಮಾಧಾನಕರ ಬಹುಮಾನ: ಸರಿತಾ ಸಂಗಪ್ಪಾ ಸರಕಾರಿ ಐ.ಟಿ.ಐ., 

ಉಪಾಧ್ಯಕ್ಷರಾದ ಕಾಶಿನಾಥ ಭೆಂಢೆ, ಪ್ರೊ. ರಾಜಶೇಖರ ಮಂಗಲಗಿ, ಅನ್ಸಾರ ಉಲ್ಲಾಬೇಗ, ಬಿ.ಎನ್.ಸ್ವಾಮಿ, ಅಶೋಕ ಬೆಲ್ದಾರ, ಮಲ್ಕೇಶ್ವರ ಗಣಪತಿ ಉಪಸ್ಥಿತರಿದ್ದರು. 

ಶಿವಶಂಕರ ಟೋಕರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜಶೇಖರ ಮಂಗಲಗಿ ನಿರ್ವಹಿಸಿದರು. ಡಿ. ಝಾಕಿರ್ ಹುಸೇನ್ ವಂದಿಸಿದರು.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT