ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣದಲ್ಲಿ ಮೌಲ್ಯಗಳು ಅವಶ್ಯ: ಪಾಟೀಲ

Last Updated 9 ಅಕ್ಟೋಬರ್ 2012, 10:05 IST
ಅಕ್ಷರ ಗಾತ್ರ

ರೋಣ: ಸಮಾಜದಲ್ಲಿ ಶಿಕ್ಷಕರಿಗೆ ಉನ್ನತ ಸ್ಥಾನವಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರು   ಮೌಲ್ಯಗಳನ್ನು ಕಾಪಾ ಡುವುದು ಅತಿ ಅವಶ್ಯ ಎಂದು ಹಾವೇರಿ ಯುವ ಕಾಂಗ್ರೆಸ್ ಉಪಾಧ್ಯಕ್ಷ ಸಂಗನಗೌಡ್ರ ಪಾಟೀಲ ಹೇಳಿದರು.

 ರಾಜೀವ್ ಗಾಂಧೀ ಶಿಕ್ಷಣ ಸಮಿತಿ ಬಿ.ಎಡ್.ಕಾಲೇಜಿನಲ್ಲಿ ಪ್ರಶಿಕ್ಷಣಾರ್ಥಿ ಗಳ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದೀಪದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.  ಶಿಕ್ಷಕರು ಸಮಾಜವನ್ನು ಪ್ರಗತಿಯತ್ತ ಮುನ್ನಡೆಸಲು ಕಾರ್ಯೋನ್ಮುಖ ವಾಗಬೇಕು ಎಂದು ಹೇಳಿದರು.

ಸಮಾಜದಲ್ಲಿನ  ಭ್ರಷ್ಟಾಚಾರ ಹೊಗಲಾಡಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.  ಈ ನಿಟ್ಟಿನಲ್ಲಿ ಪ್ರ ಶಿಕ್ಷಣಾರ್ಥಿಗಳು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಹೇಳಿದರು.

ಅನಿಲ ವೈದ್ಯ ಮಾತನಾಡಿ. ಉತ್ತಮ ವಿದ್ಯಾರ್ಥಿಯಾಗಿ ರೂಪ ಗೊಳ್ಳಲು ಜ್ಷಾನ ಅವಶ್ಯಕವಾಗಿದ್ದು ಉತ್ತಮ ಜ್ಷಾನ ಹೊಂದಲು ಗುರುವಿನ ಜೊತೆ ಉತ್ತಮ ನಡೆತೆ ಹೊಂದಬೇಕು ಎಂದು ಅಭಿಪ್ರಾಯ ಪಟ್ಟರು.
ಬಿ.ಎಪ್.ಚೇಗರೆಡ್ಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಮಾರಂಭದಲ್ಲಿ ಮಾಜಿ ಶಾಸಕ ಜಿ.ಎಸ್.ಪಾಟೀಲ, ಪ್ರಾಚಾರ್ಯ ವೈ. ಎನ್ ಪಾಪಣ್ಣವರ. ಸಿದ್ದಪ್ಪ. ವಿ. ಬಿ.ಸೋಮನಕಟ್ಟಿಮಠ. ಎಸ್,ಆರ್. ಐಹೊಳ್ಳಿ. ಎಸ್.ಎಸ್.ಗೋಂದಿ. ಎಮ್.ಎಸ್.ಕೋರಿ. ಎಸ್.ಎಸ್. ಗೌಡರ್. ವೀಣಾ ಬಗರೆ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT