ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣದಿಂದ ಕ್ರಾಂತಿ-ಶ್ಲಾಘನೀಯ: ಪೂಜಾರಿ

Last Updated 4 ಜನವರಿ 2012, 6:15 IST
ಅಕ್ಷರ ಗಾತ್ರ

ಸುರತ್ಕಲ್: ಕಾಟಿಪಳ್ಳ ಪುನರ್ವಸತಿ ಪ್ರದೇಶದಲ್ಲಿ ಶಿಕ್ಷಣದ ಚಿಂತನೆಯ ಕನಸು ಕಂಡು ಜಿಲ್ಲೆಯಲ್ಲೇ ಮಹತ್ವದ ಸಾಧನೆಗೆ ಕಾರಣಕರ್ತರಾದ ಪಿ.ಸಾದು ಪೂಜಾರಿ ಅವರ ಶ್ರಮ ಶ್ಲಾಘನೀಯ. ಶಿಕ್ಷಣ ಕ್ರಾಂತಿಯ ಸಾಧಕರಾಗಿ ಅವರು ಹೊರಹೊಮ್ಮಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಹೇಳಿದರು.

ಕಾಟಿಪಳ್ಳ ಬ್ರಹ್ಮಶ್ರೀ ನಾರಾಯಣಗುರು ಶಿಕ್ಷಣ ಸಂಸ್ಥೆ ಶನಿವಾರ ಹಮ್ಮಿಕೊಂಡಿದ್ದ ರಜತಮಹೋತ್ಸವದಲ್ಲಿ ಸ್ಮರಣ ಸಂಚಿಕೆ ಬಿಡುಗಡೆಮಾಡಿ ಅವರು ಮಾತನಾಡಿದರು.

ನಿಟ್ಟೆ ವಿದ್ಯಾ ಸಂಸ್ಥೆ ಅಧ್ಯಕ್ಷ ಎನ್.ವಿನಯ ಹೆಗ್ಡೆ ಮಾತನಾಡಿ, ಮೌಲ್ಯಯುತ ಶಿಕ್ಷಣ ಇಂದಿನ ಅಗತ್ಯವಾಗಿದ್ದು, ವಿದ್ಯಾರ್ಥಿಗಳು ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದರು. ಮಾಜಿ ಸಂಸದ ವಿನಯಕುಮಾರ್ ಸೊರಕೆ ಅಧ್ಯಕ್ಷತೆ ವಹಿಸಿದ್ದರು.

ಮುಂಬೈ ಬಿಲ್ಲವ ಸಂಘ ಉಪಾಧ್ಯಕ್ಷ ಎಲ್.ವಿ. ಅಮೀನ್, ಟ್ರಸ್ಟಿಗಳಾದ ಬಿ.ಕೆ.ತಾರಾನಾಥ, ಕೃಷ್ಣಪ್ಪ ಕೋಟ್ಯಾನ್, ಭೋಜ ಆಂಚನ್ ಮಧ್ಯ, ರಾಜಾರಾಮ ಸಾಲ್ಯಾನ್, ಭೋಜರಾಜ ಮುಂಬೈ, ದಾನಿ ರಾಮಯ್ಯ ಪೂಜಾರಿ, ಆನಂದ ಅಮೀನ್, ಹಳೆವಿದ್ಯಾರ್ಥಿ ಸೂರ್ಯ ಬೆಂಗಳೂರು, ಸಂಸ್ಥೆಯಲ್ಲಿ ಸುಮಾರು 15ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಶಾಸಕ ಅಭಯಚಂದ್ರ ಜೈನ್, ಯು.ಟಿ.ಖಾದರ್, ರಜತಮಹೋತ್ಸವ ಸಮಿತಿ ಉಪಾಧ್ಯಕ್ಷ ಕೆ.ಭೋಜರಾಜ ಮುಂಬೈ, ಜನಜಾಗೃತಿ ವೇದಿಕೆ ದ.ಕ.ಜಿಲ್ಲಾ ಘಟಕ ಅಧ್ಯಕ್ಷ ಕೆ.ಸದಾಶಿವ ಶೆಟ್ಟಿ, ನಿವೃತ್ತ ಪ್ರಾಚಾರ್ಯ ಪಿ.ಕೆ.ಮೊಲಿ, ಸ್ಮರಣ ಸಂಚಿಕೆ ಸಂಪಾದಕ ಡಾ.ವಾಮನ ನಂದಾವರ, ಚಂದ್ರಕಲಾ ನಂದಾವರ, ಟ್ರಸ್ಟ್ ಸಂಚಾಲಕ ಪಿ.ದಯಾಕರ್, ಅಧ್ಯಕ್ಷ ಪಿ.ಸಾದು ಪೂಜಾರಿ, ಮುಖ್ಯಶಿಕ್ಷಕಿ ಪುಷ್ಪಲತಾ, ಸಂಯುಕ್ತ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಉಮೇಶ್ ಕರ್ಕೇರ, ಧರ್ಮಪಾಲ್, ಪರಮಾನಂದ ಸಾಲ್ಯಾನ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT