ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಗ್ಗಾವಿ: ಜ್ಞಾನೇಶ್ವರಿ ದೇವಿ ಭವ್ಯ ರಥೋತ್ಸವ

Last Updated 28 ಅಕ್ಟೋಬರ್ 2011, 10:00 IST
ಅಕ್ಷರ ಗಾತ್ರ

ಶಿಗ್ಗಾವಿ: ದೈವಜ್ಞ ದರ್ಶನ ವಿಶೇಷ ಜಾಗೃತಿ ನಿಮಿತ್ಯ ಪಟ್ಟಣಕ್ಕೆ ಆಗಮಿಸಿದ ರಾಜರಾಜೇಶ್ವರಿ ಸ್ವರೂಪಿಣಿ ಶ್ರೀ ಜ್ಞಾನೇಶ್ವರಿ ದೇವಿಯ ದಿವ್ಯ ರಥೋತ್ಸವವನ್ನು ಸಮಾಜದ ಮುಖಂಡರು ಸಡಗರದಿಂದ ಸ್ವಾಗತಿಸಿದರು.

ನಂತರ ನಡೆದ ಧರ್ಮ ಜಾಗೃತಿ ಸಮಾರಂಭದಲ್ಲಿ ಕರ್ಕಿ ಮಠದ ಶ್ರೀ ಸಚ್ಚಿದಾನಂದ  ಜ್ಞಾನೇಶ್ವರಿ ಭಾರತಿ  ಸ್ವಾಮಿಗಳು ಮಾತನಾಡಿ, ಸಕಲ ಜೀವ ರಾಶಿಗಳು ಶಾಂತಿ-ನೆಮ್ಮದಿ ಬಯಸು ತ್ತವೆ. ಅದರಿಂದಾಗಿ ಪ್ರಜ್ಞಾವಂತ ಮನುಷ್ಯ ತಮ್ಮಿಲ್ಲಿನ ಭಿನ್ನಾಬಿಪ್ರಾಯ ಬಿಟ್ಟು ಒಂದಾಗಿ ಬಾಳಬೇಕು. ಅದ ರಿಂದ ಸಿಗುವ ಶಾಂತಿ, ನೆಮ್ಮದಿ ಬೇರಾ ವುದರಲ್ಲಿ ಸಿಗಲು ಸಾಧ್ಯವಿಲ್ಲ. ಮನುಷ್ಯ ಸಂಘ-ಸಹಕಾರಿ ಜೀವನ ನಡೆಸಬೇಕು ಎಂದರು.

ಸಮಾಜದ ಪ್ರಗತಿ ಕುರಿತು ಚಂದ್ರಕಾಂತ ಪಾಲನಕರ ಹಾಗೂ ವಿನಾಯಕ ಅನಂತಶೇಠ ರಾಯ್ಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಶ್ರೀ ಸಚ್ಚಿದಾ ನಂದ  ಜ್ಞಾನೇಶ್ವರಿ ಭಾರತಿ ಸ್ವಾಮಿ ಗಳಿಗೆ ದೈವಜ್ಞ ಸಮಾಜ ಬಾಂಧವರು ಸನ್ಮಾನಿಸಿ ಗೌರವಿಸಿದರು.

ದೈವಜ್ಞ ಸಮಾಜದ ಮುಖಂಡ ರಾದ ದತ್ತಣ್ಣ ವೇರ್ಣೆಕರ, ಪ್ರಕಾಶ ವೇರ್ಣೆಕರ, ಸುಧಾಕರ ದೈವಜ್ಞ, ಮಂಜುನಾಥ ವೇರ್ಣೆಕರ, ಕೃಷ್ಣಾ ವೇರ್ಣೆಕರ, ವಾಸು ರಾಯ್ಕರ, ವಿಷ್ಣು ರಾಯ್ಕರ, ನಾಗರಾಜ ಪಾಲನಕರ, ಪ್ರಕಾಶ ಪಾಲನಕರ, ನಾಗರಾಜ ಶೇಜ ವಾಡಕರ, ಸುಬ್ಬರಾವ ಶೇಜವಾಡಕರ, ನಾಗೇಶ ಜನ್ನು, ಗಂಗಾಧರ ರಾಯ್ಕರ, ಮಾರುತಿ ರಾಯ್ಕರ, ಸುರೇಶ ದೈವಜ್ಞ, ರಾಮಚಂದ್ರ ದೈವಜ್ಞ, ರಮೇಶ ರೇವಣಕರ, ಗಜಾನನ ಶಿರೋಡಕರ, ಪ್ರಕಾಶ ಕುರ್ಡೆಕರ, ಭಗವಂತ ಸುರ್ವಣಕರ, ವೀಣಾ ಕುರಡೇಕರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT