ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಗ್ಗಾವಿಯಲ್ಲಿ ಕೃಷಿ ಉತ್ಸವ 16ರಂದು

Last Updated 13 ಡಿಸೆಂಬರ್ 2013, 5:58 IST
ಅಕ್ಷರ ಗಾತ್ರ

ಶಿಗ್ಗಾವಿ: ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳ ಹಾವಳಿ ಹಾಗೂ ಮಾರುಕಟ್ಟೆಯಲ್ಲಿ ಸಮಸ್ಯೆಗಳಿಂದ ರೈತ ಸಮೂಹ ತತ್ತರಿಸಿ ಹೋಗಿದ್ದಾನೆ. ಹೀಗಾಗಿ ಹೊಸ ತಂತ್ರಜ್ಞಾನದ ಬಗ್ಗೆ ಸರಿಯಾದ ಮಾಹಿತಿ ನೀಡುವ ಉದ್ದೇಶದಿಂದ ಈ ಕೃಷಿ ಉತ್ಸವ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ಸಂಘದ ಯೋಜನಾಧಿಕಾರಿ ಗಣಪತಿ ಮಾಳಂಜಿ ಹೇಳಿದರು.

ಪಟ್ಟಣದ ಧರ್ಮಸ್ಥಳ ಸಂಘದ ಆಶ್ರಯದಲ್ಲಿ ನಡೆಯುವ ಕೃಷಿ ಉತ್ಸವ ಕಾರ್ಯಕ್ರಮದ ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿ, ತಾಲ್ಲೂಕು ಕೃಷಿ ಇಲಾಖೆ, ಕೃಷಿ ಉತ್ಸವ ವ್ಯವಸ್ಥಾಪನಾ ಸಮಿತಿ, ಜಿಲ್ಲಾ ಭಾರತೀಯ ಕೃಷಿಕ ಸಮಾಜ, ಗುಜರಾತ ಅಂಬುಜಾ ಎಕ್ಸ್‌ಪೋರ್ಟ್‌ ಕಂಪೆನಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳು ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದೇ 16ರಂದು ಒಂದು ದಿನ ನಡೆಯುವ ಕೃಷಿ ಉತ್ಸವ ಕಾರ್ಯಮದಲ್ಲಿ ಕೃಷಿ ವಿಚಾರ ಗೋಷ್ಠಿಗಳು, ಆಧುನಿಕ ಯಂತ್ರೋಪಕರಣಗಳ ಪ್ರದರ್ಶನ, ಗ್ರಾಮೀಣ ಕ್ರೀಡೆಗಳು, ಸ್ವಸಹಾಯ ಸಂಘಗಳಿಂದ  ಮಾರಾಟ ಮಳಿಗೆ, ಜನದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ಸುಮಾರು 60 ಮಳಿಗೆಗಳನ್ನು ರಚಿಸಲಿದ್ದು,  ಅದರಲ್ಲಿ ಟ್ರಾಕ್ಟರ್‌ ಕಂಪನಿಗಳು, ಕಾರಿನ ಕಂಪನಿಗಳು, ದ್ವಿಚಕ್ರ ವಾಹನ, ಬೀಜ ಗೊಬ್ಬರ ಬಳಕೆ, ಕೃಷಿ ಉಪಕರಣಗಳು, ತಿಂಡಿ–ತಿನಿಸುಗಳು, ಸ್ಟೆಷನರಿ, ಸ್ವಸಹಾಯ ಸಂಘಗಳು ತಯಾರಿಸಿದ ಉತ್ಪನ್ನಗಳು, ಬಿತ್ತನೆ ಬೀಜಗಳು ಸೇರಿದಂತೆ ಹಲವು ಮಳಿಗೆಗಳನ್ನು ತೆರೆಯಲಾಗುವುದು ಎಂದರು.

ಅಲ್ಲದೆ ರೈತ ಪುರುಷ–ಮಹಿಳೆಯರಿಗಾಗಿ ಹಗ್ಗ ಜಗ್ಗಾಟ, ನಿಧಿ ಶೊಧ, ಪುರುಷರಿಗೆ ಬಾರ ಎತ್ತುವ ಸ್ಪರ್ಧೆ, ಮಹಿಳೆಯರಿಗೆ ಟೊಂಕಾಟ(ಒಂಟಿಗಾಲಲ್ಲಿ ಮುಟ್ಟುವ ಸ್ಪರ್ಧೆ) ಸೇರಿದಂತೆ ಹಲವು ಗ್ರಾಮೀಣ ಪ್ರದೇಶದ ಆಟಗಳನ್ನು ಏರ್ಪಡಿಸಲಾಗಿದೆ. ಅದರಲ್ಲಿ ಉತ್ಸವ ರಾಕ್‌ ಗಾರ್ಡನ್‌ದಿಂದ ವಿವಿಧ ಆಕರ್ಷಕ ಮೂರ್ತಿಗಳನ್ನು ಸ್ಥಾಪಿಸಲಾಗುತ್ತಿದೆ. ಅದಕ್ಕೆ ಪ್ರಾಯೋಜಕರಾಗಿ ಗುಜರಾತ ಅಂಬುಜಾ ಕಂಪೆನಿ, ಉತ್ಸವ ರಾಕ್‌ ಗಾರ್ಡನ್‌, ಹಾವೇರಿ ಅಗ್ರಿ ಮಾರ್ಟ್, ಶಿಗ್ಗಾವಿ ದಕ್ಷಾ ಯಮಹಾ ಮೊಟಾರ್‌್ಸ,ವೈಭವ ಲಕ್ಷ್ಮೀ ಮೊಟಾರ್‌್ಸ,  ಹಾವೇರಿ ಬಾಲಾಜಿ ಟ್ರಾಕ್ಟರ್‌್ಸ, ಮುಂದಲಮನಿ ಫೊರ್‌್್ಸ, ಹಾವೇರಿ ನಿಂಬಾ ಟಿವಿಎಸ್‌, ರೇವಣಕರ ಮೊಟಾರ್‌್್ಸ ಸೇರಿದಂತೆ ಹಲವು ಕಂಪನಿಗಳು ಈ ಕೃಷಿ ಉತ್ಸವಕ್ಕೆ ಸಹಕಾರಿಯಾಗಿದ್ದಾರೆ ಎಂದರು. ಅರ್ಬನ್‌ ಬ್ಯಾಂಕ್‌ ಅಧ್ಯಕ್ಷ ಶಂಕರಗೌಡ್ರ ಪಾಟೀಲ, ಬಸವರಾಜ ಹೆಸರೂರ,ಮಾರುದ್ರಪ್ಪ ,ಬಿ.ಎಸ್‌.ಹಿರೇಮಠ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT