ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಥಿಲಾವಸ್ಥೆಯಲ್ಲಿ ಸರ್ಕಾರಿ ಕಟ್ಟಡ

Last Updated 4 ಜುಲೈ 2013, 6:25 IST
ಅಕ್ಷರ ಗಾತ್ರ

ಹುಮನಾಬಾದ್: ನಿರ್ವಹಣೆ ಕೊರತೆ ಕಾರಣ ಇಲ್ಲಿನ ತಾಲ್ಲೂಕು ಪಂಚಾಯಿತಿ ಕಚೇರಿ ಪ್ರಾಂಗಣದ ಸಂಚಾರ ಪೊಲೀಸ್ ಠಾಣೆಯ ಪಕ್ಕದಲ್ಲಿನ ಸರ್ಕಾರಕ್ಕೆ ಸೇರಿದ ಆಕರ್ಷಕ ಕಟ್ಟಡ ಶಿಥಿಲಾವಸ್ಥೆಗೆ ತಲುಪುತ್ತಿದೆ.

1957ರಲ್ಲಿ ನಿರ್ಮಿಸಲಾದ ಆಕರ್ಷಕ ಕಟ್ಟಡದಲ್ಲಿ ವಾರ್ತಾ ಮತ್ತು ಪ್ರಚಾರ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದ್ದರಿಂದ ಇಲಾಖೆ ವತಿಯಿಂದ ಸಾರ್ವಜನಿಕರಿಗೆ ಸುದ್ದಿ ನೀಡುವ ಉದ್ದೇಶದಿಂದ ಒಂದು ರೇಡಿಯೋ ಮತ್ತು ಕೆಲವು ದಿನ ಪತ್ರಿಕೆಗಳನ್ನು ತರಿಸಲಾಗುತ್ತಿತ್ತು.

ಅದರ ನಿರ್ವಹಣೆ ಸಂಬಂಧ ಒಬ್ಬ ಅಧಿಕಾರಿಯನ್ನು ಕೂಡ ನಿಯೋಜಿಸಲಾಗಿತ್ತು. ಆಸಕ್ತರು ಪ್ರತಿನಿತ್ಯ ಅದಕ್ಕೆ ನಿಗದಿಪಡಿಸಲಾದ ಅವಧಿಯಲ್ಲಿ ಬಂದು ಯೋಜನೆ ಪ್ರಯೋಜನ ಪಡೆಯುತ್ತಿದ್ದರು ಎಂದು ಶಿವಶಂಕರ ತರನಳ್ಳಿ ಹೇಳುತ್ತಾರೆ.

ಬಳಿಕ ಯುವಜನ ಸೇವಾ ಇಲಾಖೆ ಕಚೇರಿ ಅಸ್ತಿತ್ವದಲ್ಲಿ ಇತ್ತು. ಆದಾದ ಬಳಿಕ ಸಾರ್ವಜನಿಕ ಗೃಂಥಾಲಯ,   ಖಾಸಗಿ ಹೋಟೆಲ್ ನಡೆಯುತ್ತಿತ್ತು. ಸಾಕ್ಷರತಾ, ಅಗ್ನಿಶಾಮಕ ಠಾಣೆ, ಕಳೆದ ಒಂದೆರಡು ವರ್ಷಗಳ ಹಿಂದೆಯಷ್ಟೆ ಈ ಕಟ್ಟಡವನ್ನು ಬಿಸಿ ಊಟ ಇಲಾಖೆ ಬಳಕೆ ಮಾಡಿತ್ತು. ಕಟ್ಟಡದಲ್ಲಿ ನೀರು ಸೋರುತ್ತಿದೆ ಎಂಬ ಕಾರಣಕ್ಕಾಗಿ ಅಲ್ಲಿಂದ ಸ್ಥಳಾಂತರಗೊಂಡಿತ್ತು. ಕಟ್ಟಡ ಸೋರುತ್ತಿದೆ ಎಂಬ ಕಾರಣಕ್ಕಾಗಿ ಸದರಿ ಕಟ್ಟಡ ಬಳಕೆ ಮತ್ತು ನಿರ್ವಹಣೆ ಕೊರತೆ ಕಾರಣ ಖಾಲಿ ಉಳಿದುಕೊಂಡಿದೆ.

ಕಟ್ಟಡ ಹಳೆಯದಾದರೂ ಕೂಡ ಆಕರ್ಷಕ ಹಾಗೂ ಇನ್ನೂ ಗಟ್ಟಿಯಾಗಿದೆ. ದುರಸ್ತಿ ಮಾಡಿಸಿದರೆ ಬಾಳಿಕೆ ಬರುವ ಲಕ್ಷಣಗಳಿವೆ ಕಟ್ಟಡ ಬಾಳಿಕೆ ಸ್ಥಿತಿಗತಿ ಕುರಿತು ಪರಿಶೀಲಿಸಲು ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಿವಾಜಿ ಡೋಣಿ ಹೇಳುತ್ತಾರೆ.

ಈ ಕುರಿತು ಲೋಕೋಪಯೋಗಿ ಇಲಾಖೆ ಎಇಇ ಶಿವರಾಜ ಮದಕಟ್ಟಿ ಅವರನ್ನು ಸಂಪರ್ಕಿಸಿದಾಗ ಕಟ್ಟಡ ಇನ್ನೂ ಗಟ್ಟಿಯಾಗಿದೆ. ದುರುಸ್ತಿ ಮಾಡಿಸಿದರೆ ಕನಿಷ್ಟ 20ವರ್ಷ ಬಾಳಿಕೆ ಬರುತ್ತದೆ ಎನ್ನುತ್ತಾರೆ. ಅದೆಷ್ಟೊ ಇಲಾಖೆಗಳು ಕಟ್ಟಡ ಕೊರತೆ ಎದುರಿಸುತ್ತಿರುವ ಈ ವೇಳೆ ಇಂಥ ಕಟ್ಟಡ ದುರುಸ್ತಿ ಮಾಡಿಸಿದರೆ ಸಮಸ್ಯೆ ಕಡಿಮೆ ಆಗುತ್ತದೆ ಎನ್ನುವುದು ಸಾರ್ವಜನಿಕರ ಒತ್ತಾಸೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT