ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಬಿರದ ಪ್ರಯೋಜನ ಪಡೆಯಲು ಸಲಹೆ

Last Updated 18 ಸೆಪ್ಟೆಂಬರ್ 2013, 5:30 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಸಮಾಜದಲ್ಲಿನ ಬಡ ಕುಟುಂಬಗಳಿಗೆ ಸೇರಿದ ರೋಗಿಗಳ ಹಿತದೃಷ್ಟಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಏಪರ್ಡಿಸ­ಲಾಗುತ್ತಿದೆ ಎಂದು ಡಾ.ರಮೇಶ್‌ ಲಕ್ಷ್ಮೀಕಾಂತ್ ಹೇಳಿದರು.

ಪಟ್ಟಣದ ವಾಸವಿ ಕಲ್ಯಾಣ ಮಂಟಪ­ದಲ್ಲಿ ಬೆಂಗಳೂರಿನ ರಾಜ­ರಾಜೇಶ್ವರಿ ಮೆಡಿಕಲ್‌ ಕಾಲೇಜು ಆಸ್ಪತ್ರೆ, ಇನ್ಸ್‌ಟಿಟ್ಯೂಟ್‌ ಆಫ್ ಡೆಂಟಲ್‌ ಸೈನ್ಸ್, ಸ್ಥಳೀಯ ಗಣಪತಿ ಆರ್ಯವೈಶ್ಯ ಯುವಕ ಸಂಘದ ವತಿ­ಯಿಂದ ಈಚೆಗೆ ಏರ್ಪಡಿಸಿದ್ದ ಉಚಿತ ವೈದ್ಯಕೀಯ ತಪಾಸಣಾ ಶಿಬಿರದಲ್ಲಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಆರೋಗ್ಯ ಶಿಬಿರಗಳನ್ನು ನಡೆ­ಸಲು ಉದ್ದೇಶಿಸಲಾಗಿದೆ ಎಂದು ಹೇಳಿ­ದರು.

ಶಿಬಿರದಲ್ಲಿ ಆಯ್ಕೆಯಾದ ರೋಗಿ­ಗಳಿಗೆ ಉಚಿತ ಶಸ್ತ್ರಚಿಕಿತ್ಸೆ ನಡೆಸಲಾಗುವುದು. ಸೇವಾ ಮನೋ­ಭಾವ­ದಿಂದ ಈ ಕೆಲಸ ಮಾಡಲಾಗು­ತ್ತಿದೆ. ವಿದ್ಯಾವಂತ ಯುವ ಸಮು­ದಾಯ ಇಂಥ ಶಿಬಿರಗಳ ಬಗ್ಗೆ ಸಾರ್ವ­ಜನಿಕರ ಗಮನ ಸೆಳೆಯಬೇಕು. ಅರ್ಹ­ರನ್ನು ಕರೆತಂದು ರೋಗಿ ತಪಾಸಣೆಗೆ ನೆರವಾಗಬೇಕು ಎಂದರು.

ಶಿಬಿರದಲ್ಲಿ 300ಕ್ಕೂ ಹೆಚ್ಚು ರೋಗಿ­ಗಳು ಆರೋಗ್ಯ ತಪಾಸಣೆಗೆ ಒಳ­ಗಾದರು. ರೋಗಿಗಳಿಗೆ ಅಗತ್ಯವಾದ ಔಷಧಿ­ಗಳನ್ನು ಉಚಿತವಾಗಿ ವಿತರಿಸ­ಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT