ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಡಿ - ಮೈಸೂರು ನಡುವೆ ವಿಶೇಷ ರೈಲು...

Last Updated 26 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಭಾರತೀಯ ರೈಲ್ವೆ ಮೈಸೂರು- ಶಿರಡಿ ಮಾರ್ಗವಾಗಿ ನೂತನ ವಿಶೇಷ ರೈಲು ಸೇವೆ ಆರಂಭಿಸಿದೆ. ವಾರದ ವಿಶೇಷ ಎಕ್ಸ್‌ಪ್ರೆಸ್ ರೈಲುಗಾಡಿಯು ಸೋಮವಾರದಿಂದ (ಸೆ.26) ಪ್ರಯಾಣ ಆರಂಭಿಸಿದೆ.
 
(ರೈಲುಗಾಡಿ ಸಂಖ್ಯೆ 06201/ 06202)  ಬೆಳಿಗ್ಗೆ 9.50ಕ್ಕೆ ಮೈಸೂರಿನಿಂದ ಪ್ರಯಾಣ ಪ್ರಾರಂಭಿಸಿದ್ದು. ಮಧ್ಯಾಹ್ನ 12.55ಕ್ಕೆ ಬೆಂಗಳೂರು ತಲುಪಲಿದೆ. 1 ಗಂಟೆ 5ನಿಮಿಷಕ್ಕೆ ಬೆಂಗಳೂರಿನಿಂದ ಹೊರಡಲಿದ್ದು, ಮಂಗಳವಾರ ಮಧ್ಯಾಹ್ನ 2.15ಕ್ಕೆ ಶಿರಡಿ ತಲುಪಲಿದೆ. 
 
ಶಿರಡಿಯಿಂದ ರೈಲು ಗಾಡಿಯು (ರೈಲುಗಾಡಿ ಸಂಖ್ಯೆ 06102) ಮಂಗಳವಾರ (ಸೆ.27) ಮಧ್ಯಾಹ್ನ 3.30ಕ್ಕೆ ಶಿರಡಿಯಿಂದ ಹೊರಟು ರಾತ್ರಿ 8.10ಕ್ಕೆ ಬೆಂಗಳೂರು ನಗರ ರೈಲ್ವೆ ನಿಲ್ದಾಣ ಸೇರಲಿದೆ. ನಗರ ರೈಲ್ವೆ ನಿಲ್ದಾಣದಿಂದ 8.25ಕ್ಕೆ ಪ್ರಯಾಣಿಸಿ ರಾತ್ರಿ 10.55ಕ್ಕೆ ಮೈಸೂರು ತಲುಪಲಿದೆ.

ಮೈಸೂರಿನಿಂದ ವಾರದ ವಿಶೇಷ ಎಕ್ಸ್‌ಪ್ರೆಸ್ ರೈಲು ಗಾಡಿಯ ಸೇವೆಯು ನವೆಂಬರ್ 7ರಂದು ಕೊನೆಯಾಗಲಿದೆ. ಅದೇ ರೀತಿ ಶಿರಡಿಯಿಂದ ಇಂದಿನಿಂದ (ಸೆ.27) ಆರಂಭವಾಗುವ ವಿಶೇಷ ರೈಲು ಸಂಚಾರ ನವೆಂಬರ್ 8ಕ್ಕೆ ಕೊನೆಯಾಗಲಿದೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.

ಮೈಸೂರು ಹಾಗೂ ಶಿರಡಿ ನಡುವೆ ಪ್ರಯಾಣಿಸುವ ರೈಲು ಗಾಡಿಯು ಮಂಡ್ಯ, ರಾಮನಗರ, ಕೆಂಗೇರಿ, ಬೆಂಗಳೂರು ನಗರ, ಬೆಂಗಳೂರು ದಂಡು ರೈಲು ನಿಲ್ದಾಣ, ಯಲಹಂಕ, ಹಿಂದೂಪುರ, ಅನಂತಪುರ, ಗುಂತಕಲ್, ಬಳ್ಳಾರಿ, ತೋರಣಗಲ್ಲು, ಹೊಸಪೇಟೆ, ಕೊಪ್ಪಳ, ಗದಗ, ಬಾದಾಮಿ, ಬಾಗಲಕೋಟೆ, ಆಲಮಟ್ಟಿ, ವಿಜಾಪುರ, ಸೊಲ್ಲಾಪುರ, ಕುರ್ದುವಾಡಿ, ದೌಂಡ್, ಬೇಲಾಪುರ್, ಪಂತುಂಬ  ಮಾರ್ಗವಾಗಿ ಸಂಚರಿಸಲಿದೆ.       
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT