ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾಡಿಘಾಟ್‌ ರಸ್ತೆ ದುರಸ್ತಿಗೆ ರೂ95 ಕೋಟಿ

Last Updated 18 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸಕಲೇಶಪುರ– ಗುಂಡ್ಯ ನಡುವಿನ ಶಿರಾಡಿಘಾಟ್‌ ರಸ್ತೆ ದುರ­ಸ್ತಿಗೆ ಕೇಂದ್ರ ಸರ್ಕಾರ ರೂ95 ಕೋಟಿ  ಬಿಡುಗಡೆ ಮಾಡಿದೆ. ಟೆಂಡರ್‌ ಕರೆದು ಕಾಮಗಾರಿ ಆರಂಭಿ­ಸಲಾಗುವುದು ಎಂದು ಲೋಕೋ­ಪಯೋಗಿ ಸಚಿವ ಡಾ. ಎಚ್‌.ಸಿ.ಮಹ­ದೇವಪ್ಪತಿಳಿಸಿದರು.

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ –2ರ ಅಡಿ 3,745 ಕಿ.ಮೀ.  ಉದ್ದದ ವಿವಿಧ ರಸ್ತೆಗಳನ್ನು ಅಭಿವೃದ್ಧಿ­ಪಡಿಸುವ ಯೋಜನೆಗೆ ಇದೇ 26ರಂದು ಚಾಲನೆ ನೀಡಲಾಗುವುದು ಎಂದು  ಬುಧವಾರ ಇಲ್ಲಿ ಪತ್ರಿಕಾ­ಗೋಷ್ಠಿಯಲ್ಲಿ ಹೇಳಿದರು.

ರೂ1500 ಕೋಟಿ ವೆಚ್ಚದಲ್ಲಿ ಈ ಯೋಜನೆಯನ್ನು ಕೈಗೆತ್ತಿ­ಕೊಳ್ಳ­ಲಾಗು­ತ್ತಿದ್ದು,­ ­ಡಾಂಬರೀಕರಣ, ರಸ್ತೆ ವಿಸ್ತ­ರಣೆಗೆ ಇದರಲ್ಲಿ ಅವಕಾಶ ಇದೆ. ವಿವಿಧ ಯೋಜನೆಗಳ ಅಡಿ ಮಾರ್ಚ್‌ ವೇಳೆಗೆ 5500– 6000 ಕಿ.ಮೀ. ರಸ್ತೆ ಅಭಿ ವೃದ್ಧಿಪಡಿಸಲಾಗುವುದು. ಕೇಂದ್ರ ರಸ್ತೆ ನಿಧಿಯಡಿ ಕೇಂದ್ರ ಸರ್ಕಾರ ರೂ1800 ಕೋಟಿ ಬಿಡುಗಡೆ ಮಾಡಿದ್ದು, ರಾಜ್ಯ ಹೆದ್ದಾರಿಗಳು, ಜಿಲ್ಲಾ ರಸ್ತೆಗಳ ದುರ­ಸ್ತಿಗೆ ಬಳಸ­ಲಾಗುವುದು ಎಂದರು.

ಕೋಯಿಕ್ಕೋಡ್‌ – ಗುಂಡ್ಲುಪೇಟೆ, ಗುಂಡ್ಲುಪೇಟೆ–ಕೊಳ್ಳೆಗಾಲ, ಮೈಸೂರು –ನಂಜನಗೂಡು, ಮೈಸೂರು– ಟಿ.ನರ ಸೀಪುರ (ಎನ್‌.ಎಚ್‌.212) ಮಾರ್ಗದ 151 ಕಿ.ಮೀ. ರಸ್ತೆ ಅಭಿವೃದ್ಧಿಗೆ ಕೇಂದ್ರ ಮಂಜೂರಾತಿ ನೀಡಿದ್ದು, ಇದೇ 30ರಂದು ಟೆಂಡರ್‌ ಕರೆಯಲಾ ಗುವುದು.ಯೋಜನೆಗೆ ರೂ524 ಕೋಟಿ ವೆಚ್ಚವಾಗಲಿದೆ ಎಂದರು.

ಚಿತ್ರದುರ್ಗ – ಶಿವಮೊಗ್ಗ ಮಾರ್ಗದ (ಎನ್‌.ಎಚ್‌ –13) 102 ಕಿ.ಮೀ. ರಸ್ತೆ ಅಭಿವೃದ್ಧಿಗೆ ₨326.90 ಕೋಟಿ ವೆಚ್ಚವಾಗಲಿದೆ. ಇದೇ 26ರಂದು ಟೆಂಡರ್‌ ಕರೆಯಲಾಗುವುದು ಎಂದರು.

ಕೆಶಿಪ್‌– 2ರ ಅಡಿ ಶಿಕಾರಿಪುರ – ಶಿವಮೊಗ್ಗ – ಹಾನಗಲ್‌ ನಡುವಿನ 108 ಕಿ.ಮೀ. ರಸ್ತೆಯನ್ನು ₨397 ಕೋಟಿ ವೆಚ್ಚದಲ್ಲಿ, ವಿಜಾಪುರ – ದೇವಪುರ ನಡುವಿನ 109 ಕಿ.ಮೀ. ರಸ್ತೆಯನ್ನು ₨250 ಕೋಟಿ ವೆಚ್ಚದಲ್ಲಿ, ಮಳವಳ್ಳಿ – ತುಮಕೂರು– ಮಧುಗಿರಿ– ಪಾವಗಡ ನಡುವಿನ 200 ಕಿ.ಮೀ. ರಸ್ತೆಯನ್ನು ₨560 ಕೋಟಿ ವೆಚ್ಚದಲ್ಲಿ, ನಿಪ್ಪಾಣಿ – ಮುಧೋಳ ನಡುವಿನ 108 ಕಿ.ಮೀ. ರಸ್ತೆಯನ್ನು ₨320 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಮರು ಟೆಂಡರ್‌ ಕರೆಯಲಾಗುವುದು ಎಂದರು.

ರಸ್ತೆ ಬಳಕೆ ಶುಲ್ಕ ಸಂಗ್ರಹಿಸುವುದು ನಿರ್ವಹಣೆ ದೃಷ್ಟಿಯಿಂದ ಒಳ್ಳೆಯದು. ಹಿಂದಿನ ಸರ್ಕಾರ ಈ ಬಗ್ಗೆ ತೆಗೆದುಕೊಂಡಿರುವ ತೀರ್ಮಾನದ ಬಗ್ಗೆ ಪರಿಶೀಲಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಪ್ಪು ಮಾಡಿಲ್ಲ: ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಚಿಕ್ಕರಾ ಯಪ್ಪ ತಪ್ಪು ಮಾಡಿಲ್ಲ ಎಂದು ಹೈಕೋರ್ಟ್‌ ‘ಕ್ಲಿನ್‌ ಚೀಟ್‌’ ನೀಡಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT