ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಪುರ: ನಿವಾಸಿಗಳ ಹಕ್ಕುಪತ್ರಕ್ಕೆ ಆಗ್ರಹ

Last Updated 6 ಜುಲೈ 2012, 19:30 IST
ಅಕ್ಷರ ಗಾತ್ರ

ಮದ್ದೂರು: ಕಾಲೋನಿಯ ಎ್ಲ್ಲಲ ನಿವಾಸಿಗಳಿಗೂ ಹಕ್ಕುಪತ್ರ ವಿತರಿಸಬೇಕು ಎಂದು ಆಗ್ರಹಿಸಿ ಸಮೀಪದ ಶಿವಪುರದಲ್ಲಿ ಏರ್ಪಡಿಸಿದ್ದ ಹಕ್ಕುಪತ್ರ ವಿತರಣೆ ಸಮಾರಂಭಕ್ಕೆ ಅಡ್ಡಿಪಡಿಸಿದ ಘಟನೆ ನಡೆಯಿತು.

ಹಕ್ಕುಪತ್ರ ವಿತರಣೆಗೆ ಶಾಸಕಿ ಕಲ್ಪನಾ ಸಿದ್ದರಾಜು ಮುಂದಾಗುತ್ತಿದ್ದಂತೆ, `ನೀಡುವುದಾದರೆ ಎಲ್ಲ ನಿವಾಸಿಗಳಿಗೂ ಹಕ್ಕುಪತ್ರ ವಿತರಿಸಬೇಕು~ ಎಂದು ವೇದಿಕೆ  ಬಳಿಗೆ ತೆರಳಿ ವಿನಂತಿಸಿದರು. `ಕಳೆದ 12 ವರ್ಷಗಳ ಹಿಂದೆ ಹಣ ಕಟ್ಟಿಸಿಕೊಂಡು ಮನೆ ನೀಡಿಲ್ಲ. ಮೂಲ ಸೌಕರ್ಯ ಒದಗಿಸಿಲ್ಲ~ ಎಂದು ದೂರಿದರು.

ಮಹಿಳೆಯರ ವಿನಂತಿಗೆ ಅವರ ಬಳಿಗೆ ಆಗಮಿಸಿದ ಶಾಸಕಿ ಕಲ್ಪನಾಸಿದ್ದರಾಜು, `ಸಮರ್ಪಕ ದಾಖಲಾತಿ ನೀಡಿದ 143 ಮಂದಿಗೆ ಹಕ್ಕುಪತ್ರ ವಿತರಿಸಲಾಗುತ್ತಿದ್ದು, ನಾಳೆಯೇ ಆಶ್ರಯ ಸಮಿತಿ ಸಭೆ ಕರೆದು ಇನ್ನುಳಿದವರಿಗೆ ಹಕ್ಕುಪತ್ರ ವಿತರಣೆಗೆ ಅಗತ್ಯ ಕ್ರಮ ಜರುಗಿಸುತ್ತೇನೆ~ ಎಂದು ಭರವಸೆ ನೀಡಿದರು.

ಪುರಸಭಾಧ್ಯಕ್ಷ ಚಂದ್ರು ಮಾತನಾಡಿ, `ಒಟ್ಟು 411 ನಿವಾಸಿಗಳಿಂದ ಹಣ ಕಟ್ಟಿಸಿಕೊಳ್ಳಲಾಗಿದೆ. ಇದೀಗ 262 ಮಂದಿಗೆ ಹಕ್ಕುಪತ್ರ ನೀಡುವಂತೆ ರಾಜೀವ್‌ಗಾಂಧಿ ವಸತಿ ನಿಗಮದಿಂದ ಆದೇಶ ನೀಡಿದ್ದು, ಇವರಲ್ಲಿ ಕೇವಲ 143 ಮಂದಿ ಮಾತ್ರ ಸಮರ್ಪಕ ದಾಖಲೆ ಒದಗಿಸಿದ್ದಾರೆ.
 
ಇನ್ನುಳಿದ ಎಲ್ಲ ಮಂದಿಗೂ ಹಕ್ಕುಪತ್ರ ಒದಗಿಸಲು ಶಿಫಾರಸು ಮಾಡಲಾಗುವುದು~ ಎಂದರು. ಭರವಸೆಯಿಂದ ಸಮಾಧಾನಗೊಂಡ ನಿವಾಸಿಗಳು ಹಕ್ಕುಪತ್ರ ಪಡೆದರು. ಜಿ. ಪಂ. ಅಧ್ಯಕ್ಷ ಸುರೇಶ್ ಕಂಠಿ, ಪುರಸಭಾ ಉಪಾಧ್ಯಕ್ಷೆ ಲಲಿತಮ್ಮ, ಮಾಜಿ ಅಧ್ಯಕ್ಷರಾದ ಎಂ.ಸಿ.ಬಸವರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT