ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಪ್ರಕಾಶ್‌ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Last Updated 20 ಡಿಸೆಂಬರ್ 2012, 20:15 IST
ಅಕ್ಷರ ಗಾತ್ರ

ಬೆಂಗಳೂರು:ನಾಟಕಕಾರ, ಕವಿ  ಎಚ್.ಎಸ್. ಶಿವಪ್ರಕಾಶ್ ಅವರ `ಮಬ್ಬಿನ ಹಾಗೆ ಕಣಿವೆಯಲ್ಲಿ' ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ 2012ನೇ ಸಾಲಿನ ಪ್ರಶಸ್ತಿ ದೊರೆತಿದೆ.

ಪ್ರಶಸ್ತಿಯು 1 ಲಕ್ಷ ರೂಪಾಯಿ ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ. 2008 ಮತ್ತು 2010ರ ನಡುವೆ ಪ್ರಥಮ ಮುದ್ರಣ ಕಂಡ ಕೃತಿಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ.
 
ಆರಿಫ್ ರಾಜಾ ಅವರ `ಜಂಗಮ ಫಕೀರನ ಜೋಳಿಗೆ' ಕವನ ಸಂಕಲನಕ್ಕೆ ಅಕಾಡೆಮಿಯ 2012ನೇ ಸಾಲಿನ `ಯುವ ಪುರಸ್ಕಾರ' ನೀಡಲಾಗಿದ್ದು, 50 ಸಾವಿರ ರೂಪಾಯಿ ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.
 
ಜೀತ್ ತಾಯಲ್ ಅವರ `ದೀಸ್ ಎರರ್ಸ್ ಆರ್ ಕರೆಕ್ಟ್' (ಇಂಗ್ಲಿಷ್), ಕೆ. ಸಚ್ಚಿದಾನಂದನ್ ಅವರ `ಮರನ್ನು ವೆಚ್ಚ ವಸ್ತುಕ್ಕಳ್' (ಮಲಯಾಳಂ) ಕೃತಿ ಕೂಡ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಪಾತ್ರವಾಗಿವೆ. ಜಯಂತ್ ಪವಾರ್ (ಮರಾಠಿ), ಡಿ. ಸೆಲ್ವರಾಜ್ (ತಮಿಳು), ಪೆದ್ದಿಬೊಟ್ಲ ಸುಬ್ಬರಾಮಯ್ಯ (ತೆಲುಗು) ಅವರನ್ನೂ ಪ್ರಶಸ್ತಿಗೆ ಹೆಸರಿಸಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT