ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವರಾತ್ರಿಗೆ ಎಲ್ಲೆಡೆ ಭರದ ಸಿದ್ಧತೆ

Last Updated 20 ಫೆಬ್ರುವರಿ 2012, 7:45 IST
ಅಕ್ಷರ ಗಾತ್ರ

ಚಿಂತಾಮಣಿ: ಮಹಾ ಶಿವರಾತ್ರಿ ಮುನ್ನಾ ದಿನವಾದ ಭಾನುವಾರ ನಗರ ಹಾಗೂ ತಾಲ್ಲೂಕಿನ ವಿವಿಧ ದೇಗುಲದಲ್ಲಿ ವಿಶೇಷ ಪೂಜೆ, ಅಲಂಕಾರ, ಅಭಿಷೇಕ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು. 

 ಇದೇ ವೇಳೆ ಸಾರ್ವಜನಿಕರು ಸಹ ಭಾನುವಾರ ಸಡಗರದಿಂದ ಕಬ್ಬು, ಹಣ್ಣು ಹೂಗಳನ್ನು ಖರೀದಿಸುತ್ತಿದ್ದು ಸಾಮಾನ್ಯ ದೃಶ್ಯವಾಗಿತ್ತು. ನಗರದ ಹೊರವಲಯದ ಗುಹಾಂತರ ದೇಗುಲ ಮಹಾ ಕೈಲಾಸಗಿರಿ ಕ್ಷೇತ್ರದ ಗಂಗಾಧರೇಶ್ವರ ದೇಗುಲದ ವಲ್ಲಭ ಗಣಪತಿ, ಜಗದಾಂಬ ಸಮೇತ ಚತುರ್ಮುಖ ಲಿಂಗೇಶ್ವರಸ್ವಾಮಿ ಸನ್ನಿಧಿಯಲ್ಲಿ ಪಂಚಾಮೃತ ಅಭಿಷೇಕ, ಶತರುದ್ರ ಹೋಮ, ಗಿರಿಜಾ ಕಲ್ಯಾಣೋತ್ಸವ, ಯಾಮಪೂಜೆ, ಜಾಗ ರಣೆ, ಭಜನೆ , ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ತಾಲ್ಲೂಕಿನ ಮುರುಗಮಲ್ಲದ ಮುಕ್ತೀಶ್ವರಸ್ವಾಮಿ ದೇಗುಲದಲ್ಲಿ ಬೆಳಿಗ್ಗೆಯಿಂದ ರಾತ್ರಿಯವರೆಗೆ ವಿಶೇಷ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು  ದೇಗುಲದ ಟ್ರಸ್ಟಿ ಬಾಬು ತಿಳಿಸಿದರು.

ಇನ್ನು ಪ್ರಸಿದ್ದ ಯಾತ್ರಾಸ್ಥಳ ಕೈವಾರದ ಭೀಮ ಲಿಂಗೇಶ್ವರಸ್ವಾಮಿ, ಯೋಗಿನಾರೇಯಣ ಯತೀಂ ದ್ರರ ಮಠ, ಅಮರನಾರೇಯಣ ದೇಗುಲಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ಹಮ್ಮಿ ಕೊಳ್ಳಲಾಗಿದೆ. ಯತೀಂದ್ರರರ ಮಠದಲ್ಲಿ ಸೋಮ ವಾರ ರಾತ್ರಿ ಜಾಗರಣೆಯ ಪ್ರಯುಕ್ತ ಹರಿಕಥೆ, ಭಜನೆ ತತ್ವ ಪದಗಳ ಗಾಯನ ಇಡೀ ರಾತ್ರಿ ನಡೆಯುತ್ತದೆ.

ತಾಲ್ಲೂಕಿನ ಉಪ್ಪರಪೇಟೆ, ನಗರದ ನಾಗ ನಾಥೇಶ್ವರ ಸ್ವಾಮಿ , ಅಜಾದ್ ಚೌಕದ ದೇಗು ಲದಲ್ಲೂ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಬ್ರಹ್ಮಕುಮಾರೀಶ್ ಈಶ್ವರೀಯ ವಿದ್ಯಾಲಯದಿಂದ ಜ್ಯೋರ್ತಿಲಿಂಗಗಳ ದರ್ಶನ ಹಾಗೂ ವಿಶೇಷ ನೃತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT