ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಷ್ಟಾಚಾರ ಪದ ಬಳಕೆ ಬೇಡ ಎಂದ ಪ್ರಣವ್!

Last Updated 2 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಪಟ್ನಾ: ರಾಷ್ಟ್ರಪತಿಗಳ ಹೆಸರಿನ ಮೊದಲು ಹಲವು ದಶಕಗಳಿಂದ ಬಳಸುತ್ತಾ ಬಂದಿರುವ `ಗೌರವಾನ್ವಿತ~, `ಘನವೆತ್ತ~ ಮುಂತಾದ ಗೌರವ ಸೂಚಕ ಶಿಷ್ಟಾಚಾರದ ಪದಗಳನ್ನು ಬಳಸದಂತೆ ನೂತನ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಸೂಚಿಸಿದ್ದಾರೆ.

ಇಲ್ಲಿಯ ನಾಗೇಂದ್ರ ಝಾ ಕ್ರೀಡಾಂಗಣದಲ್ಲಿ ಬುಧವಾರ ನಡೆಯಲಿರುವ ಬಿಹಾರದ ಲಲಿತ್ ನಾರಾಯಣ ಮಿಥಿಲಾ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪ್ರಣವ್ ಭಾಗವಹಿಸಲಿದ್ದಾರೆ. ಆ ಸಂದರ್ಭದಲ್ಲಿ ರಾಷ್ಟ್ರಪತಿಯವರನ್ನು ಈ ವಿಶೇಷಣಗಳಿಂದ ಸಂಬೋಧಿಸದಂತೆ ರಾಷ್ಟ್ರಪತಿ ಭವನವು ವಿಶ್ವವಿದ್ಯಾಲಯ ಆಡಳಿತಕ್ಕೆ ಪತ್ರ ಬರೆದಿದೆ. 

ರಾಷ್ಟ್ರಪತಿಯವರ ಈ ಇಂಗಿತಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದ್ದು, ವಿಶ್ವವಿದ್ಯಾಲಯವು ಘಟಿಕೋತ್ಸವದ ಆಮಂತ್ರಣ ಪತ್ರಿಕೆಗಳ ಮರು ಮುದ್ರಣಕ್ಕೆ ಮುಂದಾಗಿದೆ.

ಸಮಾರಂಭದ ವೇದಿಕೆಯ ಆಸನದಲ್ಲೂ ವ್ಯಕ್ತಿಗತ ಹೆಸರುಗಳ ಬದಲು ಕೇವಲ `ರಾಷ್ಟ್ರಪತಿ~ ಎಂಬ ಹುದ್ದೆ ಸೂಚಕ ಫಲಕ ಹಾಕಲು ಸೂಚಿಸಲಾಗಿದೆ. ಜತೆಗೆ ವೇದಿಕೆಯಲ್ಲಿ ರಾಷ್ಟ್ರಪತಿ ಸೇರಿದಂತೆ ಎಲ್ಲ ಅತಿಥಿಗಳಿಗೂ ಒಂದೇ ತೆರನಾದ ಕುರ್ಚಿಗಳನ್ನು ಹಾಕುವಂತೆ ರಾಷ್ಟ್ರಪತಿ ಭವನ ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT