ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀಘ್ರ ಉಲ್ಬಣಗೊಳ್ಳುವ ಕಾಯಿಲೆ

Last Updated 6 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನ್ಯೂಯಾರ್ಕ್ (ಪಿಟಿಐ): ಸ್ಟೀವ್ ಜಾಬ್ಸ್ ಅವರನ್ನು ಬಲಿತೆಗೆದುಕೊಂಡ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಉಲ್ಬಣಗೊಳ್ಳುವ ಕ್ಯಾನ್ಸರ್‌ಗಳಲ್ಲಿ ಒಂದು ಎನ್ನುತ್ತಾರೆ ತಜ್ಞರು. ರೋಗ ಪತ್ತೆಯಾದ ಐದು ವರ್ಷಗಳಲ್ಲಿಯೇ ಇದು ವ್ಯಕ್ತಿಯನ್ನು ಬಲಿತೆಗೆದುಕೊಳ್ಳುತ್ತದೆ ಎಂದು ನ್ಯೂಸೌತ್ ವೇಲ್ಸ್ ವಿ.ವಿ ವೈದ್ಯಕೀಯ ವಿಭಾಗದ ಪ್ರೊ. ಮಿನೊಟಿ ಆಪ್ಟೆ ಹೇಳುತ್ತಾರೆ.

ಪ್ಯಾಂಕ್ರಿಯಾಸ್, ಎಕ್ಸೊಕ್ರೈನ್ (ನಾಳದ ಮೂಲಕ ಸ್ರವಿಸುವ ಗಂಥಿ) ಹಾಗೂ ಎಂಡೋಕ್ರೈನ್ (ನಿರ್ನಾಳಗಂಥಿ)  ಎಂಬ ಎರಡು ಗಂಥಿಗಳನ್ನು ಒಳಗೊಂಡಿರುತ್ತದೆ. ಜಾಬ್ಸ್ ಅವರಿಗೆ ಎಂಡೋಕ್ರೈನ್ ಗಂಥಿಯಲ್ಲಿ ಕ್ಯಾನ್ಸರ್ ಗಡ್ಡೆ ಕಾಣಿಸಿಕೊಂಡಿತ್ತು. ಇದು ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್‌ನಲ್ಲಿ ಅತ್ಯಂತ ಅಪರೂಪದ ಪ್ರಕರಣಗಳಲ್ಲಿ ಒಂದು.

2004 ರಲ್ಲಿ  ಜಾಬ್ಸ್ ಅವರನ್ನು ಶಸ್ತ್ರಚಿಕಿತ್ಸೆಗೊಳಪಡಿಸಿ ಕ್ಯಾನ್ಸರ್ ಗಡ್ಡೆಗಳನ್ನು ತೆಗೆಯಲಾಗಿತ್ತು. ಆದರೂ 2009ರಲ್ಲಿ ಕಾಯಿಲೆ ಉಲ್ಬಣಗೊಂಡಿತ್ತು. ಜಾಬ್ಸ್ ಅವರಿಗೆ ಕ್ಯಾನ್ಸರ್ ಮಾತ್ರವಲ್ಲ; ಲಿವರ್ ತೊಂದರೆಯೂ ಇತ್ತು.

2009 ರಲ್ಲಿ ಅವರಿಗೆ ಲಿವರ್ ಕಸಿ ಮಾಡಲಾಗಿತ್ತು. ಲಿವರ್ ಕಸಿ ಮಾಡಿಸಿಕೊಂಡ ಬಹುತೇಕ ರೋಗಿಗಗಳು ಅಬ್ಬಬ್ಬಾ ಎಂದರೆ ಎರಡು ವರ್ಷಗಳ ಕಾಲ ಮಾತ್ರ  ಬದುಕುಳಿಯಬಲ್ಲರು ಎಂದು  ಲಾಸ್ ಏಂಜಲೀಸ್‌ನ ಪ್ಯಾಂಕ್ರಿಯಾಟಿಕ್ ಡಿಸೀಸ್ ಯುಸಿಎಲ್‌ಎ ಕೇಂದ್ರದ ಡಾ.ಟಿಮತಿ ಡೋನಾ ಹೇಳುತ್ತಾರೆ.

ಜಾಬ್ಸ್ ನಿಧನಕ್ಕೆ ಗಣ್ಯರ ಕಂಬನಿ
* ಜಾಬ್ಸ್ ಅವರಂಥ ದಿಗ್ಗಜರು ಇಡೀ ವಿಶ್ವವನ್ನೇ ಬದಲಾಯಿಸಬಲ್ಲರು
-ರಷ್ಯಾ ಅಧ್ಯಕ್ಷ ಡಿಮಿತ್ರಿ ಮೆಡ್ವೆಡೇವ್,

*
ಸಂವಹನ ಯುಗದಲ್ಲಿ ನೂತನ ಅಧ್ಯಾಯ ತೆರೆದ ವ್ಯಕ್ತಿ
 -ಪ್ರಧಾನಿ ಡಾ.ಮನಮೋಹನ್ ಸಿಂಗ್

* ಸ್ಟೀವ್ ಜಾಬ್ಸ್ ದೂರದೃಷ್ಟಿಯುಳ್ಳ ವ್ಯಕ್ತಿಯಾಗಿದ್ದರು
-ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT