ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀಘ್ರ ಮನೆಪಟ್ಟಿ ಸಲ್ಲಿಸಿ: ಶಾಸಕ ಸೂಚನೆ

Last Updated 19 ಡಿಸೆಂಬರ್ 2012, 9:04 IST
ಅಕ್ಷರ ಗಾತ್ರ

ಕೊಳ್ಳೇಗಾಲ: `ಗ್ರಾಮ ಸಭೆ ನಡೆಸಿ ನಿಯಮಾನುಸಾರ 2028 ಮನೆಗಳ ಫಲಾನುಭವಿಗಳನ್ನು ಆಯ್ಕೆಮಾಡಿ ಶೀಘ್ರವಾಗಿ ಪಟ್ಟಿ ಸಲ್ಲಿಸಬೇಕು' ಶಾಸಕ ಆರ್.ನರೇಂದ್ರ ತಿಳಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಬಸವ ವಸತಿ ಯೋಜನೆ ಜಾಗೃತಿ ಸಮಿತಿ ಸಭೆಯಲ್ಲಿ ಮಾತ ನಾಡಿ, 25 ಗ್ರಾಮ ಪಂಚಾಯಿತಿಗಳಿಗೆ ಮನೆಗಳನ್ನು ವಿತರಣೆ ಮಾಡಿರುವ ಬಗ್ಗೆ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ನಾಗೇಂದ್ರಬಾಬು, ತಾಲ್ಲೂಕು ಪಂಚಾಯಿತಿ ಸದಸ್ಯ ಅನಿಲ್ ಮಾತನಾಡಿ ಈ ಹಿಂದೆ ವಿವಿಧ ಯೋಜನೆಗಳಡಿ ಮನೆ ದೊರೆಯದ ಗ್ರಾಮಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ವಿವಿಧ ಗ್ರಾಮ ಪಂಚಾಯಿತಿಗಳಿಗೆ ನಿಗದಿಪಡಿಸಿರುವ ಫಲಾನುಭವಿಗಳನ್ನು ನಿಯಮಾನುಸಾರ ಬಡಜನತೆಗೆ ಅನ್ಯಾ ಯವಾಗದಂತೆ ಪಟ್ಟಿಯನ್ನು ತಯಾ ರಿಸಲು  ಪಂಚಾಯಿತಿಗಳಲ್ಲಿ ಕ್ರಮಕೈಗೊಳ್ಳಲು ತಾಕೀತು ಮಾಡಲಾಯಿತು.

ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್, ಡಿ.ದೇವರಾಜು, ಶಿವಮ್ಮ, ಕೊಪ್ಪಾಳಿ ಮಹದೇವನಾಯ್ಕ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ದ್ರಾಕ್ಷಾಯಿಣಿ, ಉಪಾಧ್ಯಕ್ಷ ನಂಜೇಗೌಡ, ಸದಸ್ಯರಾರ ತಮ್ಮಯ್ಯ, ಬಸವರಾಜು, ಮುರಳಿ, ರಾಜಮ್ಮ, ನಾಗಲಾಂಬಿಕ, ಸತ್ಯವತಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಹಾದೇವಸ್ವಾಮಿ ಇತರರು ಇದ್ದರು.

ಲಾರಿ, ಟ್ರ್ಯಾಕ್ಟರ್ ಸಮೇತ ಮರಳು ವಶ
ಕೊಳ್ಳೇಗಾಲ: ತಾಲ್ಲೂಕಿನ ವಿವಿಧೆಡೆ ಕಂದಾಯ ಅಧಿಕಾರಿಗಳು ಮಂಗಳ ವಾರ ದಾಳಿ ನಡೆಸಿ 3 ಲಾರಿ ಸೇರಿದಂತೆ 1 ಕೊಪ್ಪರಿಕೆ ಹಾಗೂ 6 ಟ್ರಾಕ್ಟರ್ ಮರಳನ್ನು ವಶಪಡಿಸಿಕೊಂಡಿದ್ದಾರೆ.

ತಾಲ್ಲೂಕಿನ ಉತ್ತಂಬಳ್ಳಿಯಲ್ಲಿ ಮತ್ತು ಸರಗೂರಿನಲ್ಲಿ ಮರಳು ಅಕ್ರಮ ಸಾಗಣೆ ಮಾಡುತ್ತಿದ್ದ 3 ಲಾರಿಗಳು. ಮುಳ್ಳೂರು ಗ್ರಾಮದಲ್ಲಿ ಕಾನೂನು ಬಾಹಿರವಾಗಿ ಸಂಗ್ರಹಿಸಿದ್ದ 6 ಟ್ರಕ್ಟರ್ ಮರಳು ಹಾಗೂ 1 ಕೊಪ್ಪರಿಕೆಯನ್ನು ಕಂದಾಯ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.

ತಹಶೀಲ್ದಾರ್ ಸುರೇಶ್‌ಕುಮಾರ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ರಾಜಸ್ವ ನಿರೀಕ್ಷಕ ವೆಂಕಟರಮಣ ಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT