ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀಘ್ರ ರಾಜಮನೆತನಕ್ಕೆ ಹೊಸ ಕುಡಿ

Last Updated 18 ಜುಲೈ 2013, 19:59 IST
ಅಕ್ಷರ ಗಾತ್ರ

 ಲಂಡನ್ (ಪಿಟಿಐ): ಬ್ರಿಟನ್ ರಾಜಮನೆತನಕ್ಕೆ ಹೊಸ ಕುಡಿಯ ಆಗಮನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಕುತೂಹಲಕ್ಕೆ ವಾರಾಂತ್ಯದಲ್ಲಿ ತೆರೆ ಬೀಳಲಿದೆ ಎಂದು ರಾಜಕುಮಾರ ಚಾರ್ಲ್ಸ್ ಅವರ ಪತ್ನಿ ಕ್ಯಾಮಿಲಾ ತಿಳಿಸಿದ್ದಾರೆ.

`ಯುವರಾಜ ವಿಲಿಯಂ ಮತ್ತು ಕೇಟ್ ದಂಪತಿಗೆ ಈ ವಾರದ ಅಂತ್ಯದಲ್ಲಿ ಮಗ ಅಥವಾ ಮಗಳು ಜನಿಸಬಹುದು. ನಾವೆಲ್ಲರೂ ಆ ಸಂಭ್ರಮದ ಕ್ಷಣಕ್ಕಾಗಿ ಕಾತರರಾಗಿದ್ದೇವೆ' ಎಂದು ಕ್ಯಾಮಿಲಾ ಹೇಳಿದ್ದಾರೆ.

ರಾಜಕುಮಾರ ಚಾರ್ಲ್ಸ್ ಮತ್ತು ಕ್ಯಾಮಿಲಾ ದಂಪತಿ ಮಂಗಳವಾರವೇ ತಮ್ಮ ವಾರ್ಷಿಕ ರಜಾ ದಿನಗಳನ್ನು ಕಳೆಯಲು ಪ್ರಸಿದ್ಧ ಪ್ರವಾಸಿ ತಾಣ ಬ್ಯೂಡ್‌ಗೆ ತೆರಳಿದ್ದಾರೆ. ಆದರೆ, ದೂರವಾಣಿ ಮೂಲಕ ಪ್ರತಿ ಕ್ಷಣದ ಬೆಳವಣಿಗೆಯನ್ನು ಅಲ್ಲಿಂದಲೇ ತಿಳಿದುಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT