ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀಘ್ರವೇ ಹೆಚ್ಚುವರಿ ತಹಶೀಲ್ದಾರರ ನೇಮಕ: ರೆಡ್ಡಿ

Last Updated 8 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ತಹಶೀಲ್ದಾರ್ ಕಚೇರಿಗಳಲ್ಲಿ ಕೆಲಸದ ಒತ್ತಡ ಜಾಸ್ತಿಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಪ್ರತಿಯೊಂದು ತಹಶೀಲ್ದಾರ್ ಮತ್ತು ಉಪ ವಿಭಾಗಾಧಿಕಾರಿ ಕಚೇರಿಗಳಲ್ಲಿ ಹೆಚ್ಚುವರಿಯಾಗಿ ಗ್ರೇಡ್-2 ತಹಶೀಲ್ದಾರ್ ಹುದ್ದೆಗಳನ್ನು ಹೊಸದಾಗಿ ಸೃಷ್ಟಿಸಿ ನೇಮಕ ಮಾಡಲಾಗಿದೆ ಎಂದು ಕಂದಾಯ ಸಚಿವ ಜಿ.ಕರುಣಾಕರ ರೆಡ್ಡಿ ಬುಧವಾರ ತಿಳಿಸಿದರು.

228 ಉಪ ತಹಶೀಲ್ದಾರ್‌ಗಳಿಗೆ ಗ್ರೇಡ್-2 ತಹಶೀಲ್ದಾರ್ ಹುದ್ದೆಗೆ ಬಡ್ತಿ ನೀಡಿ ಈಗಾಗಲೇ ತಾಲ್ಲೂಕು ಕಚೇರಿಗಳಿಗೆ ನಿಯೋಜಿಸಲಾಗಿದೆ. ಬಾಕಿ ಇರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವ ದೃಷ್ಟಿಯಿಂದ ಮತ್ತೊಬ್ಬ ತಹಶೀಲ್ದಾರ್ ನೇಮಕ ಅಗತ್ಯವಾಗಿತ್ತು ಎಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಮ್ಯಾಜಿಸ್ಟ್ರೇಟ್ ಅಧಿಕಾರ ಗ್ರೇಡ್-1 ತಹಶೀಲ್ದಾರ್‌ಗೆ ಮಾತ್ರ ಇರುತ್ತದೆ. ಗ್ರೇಡ್-2 ತಹಶೀಲ್ದಾರ್‌ಗಳ ಅಧಿಕಾರ ವ್ಯಾಪ್ತಿ, ಕಾರ್ಯಭಾರವನ್ನು ಸದ್ಯದಲ್ಲೇ ನಿರ್ಧರಿಸಿ ಆದೇಶ ಹೊರಡಿಸಲಾಗುವುದು. ನಾಡ ಕಚೇರಿಗಳು ಮುಂದುವರಿಯಲಿದ್ದು, ಬಡ್ತಿಯಿಂದಾಗಿ ತೆರವಾಗುವ ಉಪ ತಹಶೀಲ್ದಾರ್ ಹುದ್ದೆಗಳಿಗೆ ಹೊಸಬರನ್ನು ನೇಮಿಸಲಾಗುವುದು ಎಂದರು.

ಮುಂದಿನ ತಿಂಗಳು ಅರ್ಜಿ ಆಹ್ವಾನ: 1600 ಸರ್ವೇಯರ್‌ಗಳ ನೇಮಕಕ್ಕೆ ಜುಲೈನಲ್ಲಿ ಅರ್ಜಿ ಆಹ್ವಾನಿಸಲಾಗುತ್ತದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ನೇಮಕಾತಿ ಜವಾಬ್ದಾರಿಯನ್ನು ವಹಿಸಲಾಗಿದ್ದು ಸೆಪ್ಟೆಂಬರ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ನವೆಂಬರ್ ಒಳಗೆ ನೇಮಕ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದರು.

ಅಕ್ರಮ-ಸಕ್ರಮ: ಹಲವಾರು ವರ್ಷಗಳಿಂದ ಸರ್ಕಾರಕ್ಕೆ ಸೇರಿದ ಭೂಮಿಯಲ್ಲಿ ರೈತರು ಸಾಗುವಳಿ ಮಾಡುತ್ತಿದ್ದಾರೆ. ಈ ರೀತಿಯ ಪ್ರಕರಣಗಳನ್ನು  ಬಗರ್‌ಹುಕುಂ ಯೋಜನೆಯಡಿ ಇತ್ಯರ್ಥಪಡಿಸಿ ಬಡ ರೈತರಿಗೆ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. 1991 ಮತ್ತು 99ರಲ್ಲಿ ಈ ಯೋಜನೆಯಡಿ ಅರ್ಜಿಗಳನ್ನು ಆಹ್ವಾನಿಸಿದಾಗ ಕ್ರಮವಾಗಿ 10,90,408 ಮತ್ತು 10,94,605 ಅರ್ಜಿಗಳು ಬಂದಿದ್ದವು. ಆದರೆ 11 ಲಕ್ಷ ಅರ್ಜಿಗಳು ತಿರಸ್ಕೃತಗೊಂಡಿವೆ.

ಹಳೇ ಅರ್ಜಿಗಳನ್ನೇ ಪರಿಗಣಿಸಬೇಕೇ ಅಥವಾ ಹೊಸದಾಗಿ ಮತ್ತೆ ಅರ್ಜಿಗಳನ್ನು ಕರೆಯಬೇಕೇ ಎಂಬ ಬಗ್ಗೆ ಪರಿ ಶೀಲನೆ ನಡೆದಿದೆ. ಸದ್ಯದಲ್ಲಿಯೇ ಈ ಬಗ್ಗೆ ಸರ್ಕಾರ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳ ಲಿದೆ ಎಂದು ಅವರು ಹೇಳಿದರು. 132 ವಿಧಾನಸಭಾ ಕ್ಷೇತ್ರಗಳಲ್ಲಿ ಅಕ್ರಮ-ಸಕ್ರಮ ಸಮಿತಿಗಳ ರಚನೆಯಾಗಿದೆ. 45 ಕ್ಷೇತ್ರ ಗಳಲ್ಲಿ ಇನ್ನೂ ಆಗಿಲ್ಲ. ಜಿಲ್ಲಾಧಿಕಾರಿಗಳ ಕಚೇರಿಯಿಂದ ವರದಿ ಬರಬೇಕಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT