ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಕ್ರವಾರ, 5-4-1963

Last Updated 4 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಮೈಸೂರು ವಾದ ಆಶ್ಚರ್ಯಕರ ಎಂದು ಮುಂಬೈ ವಕ್ತಾರ
ಮುಂಬೈ, ಏ. 4
- ಕೃಷ್ಣ ನದಿ ನೀರನ್ನು ಪಶ್ಚಿಮಕ್ಕೆ ಅಡ್ಡತಿರುಗಿಸಬೇಕೆಂಬ ಬೇಡಿಕೆಯನ್ನು ಮಹಾರಾಷ್ಟ್ರ ರಾಜ್ಯವು ಬಿಟ್ಟುಕೊಟ್ಟರೆ ತಮ್ಮ ರಾಜ್ಯಕ್ಕೆ ವಿದ್ಯುಚ್ಛಿಕ್ತಿಯನ್ನು ಸರಬರಾಜು ಮಾಡಲು ಸಿದ್ಧವಾಗಿರುವುದಾಗಿ ಮೈಸೂರು ರಾಜ್ಯದ ಹೇಳಿಕೆಯು ಆಶ್ಚರ್ಯಕರವಾಗಿದೆಯೆಂದು ಮಹಾರಾಷ್ಟ್ರ ಸರ್ಕಾರದ ವಕ್ತಾರರೊಬ್ಬರು ಇಂದು ಪತ್ರಕರ್ತರಿಗೆ ತಿಳಿಸಿದರು.

ರಾಜ್ಯಕ್ಕೆ ಕರ್ನಾಟಕ ನಾಮಕರಣ ಮುಂದಕ್ಕೆ
ಬೆಂಗಳೂರು, ಏ. 4
- ಇಂದು ವಿಧಾನಸಭೆ ಸಭಾನಾಯಕರಾದ ಶ್ರೀ ಎಸ್. ನಿಜಲಿಂಗಪ್ಪನವರು ಮಂಡಿಸಿದ ಸೂಚನೆಯನ್ನು ಅಂಗೀಕರಿಸಿ ರಾಜ್ಯದ ಹೆಸರನ್ನು `ಕರ್ನಾಟಕ' ಎಂದು ಬದಲಾಯಿಸಬೇಕೆಂಬ ಖಾಸಗಿ ನಿರ್ಣಯದ ಚರ್ಚೆಯನ್ನು ಅನಿರ್ದಿಷ್ಟ ಕಾಲದವರೆಗೆ ಮುಂದಕ್ಕೆ ಹಾಕಲು ತೀರ್ಮಾನಿಸಿತು.

ತುರ್ತು ಪರಿಸ್ಥಿತಿಯಲ್ಲಿ ತೀವ್ರ ಭಿನ್ನಾಭಿಪ್ರಾಯಗಳಿರುವ ವಿಷಯವನ್ನು ಚರ್ಚಿಸುವುದು ಸಾಧುವಾಗಿರುವುದಿಲ್ಲವೆಂದು ಮುಖ್ಯಮಂತ್ರಿಗಳು ಸಭೆಗೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT