ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಚಿತ್ವ ಕಾಪಾಡದ ಹೋಟೆಲ್ ವಿರುದ್ಧ ಕಠಿಣ ಕ್ರಮ

Last Updated 2 ಆಗಸ್ಟ್ 2012, 8:00 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ನಗರದಲ್ಲಿ ಶುಚಿತ್ವ ಕಾಪಾಡದ ಹೋಟೆಲ್‌ಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಅಧ್ಯಕ್ಷ ಸಿ.ಆರ್.ಪ್ರೇಮ್‌ಕುಮಾರ್ ಎಚ್ಚರಿಕೆ ನೀಡಿದರು.

ನಗರದಲ್ಲಿ ಬುಧವಾರ ನಗರಸಭೆ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹ ಯೋಗದಲ್ಲಿ ಆರಂಭಿಸಿರುವ ಮನೆ, ಮನೆ ಕಸ ಸಂಗ್ರಹಣೆ ಶುಲ್ಕ ಪಾವತಿ ಗೋಲ್ಡ್‌ಕಾರ್ಡ್ ಬಿಡು ಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಕೆಲವು ಬಡಾವಣೆಗೆ ಕಸ ಸಂಗ್ರಹಣೆಗೆ ತಳ್ಳುಗಾಡಿಗಳು ಬರುತ್ತಿಲ್ಲ ಎಂಬ ದೂರುಗಳಿವೆ. ನಗರದಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿರುವುದರಿಂದ ಕೆಲವು ಬಡಾವಣೆಗೆ ಕಸ ಸಂಗ್ರಹಿಸಲು ತಳ್ಳುಗಾಡಿಗಳು ಹೋಗಲು ಸಾಧ್ಯವಾಗುತ್ತಿಲ್ಲ. ಅಂತಹ ಬಡಾವಣೆಗಳಿಗೆ ಟಿಪ್ಪರ್ ಒದಗಿಸಲಾಗುವುದು ಎಂದು ಹೇಳಿದರು.

ಈಗಾಗಲೇ ನಗರಸಭೆ ವ್ಯಾಪ್ತಿಯಲ್ಲಿ 17,200 ಮನೆಗಳಿವೆ. ಅದರಲ್ಲಿ 14,990 ಮನೆಯವರು ಮಾತ್ರ ಕಸ ನೀಡುತ್ತಿದ್ದಾರೆ. ಉಳಿದ ಮನೆಗಳು ತಳ್ಳುಗಾಡಿಗಳಿಗೆ ಕಸ ನೀಡುವಂತೆ ಅವರಲ್ಲಿ ತಿಳಿವಳಿಕೆ ಮೂಡಿಸಬೇಕಾಗಿದೆ. ಸ್ವಚ್ಛತೆ ವೆಚ್ಚ ಸರಿದೂಗಿಸಬೇಕಾಗಿದೆ. ಅದಕ್ಕಾಗಿ ನಗರಸಭೆ ಸಿಬ್ಬಂದಿ ಚುರುಕಾಗಿ ಕೆಲಸ ನಿರ್ವಹಿಸುವುದು ಅಗತ್ಯ ಎಂದು ತಿಳಿಸಿದರು.

ರಾಜ್ಯಕ್ಕೆ ಮಾದರಿಯಾಗುವಂತೆ ನಗರದಲ್ಲಿ ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿ ಆಗಬೇಕಾಗಿದೆ. ಸಾರ್ವಜನಿಕರು ನೀಡುತ್ತಿರುವ ಕಸ ಸಂಗ್ರಹಣೆ ಶುಲ್ಕ ವಾರ್ಷಿಕ ಹಣವನ್ನು ಮೊದಲೇ ನೀಡಿದರೆ ಅವರಿಗೆ 1ತಿಂಗಳ ಶುಲ್ಕ ರಿಯಾಯಿತಿ ನೀಡುವ ಗೋಲ್ಡ್‌ಕಾರ್ಡ್‌ನ್ನು ಮೊದಲು ಗ್ರಾಮಾಭಿವೃದ್ಧಿ ಯೋಜನೆ ಸಿಬ್ಬಂದಿ, ನಗರಸಭೆ ಸಿಬ್ಬಂದಿ, ನೌಕರರು ಹಾಗೂ ನಗರಸಭೆ ಸದಸ್ಯರು ಪಡೆದುಕೊಳ್ಳಲು ಮುಂದಾಗಬೇಕೆಂದು ಮನವಿ ಮಾಡಿದರು.

ಹಿಂದುಳಿದ ವರ್ಗದ ಬಡವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯಲು ಶೇ.22.75ರ ಅನುದಾನದಲ್ಲಿ ಹಣ ನೀಡಲು 6.25ಲಕ್ಷ ರೂಪಾಯಿ ಕಾಯ್ದಿರಿಸಲಾಗಿದೆ. ತಾಂತ್ರಿಕ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ 5 ಸಾವಿರ ರೂಪಾಯಿ ಮತ್ತು ಪದವಿ ಪಡೆಯುತ್ತಿ ರುವವರಿಗೆ 2 ಸಾವಿರ ರೂಪಾಯಿ ನೀಡಲಾಗುತ್ತಿದೆ. ಮೊದಲ ಹಂತವಾಗಿ 176 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ 84 ವಿದ್ಯಾರ್ಥಿಗಳಿಗೆ 3 ಲಕ್ಷ ರೂಪಾಯಿ ನೀಡಲಾಗುತ್ತಿದೆ ಎಂದು ಹೇಳಿದರು.

ಸುಮಾರು 2 ಕೋಟಿ ರೂಪಾಯಿ ಪ್ರೋತ್ಸಾಹ ಧನವನ್ನು ಸರ್ಕಾರ ಸದ್ಯದಲ್ಲೆ ನಗರಸಭೆಗೆ ನೀಡಲಿದೆ. ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಉಪಾಧ್ಯಕ್ಷೆ ಶಿಲ್ಪಾ ರಾಜಶೇಖರ್ ಮಾತ ನಾಡಿ, ಸುಂದರ ನಗರವನ್ನಾಗಿಸಲು ಕಸ ಸಂಗ್ರ ಹಣೆ ಮಾಡುತ್ತಿರುವ ಸಂಸ್ಥೆಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ನಗರಸಭೆ ಮಾಜಿ ಅಧ್ಯಕ್ಷ ಕೆ.ಶ್ರೀನಿವಾಸ ಮಾತನಾಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಸಮುದಾಯ ಅಭಿವೃದ್ಧಿ ವಿಭಾಗದ ನಿರ್ದೇಶಕ ಜಯರಾಮ ನೆಲ್ಲಿತ್ತಾಯ, ನಗರಸಭೆ ಆಯುಕ್ತ ಪ್ರಭಾಕರ್, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ತೇಗೂರು ಜಗದೀಶ್ ಮಾತನಾಡಿದರು.

ಯೋಜನೆ ಜಿಲ್ಲಾ ನಿರ್ದೇಶಕ ಲಿಂಗಪ್ಪ ಬಂಗೇರ, ನಗರಸಭೆ ಸದಸ್ಯರಾದ ಕಸ್ತೂರಿ ಎಸ್.ಪವಾರ್, ಹಿತಾಕ್ಷಿ ಚನ್ನಕೇಶವ, ಲಕ್ಷ್ಮಮ್ಮ, ಕುಮಾರಸ್ವಾಮಿ, ಮಧುಕುಮಾರ್, ಜಾನಯ್ಯ, ನರಸಿಂಹ, ಸಗಾಯ್, ಯೋಜನೆ ಮುಖಂಡ ಲಕ್ಷ್ಮಣ್ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT