ಬುಧವಾರ, 10 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುದ್ಧ ಕುಡಿವ ನೀರು ಕರ್ನಾಟಕದ ನಿರಾಸಕ್ತಿ

Last Updated 1 ಡಿಸೆಂಬರ್ 2012, 20:44 IST
ಅಕ್ಷರ ಗಾತ್ರ

ನವದೆಹಲಿ: ಜನತೆಗೆ ಶುದ್ಧ ಕುಡಿಯುವ ನೀರು ಪೂರೈಕೆ ವಿಷಯದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ಉತ್ತರಪ್ರದೇಶ ಸೇರಿದಂತೆ ಬಹುತೇಕ ದೊಡ್ಡ ರಾಜ್ಯಗಳಲ್ಲೇ ತೀರ ಕಳಪೆ ಸಾಧನೆ ಕಂಡುಬಂದಿದ್ದು, ದೇಶದ ಗ್ರಾಮೀಣ ಭಾಗದ ಇನ್ನೂ ಸುಮಾರು ಒಂದು ಲಕ್ಷಕ್ಕೂ ಅಧಿಕ ಗ್ರಾಮಗಳ ಜನ ಕಲುಷಿತ ನೀರಿನ ಮೂಲಗಳನ್ನೇ ಆಶ್ರಯಿಸುವಂತಾಗಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಈ ರಾಜ್ಯಗಳಿಗೆ ನಿಗದಿ ಮಾಡಲಾದ ಗುರಿಯಲ್ಲಿ ಸಾಧನೆಯಾಗಿದ್ದು ಶೇ 20ಕ್ಕಿಂತ ಕಡಿಮೆ ಎಂಬ ಆತಂಕ ಕೇಂದ್ರದ ಕುಡಿಯುವ ನೀರು, ನೈರ್ಮಲ್ಯ ಸಚಿವಾಲಯದ ಮಧ್ಯಾವಧಿ ವರದಿಯಲ್ಲಿ ವ್ಯಕ್ತವಾಗಿದೆ.

2012-13ರ ಹಣಕಾಸು ವರ್ಷದಲ್ಲಿ ದೇಶದ 26521 ಜನವಸತಿ ಪ್ರದೇಶಗಳಲ್ಲಿಯ ಕಲುಷಿತ ನೀರಿನ ಸಮಸ್ಯೆ ಪರಿಹಾರಕ್ಕೆ ಗುರಿ ನಿಗದಿ ಮಾಡಲಾಗಿದ್ದರೆ, ಸಮಸ್ಯೆ ಪರಿಹಾರವಾಗಿದ್ದು ಬರಿ 4036ರಲ್ಲಿ ಮಾತ್ರ. ಇದು ರಾಷ್ಟ್ರೀಯ ಸರಾಸರಿಯ ಶೇ 15.22 ಸಾಧನೆ ಮಾತ್ರ ಎಂದು ತಿಳಿಸಲಾಗಿದೆ. 2013ರ ಮಾರ್ಚ್ ಒಳಗಡೆ ಕಲುಷಿತ ನೀರಿನ ಸಮಸ್ಯೆಯನ್ನು ಸಂಪೂರ್ಣವಾಗಿ ಪರಿಹರಿಸುವ ದಿಸೆಯಲ್ಲಿ ರಾಜ್ಯ ಸರ್ಕಾರಗಳು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೇಂದ್ರ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT