ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುದ್ಧ ನೀರು: ಜನರ ಕನಸು ನನಸು

Last Updated 13 ಅಕ್ಟೋಬರ್ 2012, 9:15 IST
ಅಕ್ಷರ ಗಾತ್ರ

ರಟ್ಟೀಹಳ್ಳಿ: ರಟ್ಟೀಹಳ್ಳಿ ಮತ್ತು ಸುತ್ತ- ಮುತ್ತಲಿನ ಅನೇಕ ಗ್ರಾಮಗಳ ಜನತೆ ಅನೇಕ ದಶಕಗಳಿಂದ ಫ್ಲೋರೈಡ್‌ಯುಕ್ತ ಕುಡಿಯುವ ನೀರನ್ನು ಸೇವಿಸುತ್ತ ಬಂದಿದ್ದು, ಇದಕ್ಕೆ ಅಂತ್ಯವಾಗುವ ಕಾಲ ಸನ್ನಿಹಿತವಾಗಿದೆ.
`ರಾಜೀವ್‌ಗಾಂಧಿ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆ~ ಅಡಿಯಲ್ಲಿ  ಬಹು ಗ್ರಾಮ ನದಿ ನೀರು ಸರಬರಾಜು ಯೋಜನೆಯಡಿ 8 ಕೋಟಿ 55 ಲಕ್ಷ ರೂ ವೆಚ್ಚದ ಕುಡಿಯುವ ನೀರಿನ ಶುದ್ದೀಕರಣ ಘಟಕ ನಿರ್ಮಾಣ ಕಾರ್ಯ ಸಮರೋಪಾದಿಯಲ್ಲಿ ಸಾಗಿದೆ.

ಪ್ರತಿ ತೊಟ್ಟಿಯ ಮಧ್ಯೆ ನೀರು ಹರಿ ಯುವ ಕಾಲುವೆ ಇರುತ್ತದೆ. ಈ ಪೈಪುಗಳ ಮೇಲೆ ಮೊದಲ ಹಂತವಾಗಿ 40 ಎಂಎಂ ಗಾತ್ರದ ಕಲ್ಲುಗಳನ್ನು ಒಂದು ಅಡಿ ಎತ್ತರದವರೆಗೆ ಜೋಡಿಸ ಲಾಗುತ್ತದೆ. ನಂತರ ಎರಡನೇ ಹಂತ ವಾಗಿ 20 ಎಂಎಂ ಗಾತ್ರದ ಒಂದು ಅಡಿ ಎತ್ತರದ ಕಲ್ಲುಗಳನ್ನು, ಮೂರನೇ ಹಂತ ವಾಗಿ 12 ಎಂಎಂ ಗಾತ್ರದ ಕಲ್ಲುಗಳನ್ನು, ನಾಲ್ಕನೇ ಹಂತವಾಗಿ 6 ಎಂಎಂ ಗಾತ್ರದ ಕಲ್ಲುಗಳನ್ನು ಜೋಡಿಸಲಾಗುತ್ತದೆ. ನಂತರ ಅಂತಿಮ ಹಂತವಾಗಿ 4 ಅಡಿ ಮರಳನ್ನು ಸಂಗ್ರಹಿಸಲಾಗುತ್ತದೆ. ಹೀಗೆ ಪ್ರತಿ ತೊಟ್ಟಿಯಲ್ಲಿ 8 ಅಡಿಗಳವರೆಗೆ ವಿವಿಧ ಗಾತ್ರದ ಕಲ್ಲುಗಳನ್ನು ಜೋಡಿಸಲಾಗುತ್ತದೆ. ಇದರ ಮೇಲೆ ಬಿದ್ದ ನೀರು ಹಂತ-ಹಂತವಾಗಿ ಶುದ್ದೀಕರಣವಾಗುತ್ತ ತಳ ಭಾಗದಲ್ಲಿ ಜೋಡಿಸಿದ  ಪೈಪುಗಳ ಮೂಲಕ ನೀರಿನ ಕಾಲುವೆ ತಲುಪಿ, ಅಲ್ಲಿಂದ ಸಂಪ್‌ಗೆ ವರ್ಗಾವಣೆಯಾಗುತ್ತದೆ. ಸಂಪ್‌ನಲ್ಲಿ 3 ಲಕ್ಷ ಲೀಟರ್ ನೀರು ಸಂಗ್ರಹಿಸುವ ಸಾಮರ್ಥ್ಯವಿದೆ. ಈ ಸಂಪ್‌ನಿಂದ ಎತ್ತರದಲ್ಲಿ ನಿರ್ಮಾಣವಾಗುತ್ತಿರುವ  ಎರಡು ನೀರಿನ ಟ್ಯಾಂಕ್‌ನಲ್ಲಿ ನೀರು ಸಂಗ್ರಹ ಮಾಡಿ ಈ ಮೂಲಕ 13 ಗ್ರಾಮಗಳಿಗೆ ನೀರು ಸರಬರಾಜು ಮಾಡ ಲಾಗುತ್ತದೆ. ಪ್ರತಿ ಟ್ಯಾಂಕ್ 3 ಲಕ್ಷ ಲೀ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿವೆ.

ರಟ್ಟೀಹಳ್ಳಿ, ತೋಟಗಂಟಿ, ಚಿಕ್ಕ ಮೊರಬ, ಕಡೂರ, ಬುಳ್ಳಾಪುರ, ಹಾಡೇ, ಸಣ್ಣಗುಬ್ಬಿ, ಕಣವಿಸಿದ್ಗೇರಿ, ಪರ್ವತಸಿದ್ಗೇರಿ, ಚಪ್ಪರದಹಳ್ಳಿ, ಯಲಿ ವಾಳ, ಮಳಗಿ ಮತ್ತು ಜೋಕನಹಳ್ಳಿ ಗ್ರಾಮಗಳು ಈ ವ್ಯಾಪ್ತಿಯಲ್ಲಿ ಬರು ತ್ತವೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ತಲಾ ಶೇ 50 ರಷ್ಟು ವೆಚ್ಚ ಭರಿಸುತ್ತವೆ.

ಇದಕ್ಕಾಗಿ ಸಾರ್ವಜನಿಕ ರಿಂದ ಯಾವುದೇ ವಂತಿಗೆ ಇರುವುದಿಲ್ಲ. ಈಗಾಗಲೇ  13 ಗ್ರಾಮಗಳಲ್ಲಿ ಪೈಪ್ ಲೈನ್ ಜೋಡಣೆ ಕಾರ್ಯ ಮುಗಿ ಯುವ ಹಂತದಲ್ಲಿದೆ. ನಿರ್ಮಾಣ ಕಾರ್ಯ ಇದೇ ಭರದಲ್ಲಿ ಸಾಗಿದರೆ 4-5 ತಿಂಗಳಿನಲ್ಲಿ ಈ ಎಲ್ಲ ಗ್ರಾಮಗಳು ಶುದ್ದ ಕುಡಿಯುವ ನೀರನ್ನು ಪಡೆಯ ಲಿವೆ. ಅನೇಕ ದಶಕಗಳ ಕಾಲ ಕಂಡ ಕನಸು ನಿಜವಾಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT