ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುದ್ಧ ನೀರು ಪೂರೈಕೆ: ಸದಸ್ಯರ ಒಕ್ಕೊರಲ ಆಗ್ರಹ

Last Updated 27 ಫೆಬ್ರುವರಿ 2011, 9:55 IST
ಅಕ್ಷರ ಗಾತ್ರ

ಮಂಡ್ಯ: ಬೇಸಿಗೆ ಅವಧಿ ಪ್ರವೇಶ ಮಾಡುತ್ತಿರುವಂತೆಯೇ ನಗರದಲ್ಲಿ ಕುಡಿಯುವ ನೀರು ಪೂರೈಕೆ ಸಮಸ್ಯೆ ಕುರಿತು ಗಮನ ಹರಿಸಿರುವ ನಗರಸಭೆಯ ಸದಸ್ಯರು ನಿತ್ಯ ಕನಿಷ್ಠ ಮುಕ್ಕಾಲು ಗಂಟೆಯಾದರೂ ಶುದ್ಧ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಜಲಮಂಡಳಿ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.ನಗರಸಭೆ ಸಭಾಂಗಣದಲ್ಲಿ ಶನಿವಾರ ನಡೆದ ಸಭೆಯಲ್ಲಿ ಸದಸ್ಯರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಜಲಮಂಡಳಿಯ ಕಾರ್ಯ ನಿರ್ವಾಹಕ ಎಂಜಿನಿ ಯರ್ ರಾಜು ಅವರು, ಸದಸ್ಯರ ಅಭಿಪ್ರಾಯ ದಂತೆ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು.

ನೀರು ಪೂರೈಕೆ, ನಿರ್ವಹಣೆಯಲ್ಲಿ ಜಲ ಮಂಡಳಿ ಅಧಿಕಾರಿಗಳದು ನಿರ್ಲಕ್ಷ್ಯ ವಹಿಸಿ ದ್ದಾರೆ ಎಂದು ತರಾಟೆಗೆ ತೆಗೆದುಕೊಂಡ ಸದಸ್ಯರು, ನೀರು ಸೋರಿಕೆ, ಪೂರೈಕೆ ಕುರಿತು ಗಮನಹರಿಸುವುದಿಲ್ಲ. ವಾಲ್ವ್‌ಮನ್‌ಗಳು ರಾಜಕಾರಣ ಮಾಡುತ್ತಿದ್ದು, ಹಣ ನೀಡಿದರೆ ನೀರು ಹರಿಸುತ್ತಾರೆ ಎಂದು ಆರೋಪಿಸಿದರು.

ಸದಸ್ಯರ ಮಾತುಗಳಿಗೆ ಪ್ರತಿಕ್ರಿಯಿಸಿದ ಜಲಮಂಡಳಿ ಕಾರ್ಯಕಾರಿ ಎಂಜಿನಿಯರ್ ಡಿ.ಎಲ್.ರಾಜು, ನಿಯಮಿತವಾಗಿ ನಿತ್ಯ ಮುಕ್ಕಾಲು ಗಂಟೆ ನೀರು ಹರಿಸಲು ಪ್ರಯತ್ನಿ ಸುತ್ತೇವೆ. ಅಲ್ಲದೆ, ನಾಗರಿಕರು ನೀರಿನ ಸಮಸ್ಯೆಗಳ ಬಗೆಗೆ ನೇರವಾಗಿ ಜಲಮಂಡಳಿಯ ದೂರು ಸ್ವೀಕಾರ ಕೇಂದ್ರಕ್ಕೆ ಮಾಹಿತಿ ತಿಳಿಸಬೇಕು ಎಂದು ಮನವಿ ಮಾಡಿದರು.

ನಗರದಲಿ ಬೋರ್‌ವೆಲ್‌ಗಳ ಸ್ಟಾರ್ಟರ್‌ಗೆ ಲಾಕ್ ಅಳವಡಿಸಲು ವರ್ಷದ ಹಿಂದೆಯೇ ಕ್ರಿಯಾಯೋಜನೆ ಸಲ್ಲಿಸಿದ್ದರೂ ನಗರಸಭೆಯ ಆಯುಕ್ತರು ಅದಕ್ಕೆ ಸ್ಪಂದಿಸಿಲ್ಲ ಎಂದು ಮಾಹಿತಿ ನೀಡಿದರು.
ಸದಸ್ಯರ ಪರವಾಗಿ ಮಾತನಾಡಿದ ಅಧ್ಯಕ್ಷ ಎಂ.ಪಿ. ಅರುಣ್‌ಕುಮಾರ್ ಅವರು, ಸದಸ್ಯರು ನೀರಿನ ಸಮಸ್ಯೆಗಳನ್ನು ಕುರಿತು ಅಧಿಕಾರಿಗಳ ಗಮನವನ್ನು ಸೆಳೆಯಲು ಇನ್ನು ಮುಂದಿ ನಿಯಮಿತವಾಗಿ ಸಭೆ ಕರೆಯಲಾಗುವುದು. ಮತ್ತೆ, ಏಪ್ರಿಲ್ 25ಕ್ಕೆ ಸಭೆ ಕರೆಯಲಿದ್ದು, ಆ ಸಭೆಯಲ್ಲಿ ಅಲ್ಲಿಯವರೆಗೂ ಕೈಗೊಂಡ ಕ್ರಮಗಳ ಬಗೆಗೂ ಮಾಹಿತಿ ನೀಡಬೇಕು ಎಂದು ತಾಕೀತು ಮಾಡಿದರು.

ಶುದ್ಧವಾದ, ಕುಡಿಯಲು ಯೋಗ್ಯವಾದ ನೀರನ್ನು ಕನಿಷ್ಠ ಮುಕ್ಕಾಲು ಗಂಟೆಯಾದರೂ ಪೂರೈಕೆ ಮಾಡಬೇಕು. ಈ ಸಂಬಂಧ ಅಗತ್ಯವಿರುವ ಸಹಕಾರವನ್ನು ನಗರಸಭೆಯು ಒದಗಿಸಲಿದೆ ಎಂದು ಸಭೆ ಭರವಸೆ ನೀಡಿತು.ಆರಂಭದಲ್ಲಿ ಇಇ ಸಮಯಕ್ಕೆ ಸರಿಯಾಗಿ ಸಭೆಗೆ ಆಗಮಿಸಿಲ್ಲ ಎಂದು ಸದಸ್ಯರು ತಕರಾರು ತೆಗೆದಾಗ, ಇಇ ಡಿ.ಎಲ್.ರಾಜು ಅವರು, ‘ತಮಗೆ ಇಂದಿನ ಸಭೆಯ ಬಗೆಗೆ ಮಾಹಿತಿಯೇ ಇರಲಿಲ್ಲ’ ಎಂದು ಹೇಳಿದರು.

ಉಪಾಧ್ಯಕ್ಷ ಎಂ.ಜೆ.ಚಿಕ್ಕಣ್ಣ ಅವರು, ಜಲಮಂಡಳಿ ಅಧಿಕಾರಿಗಳ ಕಾರ್ಯ ವೈಖರಿಯನ್ನು ಟೀಕಿಸಿ ಬಂದಿಗೌಡ ಬಡಾವಣೆ ಯಲ್ಲಿ ಒಂದು ತಿಂಗಳು ಮಲೀನ ನೀರನ್ನೇ ಪೂರೈಸಲಾಗಿದೆ. ಸಿಬ್ಬಂದಿ ಪರಿಣಾಮಕಾರಿ ಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.ಸದಸ್ಯರಾದ ನಾಗಮ್ಮ, ಪದ್ಮಾವತಿ, ಬೋರೇಗೌಡ, ಶ್ರೀಧರ್ ಮತ್ತಿತರರು ಮಾತನಾಡಿದರು. ಜಲಮಂಡಳಿ ಅಧಿಕಾರಿ ಮಹೇಂದ್ರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT