ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಭಾರಂಭದ ಸವಿಗನಸಿನಲ್ಲಿ ವನಿತೆಯರು

Last Updated 17 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ: ಶುಕ್ರವಾರ ಬೆಳಿಗ್ಗೆ ಗೇಟ್‌ವೇ ಆಫ್ ಇಂಡಿಯಾ ಮುಂದೆ ನಿಂತು ಫೋಟೋ ತೆಗೆಸಿಕೊಂಡ ಭಾರತ ಮಹಿಳಾ ಹಾಕಿ ತಂಡದ ನಗುಮುಖದಲ್ಲಿ ಆತ್ಮವಿಶ್ವಾಸ ಮಿಂಚಿತ್ತು!

ಶನಿವಾರ ಆರಂಭವಾಗಲಿರುವ ಒಲಿಂಪಿಕ್ ಅರ್ಹತಾ ಸುತ್ತಿನ ಟೂರ್ನಿಗೂ ಮುನ್ನಾ ದಿನದ ಫೋಟೋ ಶೂಟ್‌ನಲ್ಲಿ ಭಾಗವಹಿಸಿದ್ದ ವನಿತೆಯ ರಿಗೆ, ಟೂರ್ನಿಯಲ್ಲಿ ವಿಜೇತರಾಗಿ ಮತ್ತೊಂದು ಫೋಟೋ ತೆಗೆಸಿ ಕೊಳ್ಳುವ ತವಕ. 32 ವರ್ಷಗಳಿಂದ ಕನಸು ನನಸುಗೊಳಿಸುವ ಹುಮ್ಮಸ್ಸು ಅವರದ್ದು.

1980ರ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಆಹ್ವಾನಿತ ತಂಡವಾಗಿ ಭಾಗವಹಿಸಿದ್ದ ಭಾರತದ ಮಹಿಳಾ ತಂಡಕ್ಕೆ ಇಲ್ಲಿಯ ವರೆಗೆ ಅದೃಷ್ಟ ಒಲಿದಿಲ್ಲ. ಆದರೆ ಈ ಬಾರಿ ಉತ್ತಮ ತಂಡ ಎಂದು ಬಿಂಬಿತವಾಗಿರುವ ಅಸುಂತಾ ಲಕ್ರಾ ನೇತೃತ್ವದ ತಂಡವು ಲಂಡನ್ ಒಲಿಂಪಿಕ್ಸ್‌ಗೆ ರಹದಾರಿ ಪಡೆಯುವ ವಿಶ್ವಾಸದಲ್ಲಿದೆ. ಶನಿವಾರ ಸಂಜೆ ಉಕ್ರೇನ್ ತಂಡವನ್ನು ಎದುರಿಸಲಿದೆ. ಈಚೆಗೆ ಅಜರ್‌ಬೈಜಾನ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 4-0 ಅಂತರದ ಭರ್ಜರಿ ಗೆಲುವನ್ನು ಧ್ಯಾನಚಂದ್ ಮೈದಾನದಲ್ಲಿ ತಂಡವು ಗಳಿಸಿತ್ತು.

ತಂಡಗಳು
ಭಾರತ: ಅಸುಂತಾ ಲಕ್ರಾ (ನಾಯಕಿ), ಕಿರಣದೀಪ್ ಕೌರ್ (ಉಪನಾಯಕಿ), ಅನುರಾಧಾದೇವಿ ತೋಕಾಚಮ್,  ಯೋಗಿತಾ ಬಾಲಿ (ಗೋಲ್‌ಕೀಪರ್),  ರಿತುರಾಣಿ, ಪೂನಂ ರಾಣಿ, ಸುಭದ್ರಾ ಪ್ರದಾನ್, ವಂದನಾ ಕಟಾರಿಯಾ, ದೀಪಿಕಾ, ಜಸ್ಜೀತ್‌ಕೌರ್ ಹಂಡಾ, ಮುಕ್ತಾ ಪರ್ವ ಬರ್ಲಾ, ಸೌಂದರ್ಯಾ ಯೆಂಡಲಾ, ಜಸ್‌ಪ್ರೀತ್ ಕೌರ್, ಜಾಯದೀಪ್‌ಕೌರ್, ಸುಶೀಲಾ ಚಾನು, ರಾಣಿ, ರೋಸಲೀನ್ ಡುಂಗ್‌ಡುಂಗ್.
ಉಕ್ರೇನ್: ಮರೀನಾ ಯನೊರ್‌ಡೋವಾ (ನಾಯಕಿ), ತೆತೆನ್ಯಾ ಸ್ಟೆಫಾನೆಕೋ (ಗೋಲ್‌ಕೀಪರ್), ಯಾನಾ ವೊರುಶೈಲೊ, ಒಲೇನಾ ಫ್ರಿಟ್ಚ್, ಯವಹೆನಿಯಾ ಮೊರೋಜ್, ಬೊಹದಾನಾ ಸೆಡೋವಾ, ನತಾಲಿಯಾ ವಾಸುಕೋವಾ, ಮರೀನಾ ಕಿಲ್ಕೋ, ಹೆಲೇನಾ ಹೆಲೆನೆಂಕೋ, ತೆತೆನ್ಯಾ ಸಲೆಂಕೋ, ಅಲ್ವಿನಾ ಬುಡೊನ್ನಾ (ಗೋಲ್‌ಕೀಪರ್), ಯಾನಾ ಸಿತಾಲೋ, ಕೆಟರಿನಾ ಕೊಮೆಂಕೋ.
ಪಂದ್ಯದ ಸಮಯ: ಸಂಜೆ 6ರಿಂದ
ನೇರಪ್ರಸಾರ: ಟೆನ್ ಸ್ಪೋರ್ಟ್ಸ್.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT