ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಭಾಶಯ ರವಾನೆಗೆ `ಡೊಕೊಮೊ ಪೋಸ್ಟ್'

Last Updated 25 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೆಂಗಳೂರು: ಕ್ರಿಸ್‌ಮಸ್, ಹೊಸ ವರ್ಷ, ಸಂಕ್ರಾಂತಿ ಮತ್ತು ಯುಗಾದಿ ಹಬ್ಬಗಳ ಸಂದರ್ಭ ಬಂಧು-ಮಿತ್ರರಿಗೆ ಮೊಬೈಲ್ ಫೋನ್ ಮೂಲಕ ಭಿನ್ನ ರೀತಿಯಲ್ಲಿ ಶುಭಾಶಯ ಕೋರಲು `ಡೊಕೊಮೊ ಪೋಸ್ಟ್' ಎಂಬ ಗ್ರೀಟಿಂಗ್ ಅಪ್ಲಿಕೇಷನ್ ಅನ್ನು `ಟಾಟಾ ಟೆಲಿಸರ್ವಿಸಸ್' ಅಭಿವೃದ್ಧಿಪಡಿಸಿದೆ.

ಗ್ರಾಹಕರ ಅಗತ್ಯ, ವಿವಿಧ ಸಂದರ್ಭಗಳಿಗೆ ಹೊಂದಿಕೊಳ್ಳುವಂತಹ ಅಪ್ಲಿಕೇಷನ್ ಪರಿಚಯಿಸಿದ್ದೇವೆ. ಗ್ರಾಹಕರು ತಮ್ಮದೇ ಧ್ವನಿಯಲ್ಲಿ ಶುಭಾಶಯ ಸಂದೇಶ ದಾಖಲಿಸಿ ಪ್ರೀತಿಪಾತ್ರರಿಗೆ ರವಾನಿಸಲು ಈ ಅಪ್ಲಿಕೇಷನ್‌ನಲ್ಲಿ ಅವಕಾಶವಿದೆ ಎಂದು `ಟಾಟಾ ಡೊಕೊಮೊ' ಸಂಸ್ಥೆ `ವಿಎಎಸ್' ವಿಭಾಗದ ಮುಖ್ಯಸ್ಥ ರಿಷಿಮೋಹನ್ ಮಲ್ಹೋತ್ರ ಸುದ್ದಿಗಾರರಿಗೆ ತಿಳಿಸಿದರು.

ಆಂಡ್ರಾಯ್ಡ, ಬ್ಲ್ಯಾಕ್‌ಬೆರ‌್ರಿ ಮತ್ತು ಜೆ2ಎಂಇ ಆಪರೇಟಿಂಗ್ ಸಿಸ್ಟಂ ಮೊಬೈಲ್‌ಗಳಿಗೆ `ಡೊಕೊಮೊ ಪೋಸ್ಟ್' ಸೂಕ್ತವಾಗಿದೆ. ಕಂಪೆನಿಯ ವೆಬ್‌ಸೈಟ್‌ನಿಂದ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿ ಕೊಳ್ಳಬಹುದು. ವೀಡಿಯೊ ಗ್ರೀಟಿಂಗ್, ರೂ. 5ಕ್ಕೆ ಕ್ಕೇ 100 ಮಂದಿಗೆ ಶುಭಾಶಯ, ಮಿತಿಯಿಲ್ಲದಷ್ಟು ಸಂದೇಶ ರವಾನೆಗೆ ಇದರಲ್ಲಿ ಅವಕಾಶವಿದೆ ಎಂದು ಅವರ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT