ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೂಟಿಂಗ್: ಜೂನಿಯರ್ ತಂಡಕ್ಕೆ ರಾಣಾ ಕೋಚ್

Last Updated 16 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಏಷ್ಯನ್ ಕ್ರೀಡಾಕೂಟದ ಪದಕ ವಿಜೇತ ಶೂಟರ್ ಜಸ್ಪಾಲ್ ರಾಣಾ ಅವರನ್ನು ಭಾರತ ರಾಷ್ಟ್ರೀಯ ರೈಫಲ್ ಸಂಸ್ಥೆಯು (ಎನ್‌ಆರ್‌ಎಐ) ಜೂನಿಯರ್ ಪಿಸ್ತೂಲ್ ತಂಡಕ್ಕೆ ಮುಖ್ಯ ಕೋಚ್ ಆಗಿ ನೇಮಕ ಮಾಡಿದೆ.

ರಾಣಾ ಪ್ರತಿ ತಿಂಗಳು 50 ಸಾವಿರ ರೂಪಾಯಿ ವೇತನ ಪಡೆಯಲಿದ್ದಾರೆ ಎಂದು ಎನ್‌ಆರ್‌ಎಐ ಸಲಹೆಗಾರ ಬಲ್ಜೀತ್ ಸಿಂಗ್ ಸೇಠಿ ಹೇಳಿದ್ದಾರೆ.

`ಇಂತಿಷ್ಟು ಅವಧಿ ಎಂದು ನಾವು ಕಾಲ ಮಿತಿ ವಿಧಿಸಿಲ್ಲ. ಆದರೆ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುವ ಶೂಟರ್‌ಗಳ ಪ್ರದರ್ಶನ ಮಟ್ಟವನ್ನು ಪರಿಶೀಲಿಸುತ್ತಿರುತ್ತೇವೆ~ ಎಂದು ಸೇಠಿ ಸ್ಪಷ್ಟಪಡಿಸಿದ್ದಾರೆ.

ಭಾರತ ಕ್ರೀಡಾ ಪ್ರಾಧಿಕಾರದೊಂದಿಗೆ  (ಎಸ್‌ಎಐ) ಶನಿವಾರ ಸಭೆ ನಡೆಯಲಿದ್ದು, ಈ ನೇಮಕದ ಬಗ್ಗೆ ಚರ್ಚೆ ನಡೆಸಲಿದ್ದೇವೆ ಎಂದು ಎನ್‌ಆರ್‌ಎಐನ ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.

36 ವರ್ಷ ವಯಸ್ಸಿನ ಜಸ್ಪಾಲ್ 2006ರ ದೋಹಾ ಏಷ್ಯನ್ ಕ್ರೀಡಾಕೂಟದಲ್ಲಿ ಮೂರು ಚಿನ್ನದ ಪದಕ ಜಯಿಸಿದ್ದರು.   `ಇದೊಂದು ಸವಾಲಿನ ಜವಾಬ್ದಾರಿ. ಉತ್ತಮ ಫಲಿತಾಂಶಕ್ಕೆ ಕಾರಣವಾಗುವ ವಿಶ್ವಾಸ ನನ್ನದು~ ಎಂದು ರಾಣಾ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT