ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೂನ್ಯಕೃಷಿ ಸಾಧನೆಯ ಸಾಗರೋಲ್ಲಂಘನ!

Last Updated 5 ನವೆಂಬರ್ 2011, 7:50 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಶೂನ್ಯ ಕೃಷಿ ಮಾದರಿಯಲ್ಲಿ ಬೆಳೆದಿರುವ ತೋಟಗಾರಿಕೆ ಬೆಳೆ ಬಗ್ಗೆ ಏಷ್ಯಾ ಖಂಡದ ವಿವಿಧ ದೇಶಗಳ ಪ್ರಗತಿಪರ ರೈತರು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲ್ಲೂಕಿನ ದೊಡ್ಡಿಂದುವಾಡಿ ಬಳಿ ಶೂನ್ಯ ಕೃಷಿ ಸಂಶೋಧಕ ಕೈಲಾಸ್‌ಮೂರ್ತಿ ಅವರ ತೋಟಕ್ಕೆ ಶುಕ್ರವಾರ ಏಷ್ಯಾ ಖಂಡದ ವಯಾ ಲಾವಿಯಾ ಕಾಪ್‌ಸಿನಾ ವಿಶ್ವ ಪ್ರಗತಿಪರ ಸಂಸ್ಥೆಯ ರೈತರ ತಂಡ ಭೇಟಿ ನೀಡಿ, ಬೆಳೆ ವೀಕ್ಷಿಸಿ ಸಂಭ್ರಮಪಟ್ಟಿತು.

ದಕ್ಷಿಣ ಕೊರಿಯಾ, ಬಾಂಗ್ಲಾದೇಶ, ಜಪಾನ್, ಇಂಡೋನೇಷ್ಯಾ, ಮಲೇಷಿಯಾ, ಪಿಲಿಪ್ಪೀನ್ಸ್, ಶ್ರೀಲಂಕಾ, ಆಸ್ತ್ರಿಯಾ, ಕಾಂಬೋಡಿಯಾ ಸೇರಿದಂತೆ 20ಕ್ಕೂ ಹೆಚ್ಚು ದೇಶಗಳ ಪ್ರಗತಿಪರ ರೈತರು ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಕೆ ಮಾಡದೇ ಬೆಳೆಬೆಳೆಯುವ ಬಗ್ಗೆ ಅರಿವು ಪಡೆದುಕೊಳ್ಳಲು ಆಗಮಿಸಿದ್ದರು. ಇಲ್ಲಿ ನಡೆದ ವಿಶೇಷ ಸಂವಾದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

1998ರಲ್ಲಿ ಶೂನ್ಯ ಕೃಷಿಗೆ ತಮ್ಮನ್ನು ತೊಡಗಿಸಿಕೊಂಡ ತಜ್ಞರೈತ ಕೈಲಾಸ್‌ಮೂರ್ತಿ ಅವರು, ವಿದೇಶಿ ಹಾಗೂ ಇತರೆ ರೈತರಿಗೆ ಸಮಗ್ರ ಮಾಹಿತಿ ನೀಡಿದರು.

ತೋಟದ ಎಲ್ಲೆಡೆ ಬೆಳೆದ ಹತ್ತಾರು ಬೆಳೆಗಳನ್ನು ಖುದ್ದಾಗಿ ವೀಕ್ಷಿಸಿದ ರೈತರ ತಂಡ, ಪ್ರತಿಯೊಂದು ಬೆಳೆಯ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡರು. ಯಾವುದೇ ಕೀಟನಾಶಕ, ರಸಗೊಬ್ಬರ ಬಳಸದೇ ಸ್ವಾದಭರಿತ ಬೆಳೆ ಬೆಳೆದಿರುವ ಕೈಲಾಸ್ ಮೂರ್ತಿ ಅವರ ಕೃಷಿ ಸಾಧನೆ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು.

ಅರಣ್ಯ ಹೋಲುವ ಕೈಲಾಸ್‌ಮೂರ್ತಿ ಅವರ ತೋಟದಲ್ಲಿ, ವಿವಿಧ ತೋಟಗಾರಿಕೆ ಮತ್ತು ಕೃಷಿ ಬೆಳೆಗಳು ಫಲವತ್ತಾಗಿ ಬೆಳೆದಿವೆ. ಈ ಎಲ್ಲದರ ಮಾಹಿತಿಯನ್ನು ಕೈಲಾಸ್‌ಮೂರ್ತಿ ವಿದೇಶಿ ರೈತರಿಗೆ ನೀಡಿದರು.

ಈ ಸಂದರ್ಭದಲ್ಲಿ ಗೌರಿ.ಎಲ್. ಪೀಟರ್ ರೊಸೆಕ್, ಲಿಲೋಸಿ, ಡ್ಯಾನಿಯಲ್ ಸೇರಿದಂತೆ ಸ್ಥಳೀಯ ರೈತ ಮುಖಂಡರುಗಳಾದ ಭ್ರಮರಾಂಭ, ಮಹೇಶ್‌ಕುಮಾರ್, ರೇಚಣ್ಣ, ಶಿವಣ್ಣ, ಚೆನ್ನಬಸವಣ್ಣ, ವಿಷಕಂಠೇಗೌಡ, ಮಾಜಿ ತಾ.ಪಂ. ಸದಸ್ಯ ದೊಡ್ಡಿಂದುವಾಡಿ ಶಿವಲಿಂಗ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT