ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೃಂಗಾರ ಭಾವ ಲೋಕ

Last Updated 19 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಖ್ಯಾತ ಕಲಾವಿದರಾದ ಹರಿ ಶ್ರೀನಿವಾಸ್ ಅವರ ಅಪರೂಪದ ಚಿತ್ರ ಕಲಾಕೃತಿಗಳು ಶನಿವಾರದ ವರೆಗೆ ಪ್ರದರ್ಶನಗೊಳ್ಳಲಿವೆ.

ಭಾರತದ ಮಣ್ಣಿನಲ್ಲಿ ಅಧ್ಯಾತ್ಮದ ಸೆಲೆಯಿದೆ. ಇಲ್ಲಿನ ಜನರು ಆತ್ಮ, ಪರಮಾತ್ಮ, ಮೋಕ್ಷ ಎಂಬುದೆಲ್ಲವನ್ನು ಬಹುವಾಗಿ ನಂಬುತ್ತಾರೆ. ಜನ ಮಾನಸದಲ್ಲಿ ಸ್ಥಾಯಿಯಾಗಿರುವ ಈ ಅಧ್ಯಾತ್ಮದ ಪರಿಕಲ್ಪನೆಯನ್ನು ಇವರು ದೃಶ್ಯ ರೂಪಕ್ಕೆ ಇಳಿಸಿದ್ದಾರೆ. ಇದರ ಜತೆಗೆ ಹೆಣ್ಣಿನ ಅಂತರಂಗದಲ್ಲಿ ನಡೆಯುವ ತುಮುಲಗಳು, ನಿಸರ್ಗದ ಸಹಜ ಚೆಲುವನ್ನು ಸಹ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. 

ಬುದ್ಧ ಬೋಧಿಸಿದ ಸಾರವೆಲ್ಲವೂ ಇವರ ಕಲಾಕೃತಿಗಳಲ್ಲಿ ಪಡಿಯಚ್ಚುಗೊಂಡಿದೆ. ಮನುಷ್ಯ ತನ್ನೊಳಗಿರುವ `ಅಹಂ~ ಬಿಟ್ಟು ಅದರಾಚೆಗೆ ತೆರೆದುಕೊಂಡಾಗ ಮಾತ್ರ ಅವನೊಳಗಿರುವ ಆತ್ಮ , ಪರಮಾತ್ಮನನ್ನು ಸಂಧಿಸಲು ಸಾಧ್ಯ.  ಪ್ರಶಾಂತ ವಾತಾವರಣದಲ್ಲಿ ಕುಳಿತು ಮನಸ್ಸನ್ನು ಧ್ಯಾನದಲ್ಲಿ ಕೇಂದ್ರೀಕರಿಸಿ ಆತ್ಮನ ಮೂಲಕ ಪರಮಾತ್ಮನನ್ನು ಕಾಣಬಹುದು ಎಂಬುದನ್ನು ಇವರ ಕಲಾಕೃತಿಗಳು ಸೂಚಿಸುತ್ತವೆ.

ಸಮುದ್ರದ ತೀರದಲ್ಲಿ ನಿಂತು ವಾರಾಂತ್ಯವನ್ನು ಸಂತಸದಿಂದ ಕಳೆಯುತ್ತಿರುವ ಕುಟುಂಬದ ಚಿತ್ರಣ ಅವರ ಜೀವನೋತ್ಸಾಹವನ್ನು ಬಿಂಬಿಸಿದರೆ, ಲೌಕಿಕ ವ್ಯಾಪಾರಕ್ಕೆ ಬೆನ್ನು ತೋರಿಸಿ, ದಿಗಂತಕ್ಕೆ ದೃಷ್ಟಿನೆಟ್ಟು ಪ್ರಕೃತಿಯ ಸೌಂದರ್ಯವನ್ನು ಆಹ್ವಾದಿಸುತ್ತಿರುವ ಮಕ್ಕಳ ವರ್ತನೆ ಅವರಲ್ಲಿ ಅಡಗಿರುವ ಮುಗ್ಧ ಮನೋಭಾವವನ್ನು ಸ್ಫುರಿಸುತ್ತವೆ.

ಸುಖದ ಸ್ವಪ್ನಸಾಗರದಲ್ಲಿ ತೇಲುತ್ತಿರುವ ಹೆಣ್ಣು ಒಂದೆಡೆಯಾದರೆ, ಆ ಕ್ಷಣದಲ್ಲಿ ಆಕೆಯ ಮನಸ್ಸಿನಲ್ಲಿ ಎದ್ದಿರುವ ಅನುರಾಗದ ಅಲೆಗಳೆಲ್ಲವನ್ನು ಸಾದೃಶ್ಯವಾಗಿ ಮುಖದಲ್ಲಿ ನಿಚ್ಚಳವಾಗಿ ತಾಧ್ಯಾತ್ಮಗೊಳಿಸಿರುವುದು ನೋಡುಗರಲ್ಲಿ ಬೆರಗು ಹುಟ್ಟಿಸುವಂತಿದೆ.

ಯೌವನ ತುಂಬಿ ತುಳುಕುತ್ತಿರುವ ಹೆಣ್ಣೊಬ್ಬಳು ತನ್ನ ಬೆತ್ತಲೆ ದೇಹವನ್ನು ಆಸ್ವಾದಿಸುತ್ತಿರುವ ಚಿತ್ರಣ, ಪಲ್ಲಂಗದ ಮೇಲೆ ಕುಳಿತು ಇನಿಯನ ಆಗಮನಕ್ಕೆ ಕಾಯುತ್ತಿರುವ ಹೆಣ್ಣಿನ ವಿರಹದ ಕಲಾಕೃತಿಗಳು ಕಲಾವಿದನಲ್ಲಿರುವ ಶೃಂಗಾರ ರಸಭಾವಕ್ಕೆ ಕನ್ನಡಿ ಹಿಡಿದಿವೆ, ಮನಸ್ಸಿನಲ್ಲಿ ಕಚಗುಳಿ ಇಡುತ್ತವೆ. ಅಪರೂಪವೆನಿಸುವಂತಹ ಈ ಮಾದರಿಯ ಹಲವು ಕಲಾಕೃತಿಗಳು ಇಲ್ಲಿ ಪ್ರದರ್ಶನಗೊಂಡಿವೆ.

ಸ್ಥಳ: ದಿ ಆರ್ಟ್ ಕಾರಿಡಾರ್, ಹೋಟೆಲ್ ತಾಜ್ ವೆಸ್ಟ್‌ಎಂಡ್, ರೇಸ್‌ಕೋರ್ಸ್ ರಸ್ತೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT